ಶನಿವಾರ, ಮೇ 8, 2021
18 °C
ಮೊದಲ ಓದು

ಕರ್ನಾಟಕ ಕೇಸರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ನಡದ ಹಿರಿಯ ಕವಿ ಬಿ.ಎ. ಸನದಿ ಅವರ ಆಯ್ದ ಕಥೆಗಳ ಸಂಗ್ರಹವನ್ನು ಕಥೆಗಾರ ಬಿ.ಪಿ. ಶಿವಾನಂದರಾವ್ ಸಂಪಾದಿಸಿದ್ದಾರೆ. ಪ್ರಮುಖವಾಗಿ ಕಾವ್ಯವನ್ನೇ ತಮ್ಮ ಅಭಿವ್ಯಕ್ತಿ ಮಾಧ್ಯಮ ಆಗಿಸಿಕೊಂಡಿರುವ ಸನದಿ ಆಗಾಗ ಕಥೆಗಳನ್ನು ಬರೆದುದ್ದಲ್ಲದೆ, ಉತ್ತಮ ಕಥೆಗಳನ್ನು ಅನುವಾದಿಸಿಕೊಂಡು ಬಂದಿದ್ದಾರೆ.

ಅವರು ಈವರೆಗೆ ಮಾಡಿದ ಅನುವಾದಗಳೂ ಸೇರಿದಂತೆ ಪ್ರಕಟಿಸಿದ ನಾಲ್ಕು ಕಥಾಸಂಗ್ರಹಗಳಿಂದ ಆಯ್ದುಕೊಂಡ ಕಥೆಗಳು ಇಲ್ಲಿವೆ.

ಬದುಕಿನ ದ್ವಂದ್ವಗಳನ್ನು ಹಿಡಿಯುತ್ತಲೇ ಸರಳವಾಗಿ ತಮ್ಮ ಅನುಭವವನ್ನು ಮಂಡಿಸುವುದು ಸನದಿ ಅವರ ಕಥೆಗಳ ಶೈಲಿ.

ಯಾವುದೇ ತಂತ್ರಗಾರಿಕೆಯನ್ನು ಅವಲಂಬಿಸದ ಅವರ ಕಥೆಗಳು ಓದುಗರೊಂದಿಗೆ ಮುಖಾಮುಖಿಯಾಗಿ ತಮ್ಮ ಅನುಭವವನ್ನು ನೇರವಾಗಿ ಹೇಳಿಕೊಳ್ಳುತ್ತವೆ. ಈ ಸರಳ ರಚನೆಗಳ ಹಿಂದಿರುವುದು ಬದುಕನ್ನು ಮುಕ್ತವಾಗಿ ನೋಡುವ, ಅದನ್ನು ಶಕ್ತವಾಗಿ ಓದುಗರಿಗೆ ದಾಟಿಸುವ ರೀತಿ.

`ನೀರಿಲ್ಲದ ನಲ್ಲಿ', `ಅನುಭವ', `ಸಾವಿನ ಸುಂಟರಗಾಳಿ', `ಕರ್ನಾಟಕ ಕೇಸರಿ', `ಸಂಚಾರಿ' ಕಥೆಗಳು ಸನದಿಯವರ ಬರವಣಿಗೆಯ ಕುಶಲತೆಯನ್ನು, ಕಥೆಗಳ ಕಟ್ಟುವಿಕೆಯನ್ನು ಪರಿಚಯಿಸುತ್ತವೆ. ಆಧುನಿಕ ಕನ್ನಡದ ಕಥೆಗಳ ಸಂದರ್ಭದಲ್ಲಿ ಸನದಿಯವರ ಕಾವ್ಯಮಯ, ಧ್ವನಿಶಕ್ತಿಯುಳ್ಳ ಕಥೆಗಳು ವಿಶಿಷ್ಟವಾಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.