ಮಡಿಕೇರಿ: ಮಡಿಕೇರಿ, ಭಾಗಮಂಡಲ, ನಾಪೋಕ್ಲು ಹಾಗೂ ಸಂಪಾಜೆ ಹೊರತು ಪಡಿಸಿದಂತೆ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಮಳೆಯ ಆರ್ಭಟ ತುಸು ಕಡಿಮೆಯಾಗಿದೆ.

ಕಳೆದ ಹಲವು ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಮಳೆರಾಯನ ಆರ್ಭಟದಿಂದಾಗಿ ಮೊಟಕುಗೊಂಡಿದ್ದ ಕೃಷಿ ಚಟುವಟಿಕೆ ಇದೀಗ ಮಳೆ ಇಳಿಮುಖವಾದ್ದರಿಂದ ಭರದಿಂದ ಸಾಗಿದೆ.

ಕುಶಾಲನಗರ, ಸೋಮವಾರಪೇಟೆ, ಕೊಡ್ಲಪೇಟೆ, ಶನಿವಾರಸಂತೆ ಭಾಗಗಳಲ್ಲಿ ಜೋಳ, ಬತ್ತ, ಹೊಗೆ ಸೊಪ್ಪು ಸೇರಿದಂತೆ ಮತ್ತಿತರರ ಬೆಳೆಗಳು ಮೊಳಕೆಯೊಡೆದು ಹಚ್ಚ ಹಸುರಾಗಿ ಬೆಳೆಯುತ್ತಿದೆ.

ವಿರಾಜಪೇಟೆ, ಅಮ್ಮತ್ತಿ, ಸಿದ್ದಾಪುರ, ಶ್ರೀಮಂಗಲ ಸೇರಿದಂತೆ ದಕ್ಷಿಣ ಕೊಡಗಿನ ಭಾಗದಲ್ಲಿ ಮಳೆರಾಯನ ಆರ್ಭಟ ಕಡಿಮೆಯಾಗಿರುವ ಬೆನ್ನಲ್ಲೆ ಕಾಫಿ ತೋಟದಲ್ಲಿ ಕಳೆ ತೆಗೆಯುವ ಕಾರ್ಯ ಸಾಗಿದೆ.

ಜಿಲ್ಲೆಯಲ್ಲಿ ಕೃಷಿ ಕಾರ್ಯ ಬಿರುಸುಗೊಂಡಿರುವ ಹಿನ್ನೆಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಂದಿದ್ದು, ರೈತಾಪಿ ವರ್ಗ ಕೃಷಿ ಕೇಂದ್ರಗಳಿಗೆ ಮುಗಿ ಬೀಳುತ್ತಿರುವುದು ಹೆಚ್ಚಾಗಿದೆ.

ಮಳೆಯ ಅಬ್ಬರದಿಂದಾಗಿ ಸಂತ್ರಸ್ತರಾಗುವ ಭೀತಿಯಿಂದ ಜಿಲ್ಲಾಡಳಿತ ತೆರೆದಿದ್ದ ಗಂಜಿ ಕೇಂದ್ರಗಳಲ್ಲಿ ವಾಸಿಸಲು ಆರಂಭಿಸಿದ್ದ ಜನರು ಮಳೆ ಕಡಿಮೆಯಾ ಗಿರುವುದರಿಂದ ಪುನಃ ತಮ್ಮ ತಮ್ಮ ಮನೆಗಳಿಗೆ ಮರಳಿದ್ದಾರೆ. ಮಡಿಕೇರಿಯಲ್ಲಿ ಸೋಮ ವಾರ ಸಾಧಾರಣ ಮಳೆ ಸುರಿದಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣದೊಂದಿಗೆ ಆರಂಭವಾದ ಮಳೆ ಆಗಾಗ ವಿರಾಮ ನೀಡಿ ಪುನಃ ಸುರಿಯುತ್ತಿತ್ತು.

ಮಳೆಯ ಆರ್ಭಟಕ್ಕೆ ಇದುವರೆಗೂ ಹಾನಿಗೊಳ ಗಾಗಿರುವ ಮನೆ, ಬರೆ ಕುಸಿತ ಸೇರಿದಂತೆ ಜಖಂ ಗೊಂಡಿರುವ ಹಲವು ಪ್ರದೇಶಗಳಿಗೆ ಶಾಸಕ ಅಪ್ಪಚ್ಚು ರಂಜನ್ ಅಧಿಕಾರಗಳೊಂದಿಗೆ ತೆರಳಿ ವಸ್ತು ಸ್ಥಿತಿ ಪರಿಶೀಲಿಸಿದರು.

ಮಳೆ ಹಾನಿ: ಅಮ್ಮತ್ತಿ ಹೋಬಳಿಯ ಬಾಡಗದ ಬಾಣಂಗಾಲ ಗ್ರಾಮದ ಮಲ್ಲಿಗೆ ಎಂಬುವವರ ಮನೆ ಹಾನಿ ಉಂಟಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಜಿಲ್ಲೆಯ ಮಳೆ ವಿವರ:
ಕೊಡಗು ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ 14.87 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 7.41 ಮಿ.ಮೀ. ಮಳೆ ದಾಖಲಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1327.58 ಮಿ.ಮೀ. ಮಳೆ ಸುರಿದಿದೆ.

ಮಡಿಕೇರಿ ತಾಲ್ಲೂಕಿನಲ್ಲಿ 34.65 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 15.65 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1986.39 ಮಿ.ಮೀ. ಮಳೆಯಾಗಿದೆ.

ವೀರಾಜಪೇಟೆ ತಾಲ್ಲೂಕಿನಲ್ಲಿ 3.17 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 2.57 ಮಿ.ಮೀ. ಮಳೆ ಬಿದ್ದಿತ್ತು. ಜನವರಿಯಿಂದ ಇಲ್ಲಿಯವರೆಗೆ 972.5 ಮಿ.ಮೀ. ಮಳೆ ದಾಖಲಾಗಿದೆ.

ಸೋಮವಾರಪೇಟೆ ತಾಲ್ಲೂಕಿನಲ್ಲಿ 6.8ಮಿ.ಮೀ. ಮಳೆ ದಾಖಲಾಗಿದೆ.
ಕಳೆದ ವರ್ಷ ಇದೇ ದಿನ 4 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯ ವರೆಗೆ 1023.87 ಮಿ.ಮೀ. ಮಳೆ ದಾಖಲಾಗಿದೆ.

ಹೋಬಳಿವಾರು ಮಳೆ ವಿವರ:
ಮಡಿಕೇರಿ ಕಸಬಾ 26.2 ಮಿ.ಮೀ., ನಾಪೋಕ್ಲು 20.2 ಮಿ.ಮೀ., ಸಂಪಾಜೆ 55 ಮಿ.ಮೀ., ಭಾಗಮಂಡಲ 37.2 ಮಿ.ಮೀ., ವೀರಾಜಪೇಟೆ ಕಸಬಾ 4.2 ಮಿ.ಮೀ., ಹುದಿಕೇರಿ 3.8 ಮಿ.ಮೀ., ಶ್ರಿಮಂಗಲ 2 ಮಿ.ಮೀ., ಪೊನ್ನಂಪೇಟೆ 2 ಮಿ.ಮೀ., ಅಮ್ಮತ್ತಿ 5 ಮಿ.ಮೀ., ಬಾಳಲೆ 2 ಮಿ.ಮೀ., ಸೋಮ ವಾರಪೇಟೆ ಕಸಬಾ 8 ಮಿ.ಮೀ., ಶನಿವಾರಸಂತೆ 1.2 ಮಿ.ಮೀ., ಶಾಂತಳ್ಳಿ 12.6 ಮಿ.ಮೀ., ಕೊಡ್ಲಿಪೇಟೆ 8 ಮಿ.ಮೀ., ಕುಶಾಲನಗರ 3 ಮಿ.ಮೀ., ಸುಂಟಿಕೊಪ್ಪ 8 ಮಿ.ಮೀ. ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ:
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2855.28 ಅಡಿಗಳು, ಕಳೆದ ವರ್ಷ ಇದೇ ದಿನ 2820.68ಅಡಿ ನೀರು ಸಂಗ್ರಹವಾಗಿತ್ತು.

ಹಾರಂಗಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಸೋಮವಾರ 8.2 ಮಿ.ಮೀ. ಮಳೆ ಸುರಿದಿದೆ. ಜಲಾಶಯಕ್ಕೆ ಇಂದಿನ ನೀರಿನ ಒಳ ಹರಿವು 8992 ಕ್ಯೂಸೆಕ್ ಆಗಿದೆ.

ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 663 ಕ್ಯೂಸೆಕ್ ಆಗಿತ್ತು. ಇಂದಿನ ನೀರಿನ ಹೊರ ಹರಿವು ನದಿಗೆ 8038 ಕ್ಯೂಸೆಕ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.