ಕಡಿಮೆಮೈಲೇಜ್: ಗಂಗೂಲಿಗೆ ಪೀಕಲಾಟ!

7

ಕಡಿಮೆಮೈಲೇಜ್: ಗಂಗೂಲಿಗೆ ಪೀಕಲಾಟ!

Published:
Updated:

ರಾಜ್‌ಕೋಟ್ (ಪಿಟಿಐ): ಕೋಲ್ಕತ್ತ ಮೂಲದ ದ್ವಿಚಕ್ರವಾಹನ ತಯಾರಿಕಾ ಕಂಪೆನಿಯ ಮೋಟಾರ್ ಸೈಕಲ್‌ಗಳು ಪ್ರಮಾಣೀಕರಿಸಿದ ಮೈಲೇಜ್ ನೀಡುತ್ತಿಲ್ಲದ ಕಾರಣ ಇದೇ ಕಂಪೆನಿಯ ಪ್ರಚಾರ ರಾಯಭಾರಿಯಾದ ಸೌರವ್ ಗಂಗೂಲಿ ಹಾಗೂ ಏಳುಮಂದಿ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ.ಇಲ್ಲಿನ ರಾಮಜಿ ಮಖ್ವಾನಾ ಅವರು ಥೊರಾಲಾ ಪೊಲೀಸ್ ಠಾಣೆಯಲ್ಲಿ ಗಂಗೂಲಿ, ವಿಬ್‌ಗ್ಯಾಯೊರ್ ಮೋಟಾರ್ ಸೈಕಲ್ ಕಂಪೆನಿಯ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ರಾಜ ಭದ್ರ, ಉಪಾಧ್ಯಕ್ಷ ಮರ್ಜೆನ್ ಬ್ಯಾನರ್ಜಿ ಹಾಗೂ ಇನ್ನಿತರರ ವಿರುದ್ಧ ದೂರು ನೀಡಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಗುಣಮಟ್ಟ ಹಾಗೂ ಪ್ರಮಾಣೀಕರಿಸಿದ ಮೈಲೇಜ್ ನೀಡದ ಉತ್ಪಾದನೆಯ ಪ್ರಚಾರದ ಕರಪತ್ರದಲ್ಲಿ ಭಾರತ ತಂಡದ ಮಾಜಿ ನಾಯಕ ಸೌರವ್ ಅವರ ಚಿತ್ರ ಹಾಗೂ ಇದೇ ಉತ್ಪಾದನೆಯನ್ನು ಕೊಳ್ಳುವಂಥ ಸಾಲುಗಳು ಇವೆ.ಆ ಕರಪತ್ರದಲ್ಲಿನ ವಿವರ ಹಾಗೂ ಗಂಗೂಲಿ ಪ್ರಚಾರ ರಾಯಭಾರಿಯಾಗಿದ್ದಾರೆ ಎನ್ನುವ ವಿಶ್ವಾಸದೊಂದಿಗೆ ಮೋಟಾರ್ ಸೈಕಲ್ ಕೊಂಡು ಮೋಸ ಹೋಗಿರುವುದಾಗಿ ಮಖ್ವಾನಾ ದೂರಿನಲ್ಲಿ ವಿವರಿಸಿದ್ದಾರೆ. ಲೀಟರ್‌ಗೆ 117 ಕಿ.ಮೀ. ಮೈಲೇಜ್ ನೀಡುತ್ತದೆಂದು ಗಂಗೂಲಿ ಚಿತ್ರವಿದ್ದ ಕರಪತ್ರದಲ್ಲಿ ತಿಳಿಸಲಾಗಿತ್ತು. ಆದರೆ ನಿಜವಾಗಿ ಈ ಮೋಟಾರ್ ಸೈಕಲ್ ನೀಡುತ್ತಿರುವ ಮೈಲೇಜ್ ಲೀಟರ್‌ಗೆ 60 ಕಿ.ಮೀ. ಮಾತ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry