ಗದಗ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಅನುದಾನ ದುರ್ಬಳಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಣಗಿನಹಾಳ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಸದಸ್ಯತ್ವ ರದ್ದುಗೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಜಿ.ತುರಮರಿ ತಿಳಿಸಿದರು.

ಜಿಲ್ಲಾಡಳಿತ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಜಾಗೃತ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಉದ್ಯೋಗ ಖಾತ್ರಿಯ ಹಣ ದುರ್ಬಳಕೆ ಮಾಡಿಕೊಂಡಿರುವ ಕುರಿತು ಗದಗ ತಾಲ್ಲೂಕಿನ ಕಣಗಿನಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಶಿಂಸಾಬ್ ಕೆರಳ್ಳಿ ಮತ್ತು ಬೆಳಧಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಒ ವಿರುದ್ಧ ದೂರು ಬಂದಿತ್ತು.

ತನಿಖೆಯಿಂದ ಅವ್ಯಹಾರ ನಡೆದಿರುವುದು ಸಾಬೀತಾಗಿದೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಕಣಗಿನಹಾಳ ಗ್ರಾ. ಪಂ ಸದಸ್ಯ ಕೆರಳ್ಳಿ ಅವರ ಸದಸ್ಯತ್ವ ರದ್ದುಗೊಳಿಸಲಾಗಿದೆ. ಬೆಳಧಡಿ ಗ್ರಾ. ಪಂ. ಅಧ್ಯಕ್ಷ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾ ರಿಗೆ ಮೂರು ನೋಟಿಸ್ ನೀಡಲಾಗಿದೆ. ದುರ್ಬಳಕೆಯಾಗಿರುವ ಹಣವನ್ನು ಪಾವತಿಸದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಳ್ಳ ಲಾಗುವುದು ಎಂದು ವಿವರಿಸಿದರು.

2010-11 ಮತ್ತು 12ನೇ ಸಾಲಿನ ಉದ್ಯೋಗ ಖಾತ್ರಿಯಲ್ಲಿ ಹಣ ಬಾಕಿ ಉಳಿಸಿಕೊಂಡಿಲ್ಲ. 12-13ನೇ ಸಾಲಿ ನಲ್ಲಿ ಸ್ವಲ್ಪ ಹಣ ಬಾಕಿ ಇದೆ. ಕಳೆದ ವರ್ಷ ಬಿಡುಗಡೆಯಾದ ರೂ. 39.61 ಕೋಟಿ ಅನುದಾನದಲ್ಲಿ ರೂ. 36.96 ಕೋಟಿ ಖರ್ಚು ಮಾಡಲಾಗಿದೆ. 2013-14ನೇ ಸಾಲಿನಲ್ಲಿ ರೂ. 49 ಕೋಟಿ ವೆಚ್ಚದ 2696 ಕಾಮಗಾರಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಉಮೇಶ ಹೇಳಿದರು.

ಜಿಲ್ಲೆಯಲ್ಲಿ ಸಮುದಾಯ ಶೌಚಾ ಲಯಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ. ಅದಕ್ಕೆ ಠೇವಣಿ ಸಹ ಇಡುತ್ತಿದ್ದಾರೆ. ಆದರೆ ಜಾಗ, ನೀರು, ನಿರ್ವಹಣೆ ಸಮಸ್ಯೆಯಿಂದ ಮಂಜೂರು ಮಾಡಲು ಆಗುತ್ತಿಲ್ಲ ಎಂದು ಸಿಇಒ ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು. ಶೌಚಾ ಲಯ ನಿರ್ಮಿಸಿಕೊಳ್ಳಲು ರೂ. 9,200 ನೀಡಲಾಗುತ್ತಿದೆ. ಇದಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಾರ್ವ ಜನಿಕರ ಸಹಕಾರ ಅಗತ್ಯ ಎಂದರು.

ಇಂದಿರಾ ಆವಾಸ ಯೋಜನೆಯಲ್ಲಿ ಮುಂಜೂರಾದ ಮನೆಗಳನ್ನು ಫಲಾನುಭವಿಗಳು ನಿಗದಿತ ಅವಧಿಯೊಳಗೆ ಪ್ರಾರಂಭಿಸದ ಕಾರಣ ಕೆಲ ಮನೆಗಳು ರದ್ದುಗೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ದಿನೇಶ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿ ಸಿದ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿ ಗೌಡರ, ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಇರುವುದಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಮೂಲಕ ಅರಿವು ಮೂಡಿಸಬೇಕು. ಷರತ್ತು, ನಿಬಂಧನೆ, ಎಷ್ಟು ಹಣ ಖರ್ಚು ಮಾಡಿದರೆ ಸಬ್ಸಿಡಿ ದೊರೆಯ ಲಿದೆ ಎಂಬ ಮಾಹಿತಿ ತಿಳಿಸಬೇಕು. ಇಲ್ಲದಿದ್ದರೆ ಯೋಜನೆ ವಿಫಲಗೊಳ್ಳಲಿದೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

ರಾಜ್ಯಕ್ಕೆ ಶುದ್ಧ ನೀರು ಪೂರೈಸಲು ಹೊರಟಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ತವರು ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶುದ್ಧ ನೀರು ಇದೆಯೇ ಎಂದು ಸಂಸದ ಉದಾಸಿ ಅವರು, ಡಿಡಿಪಿಐ ರಾಜೀವ ನಾಯಕ ಅವರನ್ನು ಪ್ರಶ್ನಿಸಿದರು. 616 ಪ್ರಾಥಮಿಕ ಮತ್ತು 108 ಪ್ರೌಢ ಶಾಲೆಗಳ ಪೈಕಿ ಶೇಕಡಾ 3 ಹೊರತು ಪಡಿಸಿ ಕುಡಿಯುವ ನೀರಿನ ಸೌಲಭ್ಯ ಇದೆ ಉತ್ತರಿಸಿದರು.

ಯಾರನ್ನು ಉದ್ದೇಶಿಸಿ ಈ ಮಾತು ಹೇಳುತ್ತಿಲ್ಲ ಎಂದ ಉದಾಸಿ, ಎಲ್ಲರಿಗೂ ಕುಡಿಯುವ ನೀರು ದೊರಕಬೇಕು. ಆದ್ದರಿಂದ ಶಾಲೆಗಳಿಗೆ ಭೇಟಿ ನೀಡಿ ಸಮಸ್ಯೆ ಇರುವ ಕಡೆ ಬಗೆಹರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ 1106 ಅಂಗನವಾಡಿಗಳ ಪೈಕಿ 743 ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪರಮೇಶ್ವರಪ್ಪ ತಿಳಿಸಿದರು.

ಜಿಲ್ಲೆಯಲ್ಲಿನ ಎಸ್ಸಿ, ಎಸ್ಟಿ ಫಲಾನುಭವಿಗಳು, ಪಡೆದಿರುವ ಸಾಲ, ಭೂಮಿ ಮತ್ತು ಪಡೆದಿರುವ ಸೌಲಭ್ಯ ಗಳ ವರದಿ ಸಲ್ಲಿಸುವಂತೆ ಎಲ್ಲ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿ ವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾ ಗಿದೆ ಎಂದು ಸಿಇಒ ತುರಮರಿ ಅವರು ಸಂಸದರಿಗೆ ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಟಿ. ಅಂಜನಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎಸ್. ಪಾಟೀಲ, ಉಪಾ ಧ್ಯಕ್ಷ ರಮೇಶ ಮುಂದಿನಮನಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.