ಮಂಗಳವಾರ, ಏಪ್ರಿಲ್ 20, 2021
27 °C

ಕನ್ನಡನಾಡಿನ ಹೆಮ್ಮೆಯ ಕುವರ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡನಾಡು ಹೆಮ್ಮೆ ಪಡಬೇಕಾದಂತಹ ಹಲವು ಸಂಗತಿಗಳಲ್ಲಿ ಪಂಕಜ್ ಅಡ್ವಾಣಿ ಗೆದ್ದಿರುವ ಬಿಲಿಯರ್ಡ್ಸ್ ವಿಶ್ವಚಾಂಪಿಯನ್‌ಷಿಪ್ ಕೂಡಾ ಒಂದು. ಪಂಕಜ್‌ಗೆ ಇದೀಗ ಕೇವಲ 27ರ ಹರೆಯ. ಆದರೆ ಇವರು ಎಂಟು ಸಲ ಬಿಲಿಯರ್ಡ್ಸ್ ವಿಶ್ವ ಕಿರೀಟ ಗೆದ್ದು ಭಾರತಕ್ಕೆ ತಂದಿದ್ದಾರೆ.ಮೊನ್ನೆ ಮೊನ್ನೆಯಷ್ಟೇ ಪಂಕಜ್ ಇಂಗ್ಲೆಂಡ್‌ನ ಲೀಡ್ಸ್‌ನಲ್ಲಿ ಜಗತ್ತಿನ ಅಗ್ರಮಾನ್ಯ ಆಟಗಾರರಿಗೆಲ್ಲಾ ಮಣ್ಣುಮುಕ್ಕಿಸಿ ವಿಶ್ವ ಪ್ರಶಸ್ತಿ ಗೆದ್ದಿದ್ದು, ಅವರ ಮಟ್ಟಿಗೆ ಮಹತ್ವದ್ದೇ. ಕಳೆದ ಮೂರು ವರ್ಷಗಳಿಂದ ಈ ಟ್ರೋಫಿಯನ್ನು ಮರಳಿ ಪಡೆಯಲು ಇನ್ನಿಲ್ಲದ ಯತ್ನ ನಡೆಸಿದ್ದರು. ಈ ಸಲ ಕೈಗೆಟುಕಿದೆ. ಜತೆಗೆ ತಮ್ಮ ತಾಯಿ ಕಾಜಲ್ ಅವರ ಹುಟ್ಟು ಹಬ್ಬಕ್ಕೆ ಇದು ಉಡುಗೋರೆ ಎಂದೂ ಪಂಕಜ್ ಹೇಳಿದ್ದಾರೆ.ಆದರೆ ಬೆಂಗಳೂರಿನ ಇವರು ಕನ್ನಡ ರಾಜ್ಯೋತ್ಸವ ತಿಂಗಳಲ್ಲೇ ಈ ಸಂಭ್ರಮವನ್ನು ಕನ್ನಡಿಗರೊಂದಿಗೆ ಹಂಚಿಕೊಂಡಿರುವುದೊಂದು ವಿಶೇಷ. ಇವರು ಪುಣೆಯಲ್ಲಿ ಹುಟ್ಟಿದವರಾದರೂ, ಬೆಂಗಳೂರಿನ ಫ್ರಾಂಕ್ ಆಂಟನಿ ಪಬ್ಲಿಕ್ ಸ್ಕೂಲ್, ಮಹಾವೀರ ಜೈನ್ ಕಾಲೇಜುಗಳಲ್ಲಿ ಓದಿದವರು.ಉದ್ಯಾನನಗರಿಯ ಬಿಲಿಯರ್ಡ್ಸ್ ಕ್ಲಬ್‌ನಲ್ಲಿಯೇ ಇವರು ಈ ಆಟದ ಮೊದಲ ಪಾಠಗಳನ್ನು ಕಲಿತ್ತದ್ದು. ಹಿಂದೆ ಕರ್ನಾಟಕದ ಅಗ್ರಮಾನ್ಯ ಆಟಗಾರರಾಗಿದ್ದ ಅರವಿಂದ್ ಸವೂರ್ ಅವರ ಮಾರ್ಗದರ್ಶನದಲ್ಲಿಯೇ ಪಂಕಜ್ ಎತ್ತರದಿಂದ ಎತ್ತರಕ್ಕೇರಿದ್ದಾರೆ.ಸರಿಯಾಗಿ 12 ವರ್ಷಗಳ ಹಿಂದೆ ಭಾರತ ಜೂನಿಯರ್ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಟ್ರೋಫಿ ಎತ್ತಿಕೊಂಡ ಇವರು ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ದೋಹಾ (2006), ಗುವಾಂಗ್ ಜೌ (2010) ಏಷ್ಯನ್ ಕ್ರೀಡಾಕೂಟಗಳಲ್ಲಿ ಚಿನ್ನ ಗೆದ್ದಿದ್ದಾರೆ. ಉನ್ನತ ಕ್ರೀಡಾ ಸಾಧಕರಿಗೆ ಭಾರತ ಸರ್ಕಾರ ನೀಡುವ ಅತ್ಯುನ್ನತ ಗೌರವಗಳಾದ  ರಾಜೀವ್ ಖೇಲ್‌ರತ್ನ, ಅರ್ಜುನ ಪ್ರಶಸ್ತಿಗಳೇ ಅಲ್ಲದೆ ಪದ್ಮಶ್ರೀ ಕೂಡಾ ಇವರಿಗೆ ಲಭಿಸಿದೆ.

----------------

ಚಿತ್ರಶೀರ್ಷಿಕೆ: ತಾಯಿ ಕಾಜಲ್ ಹುಟ್ಟುಹಬ್ಬಕ್ಕೆ ಮಗನ ಉಡುಗೋರೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.