ಶನಿವಾರ, ಜೂಲೈ 11, 2020
24 °C

ಕಪ್ಪು ಹಣ: ಬೈಕ್ ರ್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಪ್ಪು ಹಣ: ಬೈಕ್ ರ್ಯಾಲಿ

ಯಲ್ಲಾಪುರ: ವಿದೇಶಿ ಬ್ಯಾಂಕುಗಳಲ್ಲಿರುವ ಭಾರತೀಯರ ಕಪ್ಪು ಹಣವನ್ನು ಹೊರತರಲು ಕ್ರಮ ಕೈಗೊಳ್ಳಬೇಕು ಎಂದು ಬಾಬಾ ರಾಮದೇವರ ನೇತೃತ್ವದಲ್ಲಿ ಭಾರತ ಸ್ವಾಭಿಮಾನ ಆಂದೋಲನ ನಡೆಸುತ್ತಿರುವ ಹೋರಾಟದ ಅಂಗವಾಗಿ ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ ರಾಷ್ಟ್ರಪತಿಗಳಿಗೆ ಮನವಿಯನ್ನು ಭಾನುವಾರ ತಹಸೀಲ್ದಾರರ ಮೂಲಕ ಸಲ್ಲಿಸಲಾಯಿತು.ಸ್ಥಳೀಯ ದೇವಿ ದೇವಸ್ಥಾನದಿಂದ ಬೈಕ್ ರ್ಯಾಲಿ ಮೂಲಕ ತಹಸೀಲ್ದಾರ ಕಚೇರಿಗೆ ತೆರಳಿದ ಭಾರತ ಸ್ವಾಭಿಮಾನದ ಕಾರ್ಯಕರ್ತರು ತಹಸೀಲ್ದಾರರ ಅನುಪಸ್ಥಿತಿಯಲ್ಲಿ ಉಪತಹಸೀಲ್ದಾರ ಕೇಣಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.ಭಾರತ ಸ್ವಾಭಿಮಾನದ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಕೆ.ಭಟ್ಟ ಶೀಗೇಪಾಲ್, ಕಾರ್ಯದರ್ಶಿ ಅರುಣ ಶೆಟ್ಟಿ, ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಪ್ರಕಾಶ ಮಾಲಶೇಟ್, ಸಂಘಟನಾ ಕಾರ್ಯದರ್ಶಿ ಮಂಜುನಾಥ ದೇಸಾಯಿ, ಪ್ರಮುಖರಾದ ಡಿ.ಎನ್. ಗಾಂವ್ಕರ್, ಶಂಕರ ಭಟ್ಟ, ಮಹಮ್ಮದ ಗೌಸ್, ಎಂ.ಎಂ. ಶೇಖ್, ಅಬ್ದುಲ್ ರೆಹಮಾನ ಬ್ಯಾರಿ, ಅನಂತ ಭಟ್ಟ ಕವಾಳೆ, ವೇಣುಗೋಪಾಲ ಮದ್ಗುಣಿ, ಅರುಣ ಗುಡಿಗಾರ, ಗುರುಪಾರಯ್ಯ ನಂದೊಳ್ಳಿ ಮಠ, ಸುರೇಶ ಪೈ, ಬಾಬು ಬಾಂದೇಕರ್, ಆರ್.ಎಸ್.ಜೋಶಿ, ಮಾಧವ ನಾಯ್ಕ, ಸೀತಾ ಅನಂತ ಭಟ್ಟ ಕವಾಳೆ, ಕಲ್ಪನಾ ನಾರಾಯಣ ನಾಯ್ಕ ಉಪಸ್ಥಿತರಿದ್ದರು.‘ಕಪ್ಪುಹಣದಿಂದ ದೇಶವನ್ನು ಮುಕ್ತಗೊಳಿಸಿ’

ಸಿದ್ದಾಪುರ:
ಕಪ್ಪು ಹಣದ ಅರ್ಥವ್ಯವಸ್ಥೆಯಿಂದ ದೇಶವನ್ನು ಮುಕ್ತಗೊಳಿಸುವಂತೆ ಭಾರತ ಸ್ವಾಭಿಮಾನ ಆಂದೋಲನ ಮತ್ತು ಪತಂಜಲಿ  ಯೋಗ ಸಮಿತಿಯ ತಾಲ್ಲೂಕು ಘಟಕ ಆಗ್ರಹಿಸಿದೆ.ಈ ಕುರಿತಾದ ಮನವಿಯನ್ನು ಸಮಿತಿಯ ಅಧ್ಯಕ್ಷ ಆರ್.ಜಿ.ಪೈ ಮಂಜೈನ್ ತಾಲ್ಲೂಕಿನ ಉಪತಹಸೀಲ್ದಾರ ಅವರಿಗೆ ನೀಡಿದರು.ಕಪ್ಪು ಹಣದ ಅರ್ಥವ್ಯವಸ್ಥೆಯನ್ನು ಕಾಪಾಡುತ್ತಿರುವ ಅನೇಕ ಸಂಘ-ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿದ್ದು, ಇಲ್ಲಿರುವ ಹಣದಲ್ಲಿ ದೊಡ್ಡ ಪಾಲು ಭಾರತದ್ದಾಗಿದೆ. ಆದ್ದರಿಂದ ಭಾರತವನ್ನು ಕಪ್ಪು ಹಣದಿಂದ ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿಸಿದಲ್ಲಿ ದೇಶ ಮಹಾನ್ ಶಕ್ತಿಶಾಲಿಯಾಗುತ್ತದೆ ಎಂದು ಅವರುಗಳು ಮನವಿಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ  ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಕೋದಂಡರಾಮ ರಂಗೈನ್, ಪ.ಪಂ. ಸದಸ್ಯೆ ವರ್ಷಾ ಅಂಬಳ್ಳಿ, ಸಮಿತಿಯ ಪದಾಧಿಕಾರಿಗಳಾದ ರವಿ ಅಂಬಳ್ಳಿ,ಮಂಜುನಾಥ ನಾಯ್ಕ, ಮಹೇಶ ಭಟ್ಟ, ಮುಕುಂದ ಪೈ, ಧರ್ಮರಾಜ ಪೈ, ಯೋಗೀಶ ಕಾಮತ್, ಜೀವನ ಪೈ ಮತ್ತು ಶೋಭಾ ಅಂಕೋಲೆಕರ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.