ಸುವರ್ಣ ವಾಹಿನಿಯ ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋನಲ್ಲಿ ಈ ವಾರವಿಡೀ ಕನ್ನಡ ಚಿತ್ರರಂಗದ ನಟ ನಟಿಯರು ಭಾಗವಹಿಸಿದ ಸಂಚಿಕೆಗಳು ಪ್ರಸಾರವಾಗಲಿವೆ. ನಟ ಜಗ್ಗೇಶ್, ನಟಿ ರಮ್ಯೋ ಹಾಗೂ ಬಹುಭಾಷಾ ನಟಿ ಪ್ರಿಯಾಮಣಿ ವಿಶೇಷ ಸಂಚಿಕೆಗಳಲ್ಲಿ ಪಾಲ್ಗೊಂಡಿದ್ದಾರೆ.

ಇಂದು ಪ್ರಸಾರವಾಗಲಿರುವ(ಜೂ.24) ಸಂಚಿಕೆಯಲ್ಲಿ ಮೊದಲ ಸ್ಪರ್ಧಿಯಾಗಿ ಜಗ್ಗೇಶ್ ಕಾಣಿಸಿಕೊಳ್ಳಲಿದ್ದಾರೆ. ಜಗ್ಗೇಶ್ ಗೆದ್ದ ಮೊತ್ತವನ್ನು ಶಿಕ್ಷಣ ಸಂಸ್ಥೆಯೊಂದಕ್ಕೆ ಕೊಡಲಿದ್ದಾರೆ.

ಕನ್ನಡದ ಬೋಲ್ಡ್ ನಟಿ ರಮ್ಯೋ ಜಗ್ಗೇಶ್ ನಂತರದ ಸಂಚಿಕೆಗಳಲ್ಲಿ ಕೋಟಿ ಗೆಲ್ಲುವ ಆಟ ಆಡಲಿದ್ದಾರೆ. ರಮ್ಯಾ ಕೋಟ್ಯಾಧಿಪತಿ ಮೊದಲ ಭಾಗದಲ್ಲೂ ಕಾಣಿಸಿಕೊಂಡಿರುತ್ತಾರೆ. ಅಲ್ಲದೆ ಕಾರ್ಯಕ್ರಮದ ನಡುವೆ ರಾಘವೇಂದ್ರ ರಾಜ್ಕುಮಾರ್ ಜೊತೆ `ನಿಜವ ನುಡಿಯಲೇ ನನ್ನಾಣೆ ನಲ್ಲೆ... ಹಾಡಿಗೆ ರಮ್ಯೋ ನೃತ್ಯ ಮಾಡುರುವುದು ಸಂಚಿಕೆಯ ವಿಶೇಷ.

ರಮ್ಯೋ ಈ ಸರಣಿಯಲ್ಲಿ ಗೆದ್ದ ಹಣವನ್ನು `ವಿಷ್ಣುಪ್ರಿಯೆ' ಎಂಬ ವದ್ಧಾಶ್ರಮಕ್ಕೆ ಚಾರಿಟಿ ನೀಡಲಿದ್ದಾರೆ. ಈ ಸರಣಿ ಇದೇ 26 ರಂದು ಪ್ರಸಾರವಾಗಲಿದೆ. ಪಂಚಭಾಷಾ ತಾರೆ ಪ್ರಿಯಾಮಣಿ ಕೂಡಾ ಭಾಗವಹಿಸಿದ್ದು `ಪರಿಕ್ರಮ ಫೌಂಢೇಷನ್' ಎಂಬ ಅನಾಥಾಶ್ರಮಕ್ಕೆ ಗೆದ್ದ ಮೊತ್ತವನ್ನು ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.