ಗುರುವಾರ , ಜೂನ್ 24, 2021
21 °C
ವಿಚ್ಛೇದನ ಸಮರ್ಥಿಸಿದ ಬಾಂಬೆ ಹೈಕೋರ್ಟ್‌

ಕದಿಯುವ ಚಾಳಿಯ ಪತ್ನಿಯಿಂದ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ‘ಪತ್ನಿಗೆ ಮನೆ­ಯಿಂದ ಹಣ ಕದಿಯುವ ಚಾಳಿ ಇದೆ. ಅಲ್ಲದೇ ತನ್ನ ಸಹೋದ್ಯೋಗಿಯ ಡೆಬಿಟ್‌ ಕಾರ್ಡ್‌ ದುರ್ಬಳಕೆ ಮಾಡಿ­ಕೊಂಡ ಪ್ರಕ­ರಣದಲ್ಲಿ ಬಂಧನಕ್ಕೊಳ­ಗಾಗಿದ್ದಳು. ಈ ರೀತಿ ಮಾನಸಿಕ ಕಿರುಕುಳ ನೀಡುವ ಪತ್ನಿಯ ಜತೆ ಬದುಕುವುದಕ್ಕೆ ಸಾಧ್ಯವಿಲ್ಲ’ ಎಂಬ ಕಾರಣ ನೀಡಿ ವ್ಯಕ್ತಿ­ಯೊಬ್ಬ ಪಡೆದು­­ಕೊಂಡ ವಿಚ್ಛೇದನವನ್ನು ಬಾಂಬೆ ಹೈಕೋರ್ಟ್‌  ಸಮರ್ಥಿಸಿದೆ.ಈ ಜೋಡಿ ಮದುವೆಯಾಗಿದ್ದು 1991. ಇವರಿಗೆ ಒಬ್ಬ ಮಗ ಕೂಡ ಇದ್ದಾನೆ. 2008ರಲ್ಲಿ ಪತಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದ.

‘ನನ್ನ ಪತ್ನಿ ಸುಳ್ಳು ಹೇಳುತ್ತಾಳೆ. ನಮ್ಮ ಮನೆಯ ರೀತಿ--– ರಿವಾಜು ಪಾಲಿಸುತ್ತಿಲ್ಲ.  ಅನೇಕ ಬಾರಿ ನನ್ನ ದುಡ್ಡು ಕದ್ದಿದ್ದಾಳೆ. ನಕಲಿ ಸಹಿ ಮಾಡಿ ಬೇರೆಯವರ ಬ್ಯಾಂಕ್‌ ಖಾತೆಯಿಂದ ಹಣ ತೆಗೆದು­ಕೊಂಡಿದ್ದಾಳೆ. ಸಹೋ­ದ್ಯೋ­ಗಿಯ ಡೆಬಿಟ್‌್ ಕಾರ್ಡ್‌್ ದುರ್ಬ­ಳಕೆ ಮಾಡಿ­ಕೊಂಡ ಪ್ರಕರಣದಲ್ಲಿ ಬಂಧನಕ್ಕೂ ಒಳಗಾಗಿದ್ದಳು’ ಎಂದು ದೂರಿದ್ದ.ಸಾಕ್ಷಿಗಳಿಂದ ಹೇಳಿಕೆ ಪಡೆದು­ಕೊಂಡ ಬಳಿಕ ಕೌಟುಂಬಿಕ ನ್ಯಾಯಾ­ಲ­ಯವು ಈ ವ್ಯಕ್ತಿಯ ಪರವಾಗಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಪತ್ನಿ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ­ಯನ್ನು ಸಲ್ಲಿಸಿದ್ದಳು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯ­­ಮೂರ್ತಿಗಳಾದ ವಿ.ಎಲ್‌.­ಅಚಿಲ್ಯಾ ಹಾಗೂ ವಿಜಯಾ ತಹಿಲ್‌­ರಮಣಿ ಅವರಿದ್ದ ಪೀಠ, ‘ಗಂಡನ ಹಣ ಕದಿಯುವುದು, ಮತ್ತೊಬ್ಬರ ಡೆಬಿಟ್‌ ಕಾರ್ಡ್‌ ದುರ್ಬಳಕೆ ಮಾಡಿಕೊಳ್ಳು­ವುದು... ಇತ್ಯಾದಿ ವರ್ತನೆಗಳನ್ನು ಗಮ­ನಿಸಿದರೆ ಈ ಮಹಿಳೆ ತನ್ನ ಗಂಡನಿಗೆ ಮಾನ­ಸಿಕ ಕಿರುಕುಳ ನೀಡು­ತ್ತಿದ್ದಳು ಎನ್ನು­ವುದು ಖಾತ್ರಿ­ಯಾಗು­ತ್ತದೆ’ ಎಂದು ಹೇಳಿತು. ಪತ್ನಿ ಸಲ್ಲಿಸಿದ್ದ ಮೇಲ್ಮನವಿ­ಯನ್ನು ವಜಾ ಮಾಡಿ, ಕೌಟುಂಬಿಕ ನ್ಯಾಯಾ­ಲಯ ನೀಡಿದ್ದ ತೀರ್ಪನ್ನು ಸಮರ್ಥಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.