ಬುಧವಾರ, ಜೂನ್ 16, 2021
22 °C
ಸುಬ್ಬಯ್ಯ ಪಿಳ್ಳೈ ಟ್ರೋಫಿ: ಮಯಂಕ್‌ ಅಮೋಘ ಶತಕ

ಕರ್ನಾಟಕ ತಂಡಕ್ಕೆ ಭರ್ಜರಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರಂಭಿಕ ಬ್ಯಾಟ್ಸ್‌ಮನ್‌ ಮಯಂಕ್‌ ಅಗರವಾಲ್‌ (116; 101 ಎಸೆತ) ಅವರ ಅಮೋಘ ಶತಕದ ನೆರವಿನಿಂದ ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ಸುಬ್ಬಯ್ಯ ಪಿಳ್ಳೈ ಟ್ರೋಫಿ ದಕ್ಷಿಣ ವಲಯ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಗೋವಾ ವಿರುದ್ಧ 71 ರನ್‌ಗಳ ಗೆಲುವು ಸಾಧಿಸಿದ್ದಾರೆ.ನಗರ ಸಮೀಪದ ಆಲೂರು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ನಿಗದಿತ 45 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 312 ರನ್‌ ಗಳಿಸಿತು. ಸವಾಲಿನ ಗುರಿ ಎದುರು ಗೋವಾ ತಂಡ 43.2 ಓವರ್‌ಗಳಲ್ಲಿ 241 ರನ್‌ಗಳಿಗೆ ಆಲೌಟಾಯಿತು. ಭಾನುವಾರ ಸುರಿದ ಮಳೆಯ ಕಾರಣ ಓವರ್‌ಗಳನ್ನು ಕಡಿತಗೊಳಿಸಲಾಗಿತ್ತು.ಆರ್‌.ವಿನಯ್‌ ಕುಮಾರ್‌ ಸಾರಥ್ಯದ ತಂಡ ನಾಲ್ಕು ಪಂದ್ಯಗಳಿಂದ 14 ಪಾಯಿಂಟ್‌ ಹೊಂದಿದೆ. ತಮಿಳುನಾಡು ತಂಡ ಮೂರು ಪಂದ್ಯಗಳಿಂದ 14 ಪಾಯಿಂಟ್‌ ಹೊಂದಿದೆ. ಉಭಯ ತಂಡಗಳು ಬುಧವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿವೆ. ಈ ಪೈಪೋಟಿಯಲ್ಲಿ ಗೆಲ್ಲುವ ತಂಡ ದಕ್ಷಿಣ ವಲಯ ಚಾಂಪಿಯನ್‌ ಆಗಲಿದೆ.ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್‌ ಎದುರು ಆಂಧ್ರಾ ತಂಡ ಆರು ವಿಕೆಟ್‌ಗಳ ಗೆಲುವು ಸಾಧಿಸಿತು. ಆದರೆ ಆದಿತ್ಯ ಗ್ಲೋಬಲ್‌  ಕ್ರೀಡಾಂಗಣದ ಪಿಚ್‌ ಒದ್ದೆಯಾಗಿದ್ದ ಕಾರಣ ತಮಿಳುನಾಡು ಹಾಗೂ ಕೇರಳ ನಡುವಿನ ಪಂದ್ಯವನ್ನು ರದ್ದುಮಾಡಲಾಯಿತು.ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 45 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 312 (ರಾಬಿನ್‌ ಉತ್ತಪ್ಪ 27, ಮಯಂಕ್‌ ಅಗರವಾಲ್‌ 116, ಕೆ.ಎಲ್‌.ರಾಹುಲ್‌ 40, ಮನೀಷ್‌ ಪಾಂಡೆ 45; ಶದಾಬ್‌ ಜಕಾತಿ 52ಕ್ಕೆ2, ಅಮಿತ್‌ ಯಾದವ್‌ 54ಕ್ಕೆ3); ಗೋವಾ: 43.2 ಓವರ್‌ಗಳಲ್ಲಿ 241 (ಅಮೋಘ್‌ ದೇಸಾಯಿ 30, ಶಗುಣ್‌ ಕಾಮತ್‌ 63, ದರ್ಶನ್‌ ಮಿಸಾಲ್‌ 42; ಅಬ್ರಾರ್‌ ಕಾಜಿ 49ಕ್ಕೆ4, ಆರ್‌.ವಿನಯ್‌ ಕುಮಾರ್‌ 47ಕ್ಕೆ3). ಫಲಿತಾಂಶ: ಕರ್ನಾಟಕ ತಂಡಕ್ಕೆ 71 ರನ್‌ಗಳ ಗೆಲುವು. ಪಾಯಿಂಟ್‌: 4.ಹೈದರಾಬಾದ್‌: 47.5 ಓವರ್‌ಗಳಲ್ಲಿ 166 (ಜಿ.ಹನುಮಾ ವಿಹಾರಿ 43, ಹಬೀದ್‌ ಅಹ್ಮದ್‌ ಔಟಾಗದೆ 44; ಡಿ.ಸ್ವರೂಪ್‌ ಕುಮಾರ್‌ 21ಕ್ಕೆ4, ಪಿ.ವಿಜಯ್‌ ಕುಮಾರ್‌ 37ಕ್ಕೆ2); ಆಂಧ್ರಾ: 40.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 167 (ಕೆ.ಎಸ್‌.ಭರತ್‌ 60, ಜ್ಯೋತಿ ಸಾಯಿ ಕೃಷ್ಣ 36; ಪ್ರಗ್ಯಾನ್ ಓಜಾ 46ಕ್ಕೆ2). ಫಲಿತಾಂಶ: ಆಂಧ್ರಾಕ್ಕೆ ಆರು ವಿಕೆಟ್‌ ಜಯ. ಪಾಯಿಂಟ್‌: 4

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.