ಬೆಳಗಾವಿ: ನಿತ್ಯದ ಅಡುಗೆ ಅಗತ್ಯ ಇರುವ ಉಳ್ಳಾಗಡ್ಡಿಯ ಬೆಲೆ ಗಗನ ಮುಟ್ಟಿರುವುದರಿಂದ ಗ್ರಾಹಕರಲ್ಲಿ `ಕಣ್ಣೀರು' ಹೆಚ್ಚೆಚ್ಚು ಬರುತ್ತಿದೆ. ಅದರಲ್ಲೂ ವಿಶೇಷವಾಗಿ ಇದು ಹೋಟೆಲ್ಗಳ ಮಾಲೀಕರ ಕಣ್ಣನ್ನು ಇದು ಕೆಂಪಗಾಗಿಸಿದೆ.

ಕಳೆದ ವರ್ಷ ಮಳೆ ಸರಿಯಾಗಿ ಆಗದೇ ಇರುವುದರಿಂದ ಉಳ್ಳಾಗಡ್ಡಿ ಬೆಳೆಯ ಕಣಜ ಎಂದೇ ಪ್ರಸಿದ್ಧವಾಗಿರುವ ಮಹಾರಾಷ್ಟ್ರದ `ನಗರ' ಹಾಗೂ `ನಾಸಿಕ್' ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆ ಕಡಿಮೆಯಾಗಿದೆ. ಬೆಳಗಾವಿ ಮಾರುಕಟ್ಟೆಗೆ ಉತ್ಕೃಷ್ಟ ಗುಣಮಟ್ಟ ಇರುವ ನಗರ ಹಾಗೂ ನಾಸಿಕ್ನ ಉಳ್ಳಾಗಡಿಯೇ ಹೆಚ್ಚು ಬರುತ್ತಿದ್ದವು. ಆದರೆ, ಈ ವರ್ಷ ಬೆಳೆ ಕಡಿಮೆಯಾಗಿರುವುದರಿಂದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಭಾರಿ ಕಡಿಮೆ ಪ್ರಮಾಣದಲ್ಲಿ ಉಳ್ಳಾಗಡ್ಡಿ ಬರುತ್ತಿದೆ. ಹೀಗಾಗಿ ಇದರ ಬೆಲೆ ಈಗ ಏಕಾಏಕಿ ಗಗನಕ್ಕೆ ಏರಿದೆ.

ಸಗಟು (ಹೋಲ್ಸೇಲ್) ಮಾರುಕಟ್ಟೆಯಲ್ಲಿ ನಗರ ಹಾಗೂ ನಾಸಿಕ್ನ ಏ-1 ಗ್ರೇಡ್ನ ಉಳ್ಳಾಗಡ್ಡಿ ಪ್ರತಿ ಕೆ.ಜಿ.ಗೆ 18 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ರೂ. 25ರ ವರೆಗೂ ಗ್ರಾಹಕರು ಹಣ ನೀಡಬೇಕಾಗುತ್ತಿದೆ. ಇದರಿಂದಾಗಿ ಗೃಹಿಣಿಯರು ಅಡುಗೆಗಾಗಿ ಉಳ್ಳಾಗಡ್ಡಿ ಕೊಚ್ಚಿದಾಗ, ಈಗ ಹೆಚ್ಚಿನ ಪ್ರಮಾಣದಲ್ಲಿ ಕಣ್ಣೀರು ಸುರಿಸುವಂತಾಗಿದೆ.

ಇಂದೂರ್ ಉಳ್ಳಾಗಡ್ಡಿ ಲಗ್ಗೆ
ಏಕಾಏಕಿ ಬೆಲೆ ಏರುತ್ತಿದ್ದಂತೆ ಇಲ್ಲಿನ ಮಾರುಕಟ್ಟೆಗೆ ಮಧ್ಯಪ್ರದೇಶದ ಇಂದೂರ್ನ ಉಳ್ಳಾಗಡ್ಡೆ ಲಗ್ಗೆ ಇಟ್ಟಿದೆ. ಇಂದೂರ್ನ ಮಾಲು ಮಾರುಕಟ್ಟೆಗೆ ಬರದೇ ಇದ್ದರೆ, ಸಗಟು ಮಾರುಕಟ್ಟೆಯಲ್ಲೇ ಉಳ್ಳಾಗಡ್ಡೆಯ ಬೆಲೆ 25 ರೂಪಾಯಿವರೆಗೆ ತಲುಪುವ ಸಾಧ್ಯತೆ ಇತ್ತು. ಇಂದೂರ್ನಿಂದ ಹೆಚ್ಚಿನ ಪ್ರಮಾಣದಲ್ಲಿ ಮಾಲು ಬಂದಿದ್ದವು. ಆದರೆ, ಈಗ ಬೆಲೆಯಲ್ಲಿ ಸ್ಥಿರತೆ ಬಂದಿರುವುದರಿಂದ ಸ್ವಲ್ಪ ಕಡಿಮೆ ಮಾಲು ಅಲ್ಲಿಂದ ಬರುತ್ತಿದೆ. ನಾಸಿಕ್ನ ಉಳ್ಳಾಗಡ್ಡೆ ಹೆಚ್ಚು ದಿನಗಳ ಕಾಲ ಬಾಳಿಕೆ ಬರುತ್ತದೆ. ಇಂದೂರ್ ಉಳ್ಳಾಗಡ್ಡಿ ಬಹುಬೇಗ ಕೊಳೆಯಲು ಶುರುವಾಗುತ್ತದೆ' ಎನ್ನುತ್ತಾರೆ ವ್ಯಾಪಾರಿಯೊಬ್ಬರು.

`ಬೆಳಗಾವಿಯ ಎಪಿಎಂಸಿ ಮಾರುಕಟ್ಟೆಗೆ ನಗರ- ನಾಸಿಕ್ನಿಂದಲೇ ಗೆ ಹೆಚ್ಚಿನ ಪ್ರಮಾಣದಲ್ಲಿ ಉಳ್ಳಾಗಡ್ಡೆ ತರಿಸಲಾಗುತ್ತದೆ. ವಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನಿಂದಲೂ ಸ್ವಲ್ಪ ಪ್ರಮಾಣದಲ್ಲಿ ಮಾಲು ಬರುತ್ತದೆ. ನಗರ- ನಾಸಿಕ್ನ ಎ-1 ಗ್ರೇಡ್ ಉಳ್ಳಾಗಡ್ಡಿ ಪ್ರತಿ ಕೆ.ಜಿ.ಗೆ 15ರಿಂದ 18 ರೂಪಾಯಿ ವರೆಗೆ ಮಾರಾಟವಾಗುತ್ತಿದೆ. ಇಂದೂರ್ನ ಉಳ್ಳಾಗಡ್ಡಿಗೆ 14ರಿಂದ 16 ರೂಪಾಯಿವರೆಗೆ ಮತ್ತು ಬಸವನಬಾಗೇವಾಡಿಯದ್ದು 11ರಿಂದ 14 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಬಸವನಬಾಗೇವಾಡಿಯ ಬಿಳಿ ಉಳ್ಳಾಗಡ್ಡಿಯು 18ರಿಂದ 22 ರೂಪಾಯಿವರೆಗೆ ಧಾರಣೆಯಾಗುತ್ತಿದೆ' ಎಂದು ಜ್ಯೋತಿ ಟ್ರೇಡರ್ಸ್ನ ರಾಜು ಕಾಕತಿ `ಪ್ರಜಾವಾಣಿ'ಗೆ ತಿಳಿಸಿದರು.

`ಕಳೆದ ವಾರದವರೆಗೂ ದಿನವೊಂದಕ್ಕೆ 10 ಟನ್ ಸಾಮರ್ಥ್ಯದ 60ರಿಂದ 70 ಲಾರಿಗಳಲ್ಲಿ ಉಳ್ಳಾಗಡ್ಡಿ ಇಲ್ಲಿಗೆ ಬರುತ್ತಿದ್ದವು. ಆದರೆ, ಈಗ ಕೇವಲ 30ರಿಂದ 40 ಲೋಡ್ ಮಾತ್ರ ಬರುತ್ತಿದೆ. ಮೇ ತಿಂಗಳಿನಲ್ಲಿ ಪ್ರತಿ ಕೆ.ಜಿ.ಗೆ 11 ರೂಪಾಯಿವರೆಗೆ ಧಾರಣೆಯಾಗಿತ್ತು.

ಮಾಲು ಕಡಿಮೆ ಬರುತ್ತಿರುವುದರಿಂದ ಏಕಾಏಕಿ ದುಬಾರಿಯಾಗಿದೆ' ಎಂದು ರಾಜು ಕಾಕತಿ ಮಾಹಿತಿ ನೀಡಿದರು.

ಬೆಳಗಾವಿಗೆ ಬರುವ ಉಳ್ಳಾಗಡ್ಡಿಯಲ್ಲಿ ಶೇ. 80ರಷ್ಟು ಗೋವಾದ ಹೋಟೆಲ್ಗಳಿಗೆ ಹೋಗುತ್ತಿದೆ. ಉಳಿದವು ಬೆಳಗಾವಿ, ಬೈಲಹೊಂಗಲ, ಖಾನಾಪುರ, ಗೋಕಾಕ, ಚಿಕ್ಕೋಡಿ ತಾಲ್ಲೂಕುಗಳಿಗೆ ಹೆಚ್ಚು ರವಾನೆಯಾಗುತ್ತದೆ.

`ತರಕಾರಿ ಬೆಲೆ ದಿನೇ ದಿನೇ ಹೆಚ್ಚುತ್ತಿವೆ. ಇದರ ಜೊತೆಗೆ ಈಗ ಉಳ್ಳಾಗಡ್ಡೆಯ ಬೆಲೆಯೂ ಏಕಾಏಕಿ ಹೆಚ್ಚಿರುವುದು ನಮಗೆ `ಗಾಯದ ಮೇಲೆ ಬರೆ' ಎಳೆದಂತಾಗಿದೆ. ಗ್ರಾಹಕರಿಗೆ `ಸಲಾಡ್' ನೀಡುವುದೇ ಕಷ್ಟವಾಗುತ್ತಿದೆ' ಎಂದು ನಗರದ ಮೆಸ್ಸೊಂದರ ಮಾಲೀಕ ಮಹಾವೀರ ವಿಷಾದಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.