ಶನಿವಾರ, ಜೂನ್ 12, 2021
28 °C

ಕರುಣಾಶ್ರಯದಲ್ಲಿ ಇಂದು ಚಾರಿಟಿ ಬಜಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀವ್ರ ಸ್ವರೂಪದ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳ ತಾಣವಾದ ‘ಕರುಣಾಶ್ರಯ’ದಲ್ಲಿ ಆಶ್ರಯ ಪಡೆದಿರುವ ಸದಸ್ಯರ ವೈದ್ಯಕೀಯ ನೆರವಿಗಾಗಿ ಮಾ.22ರ ಶನಿವಾರ ‘ಚಾರಿಟಿ ಬಜಾರ್‌’ ಎಂಬ ವಿಶಿಷ್ಟ ಮಾರಾಟ ಮೇಳವನ್ನು ನಡೆಯಲಿದೆ. ಶೃಂಗಾರ, ನಿತ್ಯೋಪಯೋಗಿ, ಆಲಂಕಾರಿಕ ಮತ್ತು ಉಡುಗೊರೆ ವಸ್ತುಗಳನ್ನು ಖರೀದಿಸುವ ಮೂಲಕ ಗ್ರಾಹಕರು ಸಂಸ್ಥೆಗೆ ನೆರವಾಗಬಹುದು.ಕೈಮಗ್ಗ, ಕರಕುಶಲ ವಸ್ತ್ರಗಳು, ಬೆಳ್ಳಿ ಮತ್ತು ಕೃತಕ ರತ್ನಾಭರಣಗಳು, ಪಾದರಕ್ಷೆಗಳು, ಕಲಾಕೃತಿ, ಹ್ಯಾಂಡ್‌ಮೇಡ್ ಪೇಪರ್‌ನ ಉತ್ಪನ್ನ, ಒಳಾಂಗಣ ಅಲಂಕಾರದ ವಸ್ತುಗಳು ಮತ್ತು ಗಿಡಗಳು ಹೀಗೆ ಹತ್ತಾರು ಬಗೆಯ ಮಳಿಗೆಗಳು ಇಲ್ಲಿರುತ್ತವೆ. ಬಗೆ ಬಗೆಯ ಆಹಾರೋತ್ಪನ್ನಗಳ, ಸಿದ್ಧ ಆಹಾರಗಳ ಮಳಿಗೆಗಳೂ ಇರುತ್ತವೆ. ಮಕ್ಕಳಿಗೆ ಒರಿಗೆಮಿ ಪ್ರಾತ್ಯಕ್ಷಿಕೆ ಎರಡು ಹಂತದಲ್ಲಿ ನಡೆಯಲಿದೆ. ಮಿಡ್‌ರಿಫ್‌ ಬ್ಯಾಂಡ್‌ನ ಸದಸ್ಯರಿಂದ ಸಂಗೀತ ರಸಮಂಜರಿಯೂ ಏರ್ಪಾಡಾಗಿದೆ.ವಿಳಾಸ: ಕರುಣಾಶ್ರಯ, ಹಳೆ ವಿಮಾನ ನಿಲ್ದಾಣ ವರ್ತೂರು ರಸ್ತೆ, ಮಾರತ್‌ಹಳ್ಳಿ ಕುಂದಲಹಳ್ಳಿ ಗೇಟ್‌. ಹೆಚ್ಚಿನ ವಿವರಗಳಿಗೆ: 080 4268 5666/ 97436 39503/98808 46173.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.