ಕರಾವಳಿಯಲ್ಲಿ ಮಳೆ

7

ಕರಾವಳಿಯಲ್ಲಿ ಮಳೆ

Published:
Updated:
ಕರಾವಳಿಯಲ್ಲಿ ಮಳೆ

ಬೆಂಗಳೂರು: ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ನೈರುತ್ಯ ಮುಂಗಾರು ಕ್ಷೀಣಿಸಿದೆ.ಕರಾವಳಿಯ ಹಲವೆಡೆ, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ  ಮಳೆಯಾಗಿದೆ. ಕಾರವಾರದಲ್ಲಿ 7 ಸೆಂ.ಮೀ ಮಳೆಯಾಗಿದೆ. ಸುಬ್ರಹ್ಮಣ್ಯ, ಗೋಕರ್ಣ, ಆಗುಂಬೆ 6, ಕುಂದಾಪುರ 5, ಕೊಲ್ಲೂರು, ಶಿರಾಲಿ, ಹೊನ್ನಾವರ, ಭಟ್ಕಳ, ಕುಮಟಾ, ಅಂಕೋಲ, ನೀಲ್ಕುಂದ, ಇಂಡಿ 4, ಸಿದ್ದಾಪುರ, ದೇವರಹಿಪ್ಪರಗಿ, ಔರಾದ್, ಮಡಿಕೇರಿ, ಶೃಂಗೇರಿ, ಕೊಪ್ಪ 3 ಸೆಂ.ಮೀ ಮಳೆಯಾಗಿದೆ.ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಜಿಲ್ಲೆಗಳು, ಉತ್ತರ ಮತ್ತು   ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ  ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry