‘ಅಭಿನಯಿಸಬೇಕು ಎಂಬ ಆಸೆಯೇನೋ ಇದೆ. ಆದರೆ ಅಷ್ಟೊಂದು ಅವಕಾಶಗಳು ಸಿಗುತ್ತಿಲ್ಲ. ಬದುಕಿನ ಬಂಡಿ ಮುನ್ನಡೆಸಬೇಕಲ್ಲವೇ? ಹಾಗಾಗಿ ಚಿತ್ರ ನಿರ್ಮಾಣದ ಬೇರೆ ಉದ್ಯೋಗದತ್ತ ಗಮನ ಹರಿಸುತ್ತಿದ್ದೇನೆ’‘

– ಅಭಿನಯದ ಮೇಲಿರುವ ಆಸಕ್ತಿಯನ್ನು ಹೀಗೆ ತೆರೆದಿಡುವ ಪೋಷಕ ನಟ ಕೃಷ್ಣಮೋಹನ್, ಅವಕಾಶಗಳು ಸಿಗದ ಸಮಯದಲ್ಲಿ ಚಿತ್ರ ನಿರ್ಮಾಣದ ಇತರ ಹಲವು ಕೆಲಸಗಳತ್ತ ಗಮನ ಹರಿಸುತ್ತಾರೆ. ಈವರೆಗೆ ಅರವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವ ಅವರದು.

ಕನ್ನಡಕ್ಕಿಂತ ತಮಿಳು ಚಿತ್ರರಂಗದಲ್ಲಿ ಕೃಷ್ಣಮೋಹನ್ ಪರಿಚಿತ ಹೆಸರು. ಹಾಗೆಂದು ಅವರು ತಮಿಳುನಾಡಿನವರೇನಲ್ಲ, ಅಪ್ಪಟ ಕನ್ನಡಿಗರೇ. ಕೃಷ್ಣಮೋಹನ್ ತಂದೆ ಎಚ್. ರಾಮಚಂದ್ರಶಾಸ್ತ್ರಿ ಕನ್ನಡದಲ್ಲಿ ಸುಮಾರು ೨೫೦ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದವರು. ೬೦ ಹಾಗೂ ೭೦ರ ದಶಕಗಳ ಚಿತ್ರಗಳನ್ನೊಮ್ಮೆ ಮೆಲುಕು ಹಾಕಿದರೆ ಸಾಕು; ಅದರಲ್ಲಿ ರಾಮಚಂದ್ರಶಾಸ್ತ್ರಿಗಳಿಗೊಂದು ಖಂಡಿತ ಪಾತ್ರ ಇದ್ದೇ ಇರುತ್ತಿತ್ತು. ಅದರಲ್ಲೂ ಡಾ. ರಾಜ್ಕುಮಾರ್ ಹಾಗೂ ಪುಟ್ಟಣ್ಣ ಕಣಗಾಲ್ ಚಿತ್ರಗಳಲ್ಲಿ ಒಂದು ಪಾತ್ರ ಗ್ಯಾರಂಟಿ.

‘ನಾಗರಹಾವು’ ಸಿನಿಮಾದಲ್ಲಿ ಆರತಿ ತಂದೆ, ‘ಬಂಗಾರದ ಮನುಷ್ಯ’ದಲ್ಲಿ ಭಾರತಿ ತಂದೆ, ‘ಗಂಧದ ಗುಡಿ’ಯಲ್ಲಿ ಅರಣ್ಯ ಕಾವಲುಗಾರ, ‘ಮಯೂರ’ದಲ್ಲಿ ಡಾ. ರಾಜ್ ಅವರ ಸಾಕು ತಂದೆ... ಹೀಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ತಂದೆ ಸಾವನ್ನಪ್ಪಿದ ಬಳಿಕ ಚೆನ್ನೈದಿಂದ ಮೈಸೂರಿಗೆ ಸ್ಥಳಾಂತರಗೊಂಡ ಕೃಷ್ಣಮೋಹನ್, ಅಲ್ಲಿನ ಅಗರಬತ್ತಿ ಫ್ಯಾಕ್ಟರಿಯಲ್ಲಿ ಕೆಲ ಕಾಲ ಕೆಲಸ ಮಾಡಿದರು. ಬಣ್ಣದ ಬದುಕಿನಿಂದ ದೂರವಿರಲು ಸಾಧ್ಯವಾಗಲಿಲ್ಲ. ಹೀಗಾಗಿ ಕೆಲಸಕ್ಕೆ ರಾಜೀನಾಮೆ ನೀಡಿ ಬೆಂಗಳೂರಿಗೆ ಬಂದರು. ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಗದೇ ಹೋದಾಗ, ಇತರ ಕ್ಷೇತ್ರಗಳತ್ತ ಗಮನ ಹರಿಸಲು ನಿರ್ಧರಿಸಿದರು. ತಮಿಳು ಚಿತ್ರರಂಗದ ನಿರ್ದೇಶಕ ಕೆ.ಎಸ್. ರವಿಕುಮಾರ್ ಆಗಷ್ಟೇ ತಮ್ಮ ಮೊದಲ ಚಿತ್ರದ ನಿರ್ದೇಶನಕ್ಕೆ ಸಿದ್ಧತೆ ನಡೆಸಿದ್ದರು. ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೃಷ್ಣಮೋಹನ್ ಸೇರಿಕೊಂಡರು.

‘ಅಲ್ಲಿಂದ ಈವರೆಗೆ ರವಿಕುಮಾರ್ ಅವರ ೨೨ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ನನ್ನ ಕೆಲಸದ ಚಾಕಚಕ್ಯ ಕಂಡು ಇತರ ಸಿನಿಮಾಗಳಲ್ಲೂ ಅವಕಾಶ ಸಿಕ್ಕಿತು. ಈವರೆಗೆ ಸುಮಾರು ೬೦ ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ’ ಎನ್ನುತ್ತಾರೆ ಕೃಷ್ಣಮೋಹನ್.

ಹಾಗೆಂದು ಅವರು ಅಭಿನಯವನ್ನು ಸಂಪೂರ್ಣವಾಗಿ ಬಿಟ್ಟಿಲ್ಲ. ಅವಕಾಶ ಸಿಕ್ಕಿದಾಗಲೆಲ್ಲ ಬಣ್ಣ ಹಚ್ಚಿದ್ದಾರೆ. ‘ಆ್ಯಕ್ಟಿಂಗ್ ಬಿಡುವ ಹಾಗೇ ಇಲ್ಲ! ನನ್ನ ಆಸೆ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಬೇಕೆಂಬುದು’ ಎನ್ನುವ ಅವರು, ರಜನಿಕಾಂತ್ ಅಭಿನಯದ ‘ಪಡೆಯಪ್ಪನ್’ ಚಿತ್ರದಲ್ಲಿ ಶಿವಾಜಿ ಗಣೇಶನ್ ಅಜ್ಜನಾಗಿ ನಟಿಸಿದ್ದಾರೆ. ‘ತಮಿಳುನಾಡಿನಲ್ಲಿ ಜನ ನನ್ನನ್ನು ಈ ಪಾತ್ರದ ಮೂಲಕ ಹೆಚ್ಚು ಗುರುತಿಸುತ್ತಾರೆ’ ಎಂದು ಖುಷಿಯಿಂದ ಹೇಳುತ್ತಾರೆ.

ಕೆ.ಎಸ್.ರವಿಕುಮಾರ್ ಜತೆ ಕೆಲಸ ಮಾಡುತ್ತಿದ್ದಾಗ ಜತೆಯಾಗಿದ್ದ ಪಿ.ಕುಮಾರ್ ಈಗ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಳೆಯ ನಂಟು ಬಿಡಲೊಲ್ಲದ ಪಿ.ಕುಮಾರ್, ತಮ್ಮ ‘ಶ್ರೀಮತಿ ಜಯಲಲಿತಾ’ ಚಿತ್ರದಲ್ಲಿ ಕೃಷ್ಣಮೋಹನ್ಗೆ ಒಳ್ಳೆಯ ಪಾತ್ರ ನೀಡಿದ್ದಾರಂತೆ. ಕಳೆದ ವಾರ ಚಿತ್ರೀಕರಣ ಪೂರ್ಣಗೊಂಡ ‘ಮೃಗಶಿರ’ ಚಿತ್ರದಲ್ಲಿಯೂ ಒಳ್ಳೆಯ ಪಾತ್ರ ಸಿಕ್ಕಿದ ಖುಷಿ ಕೃಷ್ಣಮೋಹನ್ ಅವರದು. ‘ಮೃಗಶಿರ’ದ ನಿರ್ದೇಶಕ ಶ್ರೀವತ್ಸ ಅವರು ತಬಲಾ ನಾಣಿ ಅವರ ಜತೆ ಚರ್ಚೆ ನಡೆಸುತ್ತಿದ್ದಾಗ ಸ್ವಾಮೀಜಿ ಪಾತ್ರವೊಂದಕ್ಕೆ ಹೊಂದಿಕೆಯಾಗುವ ಕಲಾವಿದ ಸಿಗುತ್ತಿಲ್ಲ ಎಂದರಂತೆ. ತಕ್ಷಣವೇ ನಾಣಿ ಸೂಚಿಸಿದ್ದು ಕೃಷ್ಣಮೋಹನ್ ಅವರ ಹೆಸರನ್ನು. ಹಾಗಾಗಿ ಮತ್ತೆ ಕನ್ನಡದ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಸಿನಿಮಾ ಮಾತ್ರವಲ್ಲದೆ ಹಿಂದಿ ಹಾಗೂ ತಮಿಳು ಧಾರಾವಾಹಿಗಳಲ್ಲೂ ಕೃಷ್ಣಮೋಹನ್ ಕೆಲಸ ಮಾಡುತ್ತಿದ್ದಾರೆ. ಆದರೆ ಮನಸ್ಸೆಲ್ಲ ಕನ್ನಡದ ಮೇಲೆಯೇ. ‘‘ನಮ್ಮ ಚಿಕ್ಕಪ್ಪ– ಅಂದರೆ ತಂದೆಯ ತಮ್ಮ ಎಚ್.ಕೃಷ್ಣಶಾಸ್ತ್ರಿಯವರು ಡಾ. ರಾಜ್ಕುಮಾರ್ ಅವರಿಗೆ ಸಂಗೀತ ಕಲಿಸಿಕೊಟ್ಟವರು. ಅನೇಕ ಸಮಾರಂಭಗಳಲ್ಲಿ ಆ ಮಹಾನ್ ನಟ ನಮ್ಮ ಚಿಕ್ಕಪ್ಪನನ್ನು ಸ್ಮರಿಸಿದ್ದಾರೆ. ನಮ್ಮ ತಂದೆಯ ಕೊನೆಯ ತಮ್ಮ ವಿಜಯನಾರಸಿಂಹ ಚಿತ್ರ ಸಾಹಿತಿ. ಹೀಗಾಗಿ ಬಾಲ್ಯದಿಂದಲೂ ಚಿ.ಉದಯಶಂಕರ್, ಡಾ. ರಾಜ್ ಕುಟುಂಬ ಸೇರಿದಂತೆ ಹಲವರು ನನಗೆ ಗೊತ್ತು. ಈಗಲೂ ನಮ್ಮ ತಂದೆ ಹೆಸರು ಹೇಳುತ್ತಿದ್ದಂತೆಯೇ ಚಿತ್ರರಂಗದ ಹಿರಿಯರು ‘ಓಹ್! ರಾಮಚಂದ್ರಶಾಸ್ತ್ರಿಗಳ ಮಗನಾ ನೀನು?’ ಎಂದು ಖುಷಿಯಿಂದ ಅಪ್ಪನನ್ನು ನೆನಪಿಸಿಕೊಳ್ಳುತ್ತಾರೆ‘‘ ಎಂದು ಕೃಷ್ಣಮೋಹನ್ ಹೇಳುತ್ತಾರೆ.

‘ಅಭಿನಯ ನನಗೆ ದಕ್ಕದೇ ಹೋದಾಗ ಬದುಕಿಗಾಗಿ ತಾಂತ್ರಿಕ ಕ್ಷೇತ್ರ ಆಯ್ಕೆ ಮಾಡಿಕೊಂಡೆ. ನನಗೆ ನಿರ್ದೇಶನ ಗೊತ್ತು. ಅದೊಂದು ವಿದ್ಯೆ. ನಟನೆ ಎಂದರೆ ನಾನು ಕಲಿತ ವಿದ್ಯೆ ಎಷ್ಟು ಎಂಬುದುನ್ನು ತಿಳಿಯಲು ಬರೆಯುವ ಪರೀಕ್ಷೆ ಇದ್ದಂತೆ’ ಎಂಬುದು ಕೃಷ್ಣಮೋಹನ್ ಅವರ ವ್ಯಾಖ್ಯಾನ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.