ಕಡಪಟ್ಟಿಗೆ ಉತ್ತಮ ಪ್ರಾಚಾರ್ಯ ಪ್ರಶಸ್ತಿ

ಶನಿವಾರ, ಮೇ 25, 2019
22 °C

ಕಡಪಟ್ಟಿಗೆ ಉತ್ತಮ ಪ್ರಾಚಾರ್ಯ ಪ್ರಶಸ್ತಿ

Published:
Updated:

ಹನುಮಸಾಗರ: ಸಮೀಪದ ದೋಟಿಹಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಶಿವಾನಂದ ಎನ್.ಕಡಪಟ್ಟಿಯವರಿಗೆ ಭಾನುವಾರ ಹಾಸನದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ ವತಿಯಿಂದ ಉತ್ತಮ ಪ್ರಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಜಿಲ್ಲಾ ಸಾಹಿತ್ಯ ಪರಿಷತ್ ಬಳಗ ಹಾಗೂ ಕರ್ನಾಟಕ ಶಿಕ್ಷಕರ ವಿಕಾಸ ಪರಿಷತ್ ಸಹಯೋಗದಲ್ಲಿ ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಿದೆ.ಬೆಂಗಳೂರಿನ ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್‌ನಿಂದ ಜಿಲ್ಲೆಗೊಬ್ಬರಿಗಂತೆ ಕೊಡಮಾಡುವ ಈ ಪ್ರಶಸ್ತಿಗೆ ಕಡಪಟ್ಟಿಯವರ ಉತ್ತಮ ಸೇವೆ, ಆಡಳಿತ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವುದೇ ಈ ಪ್ರಶಸ್ತಿಗೆ ಆಯ್ಕೆಯಾಗಲು ಕಾರಣವಾಗಿದೆ.ಸಾನಿದ್ಯವಹಿಸಿದ್ದ ಬೆಂಗಳೂರಿನ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ಶ್ರೀಗಳು, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಪಟೇಲ ಶಿವರಾಮ ಈ ಪ್ರಶಸ್ತಿ ನೀಡಿದರು.ಉತ್ತಮ ಪ್ರಾಚಾರ್ಯ ಪ್ರಶಸ್ತಿ ಪಡೆದಿರುವ ಕಡಪಟ್ಟಿಯವರನ್ನು ದೋಟಿಹಾಳ ಪದವಿಪೂರ್ವ ಕಾಲೇಜಿನ ಎಸ್‌ಡಿಎಂಸಿ ಅಧ್ಯಕ್ಷ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಗುರಪ್ಪ ಕುರಿ, ವಿ.ಬಿ.ರಡ್ಡೇರ,  ರಮೇಶಗೌಡ ಪಾಟೀಲ ಸೇರಿದಂತೆ ಪ್ರಾಥಮಿಕ, ಪ್ರೌಢ ಶಾಲೆಗಳ ಶಿಕ್ಷಕರ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು, ಅಪಾರ ಅಭಿಮಾನಿಗಳು ಅಭಿನಂದಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry