ಶುಕ್ರವಾರ, ಮೇ 20, 2022
24 °C

ಕಬ್ಬು ಬಾಕಿ ಪಾವತಿ ನಂತರವೇ ಮಾತುಕತೆ: ಡಿಸಿ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ರೈತರು ಹಾಗೂ ಕಾರ್ಖಾನೆಯ ನಡುವೆ ನಡೆದ ಒಪ್ಪಂದದಂತೆ ಬಾಕಿ ಪಾವತಿಯಾಗದೆ ಯಾವುದೆ ಮಾತುಕತೆಯ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾಧಿಕಾರಿ ಆದಿತ್ಯ ಆಮ್ಲನ್ ಬಿಸ್ವಾಸ್ ಸ್ಪಷ್ಟವಾಗಿ ತಿಳಿಸಿದರು.ಭಾನುವಾರ ಸಂಜೆ ಹೊಸಪೇಟೆಯ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ 2011ನೇ ಸಾಲಿನ ಕಬ್ಬು ಅರಿಯುವ ಹಂಗಾಮಿನ ಪೂರ್ವ ಭಾವಿ ಅಂತಿಮ ಸುತ್ತಿನ ಮಾತುಕತೆಯಲ್ಲಿ ರೈತರ, ಶಾಸಕ ಆನಂದಸಿಂಗ್ ಹಾಗೂ ಕಾರ್ಖಾನೆಯ ಮಾಹಿತಿ ಪಡೆದ ನಂತರ ಅವರು ಮಾತನಾಡಿದರು.ಯಾವುದೇ ಒಂದು ನಿರ್ಣಯವನ್ನು ಕೈಗೊಂಡ ನಂತರ ಅದರಂತೆ ನಡೆದು ಕೊಳ್ಳಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಯಾವುದೇ ಹಂತದಲ್ಲಿ ತನ್ನ ನಿರ್ಣಯದಂತೆ ವರ್ತಿಸಲು ವಿಫಲವಾಗಿರುವ ಕಾರ್ಖಾನೆ ಅನಗತ್ಯ ಕುಂಟು ನೆಪಗಳನ್ನು ತೆಗೆದರೆ ಕಾನೂನಿ ನಂತೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದರು.ಒಂದು ವಾರದಲ್ಲಿ ನೀಡಬೇಕಾಗಿ ರುವ ಬಾಕಿ 86.40 ಲಕ್ಷ ಪಾವತಿಸಿ ಮುಂದಿನ ಮಾತುಕತೆಗೆ ಬರಬೇಕು, ಮುಂದಿನ ಎಲ್ಲ ನಿರ್ಣಯಗಳು ಆಗಿ ಅದರಂತೆ ನಡೆದುಕೊಳ್ಳಬೇಕು, ರೈತರಿಗೆ ನ್ಯಾಯಯುತ ಬೆಲೆ ನೀಡಬೇಕು ರೈತರೊಂದಿಗೆ ಸಹಕಾರ ಮನೋ ಭಾವನೆಯಿಂದ ವರ್ತಿಸಬೇಕು ಒಪ್ಪಂದ ಸಭೆಗೆ ಅಂತಿಮ ನಿರ್ಣಯ ಕೈಗೊಳ್ಳು ವವರು ಹಾಜರಾಗಬೇಕು. ಇಲ್ಲವಾದರೆ ಸಹನೆ ಸಾಧ್ಯವಿಲ್ಲ ಎಂದು ತಾಕೀತು ಮಾಡಿದರು.ಕಳೆದ ಐದು ವರ್ಷಗಳಿಂದ ಬರ ಬೇಕಾದ ಬಾಕಿ ಬಡ್ಡಿ ಸಮೇತ ನೀಡುವಂತೆ ರೈತರು ಆಗ್ರಹಿಸಿದರು.

ಶಾಸಕ ಆನಂದ ಸಿಂಗ್, ರೈತ ಸಂಘದ ಅಧ್ಯಕ್ಷ ಬಡಕಜ್ಜ, ಬಿ.ಕೆ. ನಾಗರಾಜ ರಾವ್, ಅರಳಿ ಕೊಟ್ರಪ್ಪ, ಬಂಡೆ ರಂಗಪ್ಪ, ಜಿ.ಕೆ.ಹನುಮಂತಪ್ಪ, ಟಿ.ವೆಂಕಟೇಶ, ಜಹಿರುದ್ದೀನ್, ಕಾರ್ತಿಕ್, ನಾರಾಯಣಸಿಂಗ್, ಅಲ್ಲಾಬಕ್ಷಿ, ಎ.ನಾಗರಾಜ್, ಸಿದ್ದೇಶ, ಕುರಟ್ಟಿ, ವೆಂಕಪ್ಪ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.