ಗುರುವಾರ , ಜೂನ್ 17, 2021
28 °C

ಕಜ್ಮಿ ನಿರ್ದೋಷಿ: ಪತ್ರಕರ್ತರ ಪ್ರತಿಪಾದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಇಸ್ರೇಲ್ ರಾಯಭಾರಿ ಕಾರು ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿರುವ ಹವ್ಯಾಸಿ ಪತ್ರಕರ್ತ ಸೈಯ್ಯದ್ ಮೊಹಮ್ಮದ್ ಕಜ್ಮಿ ನಿರಪರಾಧಿ ಎಂದಿರುವ ಕುಟುಂಬದವರು ಹಾಗೂ ಸ್ನೇಹಿತರು, ಕಜ್ಮಿ ಅವರಿಗೆ ಪೊಲೀಸರು ಮಾನಸಿಕ ಯಾತನೆ ನೀಡುತ್ತಿದ್ದಾರೆ~ ಎಂದು ದೂರಿದ್ದಾರೆ.ಕಜ್ಮಿ ಅವರ ಇಬ್ಬರು ಪುತ್ರರೊಂದಿಗೆ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ದೆಹಲಿ ಪತ್ರಕರ್ತರ ಸಂಘವು, ಈ ಪ್ರಕರಣದಲ್ಲಿ ನ್ಯಾಯಸಮ್ಮತ ಹಾಗೂ ಪಾರದರ್ಶಕ ತನಿಖೆ ನಡೆಯಬೇಕೆಂದು ಆಗ್ರಹಿಸಿದೆ.

`ನನ್ನ ಅಪ್ಪ ನಿರಪರಾಧಿ. ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಇರಾಕ್ ಯುದ್ಧದ ವರದಿ ಮಾಡಿದ್ದ ಅವರು ರಾಷ್ಟ್ರೀಯ ನಾಯಕ. ಪೊಲೀಸರು ಅವರಿಗೆ ಮಾನಸಿಕ ಯಾತನೆ ನೀಡುತ್ತಿದ್ದಾರೆ~ ಎಂದು ಅಜ್ಮಿ ಪುತ್ರ ಶಾಜಾಬ್ ಆರೋಪಿಸಿದರು.`ದೆಹಲಿ ಪೊಲೀಸ್ ವಿಶೇಷ ಘಟಕವು ನಮ್ಮಿಬ್ಬರಿಂದ ಬಲವಂತವಾಗಿ ಬಂಧನ ವಾರೆಂಟ್‌ಗೆ ಸಹಿ ಹಾಕಿಸಿಕೊಂಡಿದೆ. ಇದೀಗ ತನಿಖೆಗಾಗಿ ಸಂಬಂಧಿಕರನ್ನೆಲ್ಲ ಕರೆಸಿಕೊಳ್ಳುತ್ತಿದೆ~ ಎಂದೂ ಅವರು ದೂರಿದರು.

ನಿರಪರಾಧಿ ಕಜ್ಮಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವುದಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಪಾಂಡೆ ಹೇಳಿದರು.`ನಾವು ಕಜ್ಮಿ ಬಂಧನವನ್ನು ವಿರೋಧಿಸುತ್ತೇವೆ. ಪತ್ರಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಇದೊಂದು ಉದಾಹರಣೆ~ ಎಂದು ದೂರಿದರು.ನಮ್ಮ ಮನೆಯಲ್ಲಿ ಯಾವತ್ತೂ ಇರಾನ್ ಪ್ರಜೆಗಳು ಉಳಿದುಕೊಂಡಿಲ್ಲ. ಪೊಲೀಸರು ವಶಪಡಿಸಿಕೊಂಡ ಸ್ಕೂಟಿ ಎರಡು ವರ್ಷಗಳಿಂದ ನಮ್ಮ ಮನೆಯಲ್ಲಿ ದೂಳು ತಿನ್ನುತ್ತಿತ್ತು. ಈ ಹಿಂದೆ ಮೀರತ್‌ನ ಚಿಕ್ಕಪ್ಪ ಇದನ್ನು ಬಳಸುತ್ತಿದ್ದರು~ ಎಂದು ಶಾಬಾಜ್ ಹೇಳಿದರು.`ಗುರುವಾರ ನಾನು ಅಪ್ಪನನ್ನು ಭೇಟಿಯಾಗಿದ್ದೆ. ಅಲ್ಲಿ 8-10 ಪೊಲೀಸ್ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿ ಅವರಿಗೆ ಮಾನಸಿಕ ಚಿತ್ರಹಿಂಸೆ ಕೊಡುತ್ತಿದ್ದರು~ ಎಂದು ತಂದೆಯ ಅವಸ್ಥೆಯನ್ನು ನೆನೆದು ಕಣ್ಣೀರು ಸುರಿಸಿದರು.

ಸಣ್ಣ ಗಲಾಟೆ: ಸುದ್ದಿಗೋಷ್ಠಿ ಸ್ಥಳದಲ್ಲಿ ಕೆಲವು ಪತ್ರಕರ್ತರು ಹಾಗೂ ವ್ಯಕ್ತಿಯೊಬ್ಬನ ನಡುವೆ ಸಣ್ಣ ಗಲಾಟೆ ನಡೆಯಿತು. ಈ ವ್ಯಕ್ತಿಯು ಪೊಲೀಸ್ ಇರಬಹುದು ಎಂಬ ಶಂಕೆಯಿಂದ ಕೆಲವು ಪತ್ರಕರ್ತರು ಆತನನ್ನು ಕೆಲ ಸಮಯ ತಡೆದಿದ್ದರು.ಫೆ.13ರಂದು ನಡೆದ ಸ್ಫೋಟವು ಅಂತರ ರಾಷ್ಟ್ರೀಯ ಭಯೋತ್ಪಾದನಾ ಪ್ರಕರಣ ಎಂದಿದ್ದ ದೆಹಲಿ ಪೊಲೀಸರು, ಇಸ್ರೇಲ್ ರಾಯಭಾರ ಕಚೇರಿ ಪತ್ತೇದಾರಿಕೆಯಲ್ಲಿ ದಾಳಿಕೋರನಿಗೆ ನೆರವು ನೀಡಿದ ಆರೋಪದಲ್ಲಿ ಕಜ್ಮಿ ಅವರನ್ನು ಬಂಧಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.