ಮಂಗಳವಾರ, ಮೇ 18, 2021
22 °C

ಕನ್ನಡ ಸೇರಿ 10 ಭಾಷೆಗಳಲ್ಲಿ ಶಬ್ದಕೋಶ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ಇಂಗ್ಲಿಷ್ ಶಬ್ದಕೋಶಗಳ ಪ್ರಕಾಶನದಲ್ಲಿ ತೊಡಗಿರುವ ಅತ್ಯಂತ ಹಳೆಯ ಕಂಪೆನಿಗಳಲ್ಲಿ ಒಂದಾದ ಕಾಲಿನ್ಸ್ ಸಂಸ್ಥೆ ಕನ್ನಡ ಸೇರಿದಂತೆ ಭಾರತದ 10 ಪ್ರಾದೇಶಿಕ ಭಾಷೆಗಳ ದ್ವಿಭಾಷಾ ಶಬ್ದಕೋಶಗಳನ್ನು ಶೀಘ್ರವೇ ಬಿಡುಗಡೆ ಮಾಡಲಿದೆ.ಬಂಗಾಳಿ, ತಮಿಳು, ತೆಲುಗು, ಗುಜರಾತಿ, ಹಿಂದಿ, ಒಡಿಯಾ, ಮಲಯಾಳಂ, ಮರಾಠಿ ಮತ್ತು ಉರ್ದು ಶಬ್ದಕೋಶಗಳು ಬಿಡುಗಡೆಯಾಗಲಿರುವ ಇತರ ಭಾಷೆಗಳು ಎಂದು ಪ್ರಕಾಶನ ನಿರ್ದೇಶಕಿ ಡಾ.ಇಲೈನ್ ಹಿಗ್ಲ್‌ಟನ್ ತಿಳಿಸಿದ್ದಾರೆ.ಯೂರೋಪ್, ಸಂಯುಕ್ತ ಸಂಸ್ಥಾನ (ಯುಕೆ), ಚೀನಾ, ಜಪಾನ್, ಕೊರಿಯಾ ಮತ್ತಿತರ ರಾಷ್ಟ್ರಗಳಲ್ಲಿ ಶಬ್ದಕೋಶಗಳಿಗೆ ಬೇಡಿಕೆ ಕುಸಿದಿದೆ. ಆದರೆ ಭಾರತದಲ್ಲಿ ಶಬ್ದಕೋಶಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕಳೆದೆರಡು ವರ್ಷಗಳಲ್ಲಿ ಭಾರತದಲ್ಲಿ ಶಬ್ದಕೋಶಗಳ ಮಾರಾಟ ಶೇ 75ರಷ್ಟು ಹೆಚ್ಚಾಗಿದೆ ಎಂದೂ ಹೇಳಿದರು.ಶಬ್ದಕೋಶಗಳ ಡಿಜಿಟಲ್ ಆವೃತ್ತಿಯನ್ನು ಅಳವಡಿಸುವ ಬಗ್ಗೆ ಮೊಬೈಲ್ ಕಂಪೆನಿಗಳು ಮತ್ತು ಅಂತರ್ಜಾಲ ಸೇವಾ ಪೂರೈಕೆ ಕಂಪೆನಿಗಳ ಜತೆ ಈಗಾಗಲೇ ಮಾತುಕತೆ ನಡೆಯುತ್ತಿದೆ. ದ್ವಿಭಾಷಾ ಶಬ್ದಕೋಶಗಳು ಮೊಬೈಲ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.