ಶುಕ್ರವಾರ, ಏಪ್ರಿಲ್ 16, 2021
31 °C

ಕಡಿಮೆ ಖರ್ಚು, ಹೆಚ್ಚು ಆದಾಯದ ರೇಷ್ಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನುಮಸಾಗರ: ಬೇಸಿಗೆ, ಮಳೆಗಾಲ ಹಾಗೂ ಚಳಿಗಾಲದಲ್ಲಿ ಬೆಳೆಯುವುದಕ್ಕೆ ಸೈ ಎನಿಸಿಕೊಂಡ ರೇಷ್ಮೆ ಬೆಳೆ ಎಂತಹ ಕಾಲದಲ್ಲೂ ರೈತನ ಕೈಹಿಡಿಯುವ ಬೆಳೆ ಎನಿಸಕೊಂಡಿದೆ ಎಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಚಂದಪ್ಪ ತಳವಾರ ಹೇಳಿದರು.ಸಮೀಪದ ಮಾವಿನಇಟಗಿ ಗ್ರಾಮದ ಗಂಗೂಬಾಯಿ ಜೋಷಿಯವರ ಹಿಪ್ಪೆನೇರಳೆ ತೋಟದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೇಷ್ಮೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ಕಡಿಮೆ ಭೂಮಿ ಹಾಗೂ ಕಡಿಮೆ ಖರ್ಚಿನಲ್ಲಿ ಅಧಿಕ ಪ್ರಮಾಣದ ಇಳುವರಿ ಪಡೆದು ಲಾಭದಾಯಕವೆನಿಸುವ ಬೆಳೆ ಇದಾಗಿದ್ದು ರೈತರು ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಬೆಳೆಯಲು ಮುಂದೆ ಬರಬೇಕು ಎಂದು ಅವರು ಹೇಳಿದರು.ರೇಷ್ಮೆ ಬೆಳೆಯ ಸಂಶೋಧಕ ಡಾ. ವೈ.ಎನ್.ಸನತಕುಮಾರ ಮಾತನಾಡಿದರು. ರೇಷ್ಮೆ ಕೃಷಿ ಅಧಿಕಾರಿ ಬಿ.ಆರ್.ಗೌಡರ ರೈತರಿಗೆ ರೇಷ್ಮೆ ಬೆಳೆಯುವ ಕ್ರಮ, ನಾಟಿ ವಿಧಾನ, ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿದರು.

ಯರಗೇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಪ್ಪ ತೆಳಗಡೆ ಕಾರ್ಯಕ್ರಮ ಉದ್ಘಾಟಿಸಿದರು.ರೇಷ್ಮೆ ಕೃಷಿ ಅಧಿಕಾರಿಗಳಾದ ಸಿ.ಎಚ್.ಮುದಗಲ್, ರೈತ ಮಹಿಳೆ ಗಂಗೂಬಾಯಿ ಜೋಷಿ,   ತಾಲ್ಲೂಕು ಪಂಚಾಯಿತಿ ಸದಸ್ಯ ಯಲ್ಲಪ್ಪ ಯರಗೇರಿ, ಗ್ರಾಮ ಪಂಚಾಯಿತಿ ಸದಸ್ಯೆ ಹುಲಿಗೆಮ್ಮ ಗೊಲ್ಲರ, ರೇಷ್ಮೆ ಪ್ರದರ್ಶಕ ಎಸ್.ಬಿ.ಗಣಾಚಾರಿ ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.