ಬುಧವಾರ, ಜನವರಿ 29, 2020
24 °C
ಪಂಚರಂಗಿ

ಕತ್ರಿನಾಗೆ ಕರೀನಾ ಅತ್ತಿಗೆಯೆಂದದ್ದು ಬರೀ ತಮಾಷೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಣಬೀರ್‌ ಕಪೂರ್‌ ಮದುವೆಯಲ್ಲಿ ‘ಶೀಲಾ ಕಿ ಜವಾನಿ’, ‘ಚಿಖ್ನಿ ಚಮೇಲಿ’ ಮುಂತಾದ ಕತ್ರೀನಾ ಕೈಫ್‌ ಹೆಜ್ಜೆ ಹಾಕಿದ ಐಟಂ ನೃತ್ಯಗಳನ್ನೇ ಮಾಡುವುದಾಗಿ ಟೀವಿ ಶೋ ಒಂದರಲ್ಲಿ ಕರೀನಾ ಕಪೂರ್ ಖಾನ್ ಹೇಳಿದ್ದಾರೆ.ಕತ್ರಿನಾ ಕೈಫ್‌ ಭಾಬಿ ಆಗಲಿರುವವಳು ಎಂದೂ ಹೇಳಿರುವ ಕರೀನಾ, ತಾವು ನೃತ್ಯ ಮಾಡಲು ರಣಬೀರ್‌ ಬಲುಬೇಗ ಅವಕಾಶ ನೀಡಲಿ ಎಂದೂ ಹಾರೈಸಿದರು.ರಣಬೀರ್‌– ಕತ್ರಿನಾ ಮದುವೆಗೆ ಮನೆಯವರು ಒಪ್ಪಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ ದೊರೆಯುವ ಮುನ್ನವೇ ಕರಣ್‌ ಜೋಹರ್‌ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಕರೀನಾಳ ಈ ಮಾತು ಮತ್ತೆ ಬಿ– ಟೌನ್‌ನಲ್ಲಿ ಕತ್ರಿನಾ ಮದುವೆಯ ಬಗ್ಗೆ ಗುಸುಗುಸು ಹುಟ್ಟಿಸಿದೆ.‘ಧೂಮ್‌ 3’ ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ಕತ್ರಿನಾ ಅವರನ್ನು ಈ ಬಗ್ಗೆ ಪ್ರಶ್ನಿಸಿದರೆ, ‘ಈ ಪ್ರಶ್ನೆ ನನ್ನನ್ನು ಇಬ್ಬಂದಿಯಲ್ಲಿ ಸಿಲುಕುವಂತೆ ಮಾಡಿದೆ. ಅಂಥ ಯಾವ ತೀರ್ಮಾನವೂ ಆಗಿಲ್ಲ. ಕರೀನಾ ನನ್ನ ಸ್ನೇಹಿತೆ. ರಣಬೀರ್‌ಗೆ ನಿಕಟ ಸಂಬಂಧಿ. ಅಕ್ಕ–ತಮ್ಮನ ಸಲುಗೆಯಲ್ಲಿ ಇಬ್ಬರೂ ಹೀಗೆ ‘ಕಾಲೆಳೆಯವುದು’ ಇದ್ದೇ ಇದೆ.ಕರೀನಾ ಹಾಗೆ ತಮಾಷೆಗೆ ಹೇಳಿರಬೇಕು ಅಷ್ಟೆ. ಈ ಶೋಗೆ ಮುಂಚೆ ಕರಣ್‌ ಜೋಹರ್‌ ಒಮ್ಮೆ ಡಿನ್ನರ್‌ಗೂ ಆಹ್ವಾನಿಸಿದ್ದರು. ಆಗಲೇ ಕರೀನಾ ಈ ಬಗ್ಗೆ ನನ್ನನ್ನು ಕೇಳಿದ್ದರು. ನಿಮ್ಮಿಬ್ಬರ ಮದುವೆಯ ವಿಷಯವಾಗಿ ಮಾತಾಡಬಹುದೇ ಎಂದು! ಸಲುಗೆಯಿಂದ ತಮಾಷೆಗಾಗಿ ಹೇಳಿರುವ ಮಾತದು. ಗಂಭೀರವಾಗಿ ತೆಗೆದುಕೊಳ್ಳುವಂಥ ಯಾವುದೇ ತೀರ್ಮಾನ ಇನ್ನೂ ಆಗಿಲ್ಲ. ಇನ್ನು ಈ ಬಗ್ಗೆ ಹೆಚ್ಚು ಹೇಳಲಾರೆ’ ಎಂದು ಚರ್ಚೆಗೆ ಸದ್ಯಕ್ಕೆ ತೆರೆ ಎಳೆದಿದ್ದಾರೆ ಕತ್ರಿನಾ ಕೈಫ್‌.

ಪ್ರತಿಕ್ರಿಯಿಸಿ (+)