ಮಂಗಳವಾರ, ಜೂನ್ 22, 2021
27 °C

ಕರುಣಾಕರ ರೆಡ್ಡಿ ತಟಸ್ಥ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ, ಒಂದು ಕಾಲದ ಆಪ್ತ ಬಿ.ಶ್ರೀರಾಮುಲು ಅವರ ಪರ ಪ್ರಚಾರ ಮಾಡದೇ ತಟಸ್ಥವಾಗಿ ಉಳಿ­­ಯಲು ಮಾಜಿ ಸಚಿವ ಜಿ.­ಕರುಣಾಕರ ರೆಡ್ಡಿ ನಿರ್ಧರಿ­ಸಿ­ದ್ದಾರೆಯೇ?ಕ್ಷೇತ್ರದಾದ್ಯಂತ ಕೇಳಿಬರುತ್ತಿರುವ ಪ್ರಶ್ನೆಗೆ ಕರುಣಾಕರ ರೆಡ್ಡಿ ಆಪ್ತ ವಲಯ­ದಿಂದ ‘ಹೌದು’ ಎಂಬ ಉತ್ತರ ಕೇಳಿಬರುತ್ತಿದೆ.  ಬಿಜೆಪಿ ತ್ಯಜಿಸಿ, ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಸ್ಥಾಪಿಸಲು ಶ್ರೀರಾ­ಮುಲು ಮುಂದಾದಾಗ ಕರುಣಾಕರ ರೆಡ್ಡಿ ವಿರೋಧಿಸಿದ್ದರು ಎಂದೂ ಅವರ ಆಪ್ತರು ಹೇಳುತ್ತಾರೆ.ಕರುಣಾಕರ ರೆಡ್ಡಿ ದಾವಣಗೆರೆಯ ಲೋಕ­ಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದು, ಬಳ್ಳಾರಿ­ಯಲ್ಲಿ ಪಕ್ಷದ ಪರ ಪ್ರಚಾರ ನಡೆಸುತ್ತಿಲ್ಲ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.