ಬುಧವಾರ, ಏಪ್ರಿಲ್ 21, 2021
27 °C

ಕರಡಿ ದಾಳಿ: ಒಬ್ಬನಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಕರಡಿ ಕಚ್ಚಿದ ಪರಿಣಾಮ ಒಬ್ಬ ವ್ಯಕ್ತಿ ಗಾಯಗೊಂಡ ಘಟನೆ ತಾಲ್ಲೂಕಿನ ಮೆತಗಲ್ ಗ್ರಾಮದಲ್ಲಿ ಬುಧವಾರ ನಡೆದಿದೆ.ಆದೆಪ್ಪ ಮಲ್ಲಿಕಾರ್ಜುನಪ್ಪ ಕುದರಿಮೋತಿ ಎಂಬ ವ್ಯಕ್ತಿಯೇ ಗಾಯಗೊಂಡಿದ್ದು, ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದೆಪ್ಪ ಹೊಲದಲ್ಲಿನ ಕಲ್ಲಂಗಡಿ ಹಣ್ಣುಗಳನ್ನು ಕಾಯಲು ಮಲಗಿದ್ದ ಸಂದರ್ಭದಲ್ಲಿ ಕರಡಿಗಳು ಹಣ್ಣುಗಳನ್ನು ತಿನ್ನುವ ಸಲುವಾಗಿ ದಾಳಿ ಮಾಡಿದವು. ಅವುಗಳನ್ನು ಓಡಿಸಲು ಹೋದ ಆದೆಪ್ಪಗೆ ಕರಡಿಯೊಂದು ಕಚ್ಚಿದೆ ಎಂದು ತಿಳಿದು ಬಂದಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.