ಮಂಗಳವಾರ, ಏಪ್ರಿಲ್ 13, 2021
32 °C

ಕನ್ನಡದ ಕಂಪು ಹೆಚ್ಚಿಸಿದ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಕನ್ನಡ ಸಮ್ಮೇಳನಗಳಿಂದ ಕನ್ನಡ, ಕರ್ನಾಟಕಕ್ಕೆ ನಿಶ್ಚಿತವಾಗಿಯೂ ಲಾಭವಿದೆ. ಬೆಳಗಾವಿ ಮತ್ತು ಇತರ ಗಡಿ ಭಾಗಗಳಲ್ಲಿ ಸಮ್ಮೇಳನಕ್ಕೆ ಮುಂಚೆಯೇ ‘ಕನ್ನಡದ ಕಂಪು’ ಶೇ 40-50 ರಷ್ಟು ಹೆಚ್ಚಳವಾಗಿರುವುದನ್ನು ಎಲ್ಲರೂ ಕಾಣಲಿಕ್ಕೆ ಹತ್ತಿದ್ದಾರೆ. ವಿಶ್ವ ಕನ್ನಡ ಸಮ್ಮೇಳನಗಳನ್ನು ನಿರ್ದಿಷ್ಟ ಅವಧಿಯಲ್ಲಿ, ಚುನಾವಣೆಗಳಂತೆ, ಯಾವುದೇ ಸರ್ಕಾರ ಅಥವಾ ರಾಜ್ಯಪಾಲ ಆಡಳಿತವಿದ್ದರೂ ನಡೆಸಬೇಕು. ಮೊದಲು ಕರ್ನಾಟಕದಲ್ಲಿ ಗಡಿಭಾಗಗಳಲ್ಲಿ ಅಂದರೆ ಬೀದರ್, ಕಾಸರಗೋಡು, ಸೊಲ್ಲಾಪುರಗಳಲ್ಲಿ ಮಾಡಬೇಕು. ಈ ವಿಶ್ವ ಸಮ್ಮೇಳನದ ವಾದ - ವಿವಾದಗಳು ಎರಡು ತಿಂಗಳು ಮುಂಚೆಯೇ ಮುಗಿಯಬೇಕು, ಅವಶ್ಯವಿದ್ದರೆ ಒಂದು ತಿಂಗಳ ನಂತರ ಸಮ್ಮೇಳನಗಳ ವಿಮರ್ಶೆಯಾಗಲಿ. ಹಾಗೆ ನೋಡಿದರೆ ಕನ್ನಡ ಸಾಹಿತ್ಯ ಸಮ್ಮೇಳನ ಎರಡು ವರ್ಷಕ್ಕೊಮ್ಮೆ ನಡೆದರೂ ಸಾಕು. ವಿಶ್ವ ಕನ್ನಡ  ಸಮ್ಮೇಳನವು ತಪ್ಪದೇ ನಡೆಯಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.