ಶನಿವಾರ, ಏಪ್ರಿಲ್ 17, 2021
32 °C

ಕನ್ನಡ ತೇರಿಗೆ ಸಂಭ್ರಮದ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಗುಳೇದಗುಡ್ಡ: ಮಾ. 11 ರಿಂದ ಬೆಳಗಾವಿಯಲ್ಲಿ ನಡೆಯುವ ಎರಡನೆಯ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಸಂಚರಿಸುವ ಕನ್ನಡ ನುಡಿತೇರಿನ ಮೆರವಣಿಗೆ ನಗರದಲ್ಲಿ ಶನಿವಾರ ಸಂಭ್ರಮದಿಂದ ನಡೆಯಿತು.

ತಾಲ್ಲೂಕು ಹಾಗೂ ಪುರಸಭೆ ಆಡಳಿತ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ನಾಗರಿಕರು ತೇರನ್ನು ಸ್ವಾಗತಿಸಿದರು.

ನಂತರ ವಾದ್ಯ ವೈಭವದೊಂದಿಗೆ ಮೆರವಣಿಗೆ ಮೂಲಕ ಪುರಸಭೆ ಎದುರಿನ ಸಾರ್ವಜನಿಕ ಕಟ್ಟೆಗೆ ತರಲಾಯಿತು. ಬದಾಮಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಹಿರಿಯ ಸಾಹಿತಿ, ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ನಿವೃತ್ತ ಪ್ರಾಧ್ಯಾಪಕ ಎಸ್.ಐ. ರಾಜನಾಳ, ಮಾಜಿ ಶಾಸಕ ರಾಜೇಖರ ಶೀಲವಂತ ಮಾತನಾಡಿದರು.    

ಜಿಲ್ಲೆಯ ಕಲೆ, ಸಾಹಿತ್ಯ, ಸಂಗೀತ, ವಾಸ್ತು ಶಿಲ್ಪದ ವೈಭವವನ್ನು ಬಿಂಬಿಸುವ ಚಿತ್ರಗಳನ್ನು ಒಳಗೊಂಡಿರುವ ಕನ್ನಡ ನುಡಿ ತೇರಿನ ಮೆರವಣಿಗೆಯಲ್ಲಿ ಕಳಶ ಹೊತ್ತ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ನಗರದ ಪ್ರಾಥಮಿಕ, ಪ್ರೌಢ ಶಾಲೆ, ಕಾಲೇಜು ವಿದ್ಯಾರ್ಥಿಗಳು ಕನ್ನಡ ಭಾವುಟ ಹಿಡಿದುಕೊಂಡು ಸಾಗಿದರು. ಡೊಳ್ಳು, ಕರಡಿ ಮಜಲು ತಂಡಗಳು ಕೂಡ ಪಾಲ್ಗೊಂಡಿದ್ದವು.

ಮೆರವಣಿಗೆಯಲ್ಲಿ ಬದಾಮಿ ತಾ.ಪಂ. ಅಧ್ಯಕ್ಷೆ ಸುಶೀಲಾಬಾಯಿ ಹೆಬ್ಬಳ್ಳಿ, ಪುರಸಭೆ ಅಧ್ಯಕ್ಷೆ ಲಲಿತಾ ದನ್ನೂರ (ಗಾಜಿ), ಉಪಾಧ್ಯಕ್ಷ ಮುರುಗೇಶ ರಾಜನಾಳ, ಸ್ಥಾಯಿ ಸಮಿತಿ ಚೇರಮನ್ ಕಮಲು ಮಾಲಪಾಣಿ, ಅಂದಾನಪ್ಪ ಅಂಗಡಿ, ಜಿ.ಪಂ. ಸದಸ್ಯ ಕೃಷ್ಣ ಓಗೆನ್ನವರ, ಪರ್ವತಿ ತಾ.ಪಂ. ಸದಸ್ಯ ಆಸಂಗೆಪ್ಪ ಚಿನ್ನಪ್ಪ ನಕ್ಕರಗುಂದಿ, ಕೋಟೆಕಲ್ ತಾ.ಪಂ. ಹನಮಂತ ತೊಗಲಂಗಿ, ಕರವೇ ಅಧ್ಯಕ್ಷ ರವಿ ಅಂಗಡಿ, ಮಾಜಿ ಉಪಾಧ್ಯಕ್ಷ ಪ್ರಕಾಶ ಮುರಗೋಡ, ಅಶೋಕ ಹೆಗಡಿ, ಎಂ.ಎಂ. ಜಗತಾಪ, ಭಾಗ್ಯ ಉದ್ನೂರ, ಭುವನೇಶ್ವರಿ ಹಾದಿಮನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಮೇಶ ತಳವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ, ಪ್ರಭಾರ ವಿಶೇಷ ತಹಸೀಲ್ದಾರ ಪಿ.ವಿ. ದೇಸಾಯಿ, ಕಂದಾಯ ನಿರೀಕ್ಷಕ ಬಸವರಾಜ ಮೇಟಿ, ಮುದಕಪ್ಪ, ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ ಹಾಗೂ ಪುರಸಭೆ ಸಿಬ್ಬಂದಿ ಪಾಲ್ಗೊಂಡಿದ್ದರು. ತಹಸೀಲ್ದಾರ ಮಹೇಶ ಕರ್ಜಗಿ ಸ್ವಾಗತಿಸಿದರು. ಶ್ರೀಕಾಂತ ಹುನಗುಂದ ವಂದಿಸಿದರು.   ಹುನಗುಂದದಲ್ಲಿ ಮಿನಿ ವಿಧಾನಸೌಧದ ಮುಂಭಾಗದಲ್ಲಿ ತಾಲ್ಲೂಕು ಆಡಳಿತದ ಪರವಾಗಿ ತಹಸೀಲ್ದಾರ ಎಚ್.ಎನ್.ನಾಗರಾಜ ತೇರಿಗೆ ಸ್ವಾಗತ ಕೋರಿದರು. ಪ.ಪಂ. ಅಧ್ಯಕ್ಷ ಬಸಪ್ಪ ಆಲೂರ ಮತ್ತು ಉಪಾಧ್ಯಕ್ಷೆ ವಿಜಯಲಕ್ಷ್ಮಿ ರೇವಡಿ ಪೂಜೆ ನೆರವೇರಿಸಿದರು.  ನಂತರ ನಗರದ ಪ್ರಮುಖ ಬೀದಿಗಳಲ್ಲಿ ತೇರಿನ ಮೆರವಣಿಗೆ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎಂ.ಚಿನ್ನಣ್ಣವರ, ಜಾನಪದ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ನಾಡಗೌಡ, ಕನ್ನಡ ರಕ್ಷಣಾ ವೇದಿಕೆ ಕಾರ್ಯಾಧ್ಯಕ್ಷ ಜಾಕೀರ್ ಹುಸೇನ್ ತಾಳಿಕೋಟಿ, ಯುವ ಗಾಯಕ ವಿಜಯ ಗದ್ದನಕೇರಿ, ಸ್ಪಂದನ ರಂಗ ತಂಡದ ಸಂಚಾಲಕ ಎಸ್ಕೆ ಕೊನೆಸಾಗರ, ಪ.ಪಂ. ಮುಖ್ಯಾಧಿಕಾರಿ ಪಿ.ವಿ.ಜಾಲಿಹಾಳ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಾಲಾ-ಕಾಲೇಜು ಶಿಕ್ಷಕರು ಹಾಗೂ ಮಕ್ಕಳು, ವಿವಿಧ ಜಾನಪದ ತಂಡಗಳು, ಕುಂಭಹೊತ್ತ ಮಹಿಳೆಯರು ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.ಕೆರೂರಿನಲ್ಲಿ

ಕೆರೂರ: ಪಟ್ಟಣಕ್ಕೆ ಆಗಮಿಸಿದ ಕನ್ನಡ ನುಡಿ ತೇರಿಗೆ ವೈಭವದ ಸ್ವಾಗತ ನೀಡಿದ ನಂತರ ತರಕಾರಿ ಮಾರುಕಟ್ಟೆ ಆವರಣದಲ್ಲಿ ಸಾರ್ವಜನಿಕ ಸಮಾರಂಭ ನಡೆಸಲಾಯಿತು.

ಎಂ.ಎಚ್.ಎಂ ಕಾಲೇಜಿನ ಪ್ರಾಚಾರ್ಯ ಶಂಕರ.ಗುರವ ಮಾತನಾಡಿ ಯಾಂತ್ರಿಕ ಬದುಕಿನಲ್ಲಿ ಜಾಗತೀಕರಣದ ಅಲೆಗಳ ಹೊಡೆತಕ್ಕೆ ಸಿಕ್ಕು ಕನ್ನಡ ಭಾಷೆಯ ಪರಿಶುದ್ಧತೆ ನಶಿಸುತ್ತಿದೆ ಎಂದು ವಿಷಾದಿಸಿದರು.ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಸದಸ್ಯ ಡಾ.ಎಂ.ಜಿ.ಕಿತ್ತಲಿ, ನಾಡಿನ ಗಡಿ ಭಾಗಗಳಲ್ಲಿ ಅನ್ಯಭಾಷಿಕರ ಹಾವಳಿ, ಗಡಿ ತಂಟೆಗಳಿಂದ ಕನ್ನಡ ನಾಡಿಯಲ್ಲಿಯೇ ಭಾಷೆ, ಅಭಿಮಾನ ಕ್ಷೀಣಿಸುತ್ತಿದೆ ಎಂದರು.ತಹಸೀಲ್ದಾರ ಮಹೇಶ ಕರ್ಜಗಿ, ಪ.ಪಂ. ಅಧ್ಯಕ್ಷೆ ವೈ.ವಿ.ಗ್ಯಾಟೀನ್, ಉಪಾಧ್ಯಕ್ಷ ರಾಚಪ್ಪ ಹುಂಡೇಕಾರ, ಸದಸ್ಯ ರಮೇಶ ಮತ್ತಿಕಟ್ಟಿ, ಸೈದುಸಾಬ ಚೌಧರಿ, ರಮೇಶ ತಳವಾರ, ಬಿಇಓ ಸುರೇಶ ಹುಗ್ಗಿ, ಎ.ಜಿ.ಪಂಡಿತ, ಈರಣ್ಣ ಜವಳಿ, ವಿ.ಬಿ.ಹೊನ್ನಳ್ಳಿ  ಉಪಸ್ಥಿತರಿದ್ದರು.ಸಿ.ಎಸ್.ನಾಗನೂರ ನಿರೂಪಿಸಿದರು.ಮುಖ್ಯಾಧಿಕಾರಿ ರಾಮಕೃಷ್ಣ ಸಿದ್ಧನಕೊಳ್ಳ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.