ಸಿಂದಗಿ: ನಗರದ ವಿವೇಕಾನಂದ ವೃತ್ತ ದಲ್ಲಿ ಮಂಗಳವಾರ ಟಿಪ್ಪುಸುಲ್ತಾನ್ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲುತೂರಾಟ, ಸಾರ್ವಜನಿಕ ಆಸ್ತಿ–ಪಾಸ್ತಿಗಳು ಹಾನಿಯಾಗಿ ತ್ವೇಷ ಮಯ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿ ಸಲಾಗಿತ್ತು.

ಬುಧವಾರ ಬೆಳಿಗ್ಗೆಯಿಂದ ಪೊಲೀಸರು ನಗರದ ಎಲ್ಲ ಅಂಗಡಿ ಗಳನ್ನು ಒತ್ತಾಯದಿಂದ ಮುಚ್ಚಿಸಿದ್ದ ರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ನಗರದ ಎಲ್ಲ ರಸ್ತೆಗಳು ಜನರ ಸಂಚಾರವಿಲ್ಲದೇ ಬಿಕೋ ಎನ್ನುವ ದೃಶ್ಯ ಕಂಡು ಬಂದಿತು. ಪೋಲಿಸರು ನಿಷೇಧಾ ಜ್ಞೆಯನ್ನು ಕರ್ಫೂ ರೀತಿಯಲ್ಲಿ ಮಾರ್ಪಾಡು ಮಾಡಿಕೊಂಡು ಒಬ್ಬೊಬ್ಬ ವ್ಯಕ್ತಿ ಸಂಚರಿಸಿದರೂ ಲಾಠಿ ಏಟಿನ ರುಚಿ ತೋರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.

ನಗರದ ತುಂಬೆಲ್ಲ ಭಯದ ವಾತಾ ವರಣ ನಿರ್ಮಾಣವಾಗಿದೆ. ಶಾಲಾ–ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ತಮ್ಮೂರುಗಳಿಗೆ ಮರಳಲು ತುಂಬಾ ತೊಂದರೆ ಅನುಭವಿಸುವುದು ಕಂಡು ಬಂದಿತು.

ಚಹಾದ ಅಂಗಡಿಗಳ ಮಾಲೀಕರು ಇಡೀ ದಿನಕ್ಕಾಗುವ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಇಟ್ಟುಕೊಂಡಿರು ವುದು ಹಾಳಾಗಿದೆ ಎಂದು ದೂರಿದ್ದಾರೆ.

ಈ ನಿಷೇಧಾಜ್ಞೆ ಇದೇ 20ರವರೆಗೆ ಮುಂದುವರೆಯುತ್ತಿರುವುದರಿಂದ ಜನ ಜೀವನ ಮೂರು ದಿನಗಳ ಕಾಲ ಇನ್ನಷ್ಟು ಅಸ್ತವ್ಯಸ್ತಗೊಳ್ಳುವ ಸಂಭವವಿದೆ.

15 ಜನರು ಪೊಲೀಸರ ವಶಕ್ಕೆ: ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಗುಂಪಿನಿಂದ ಒಟ್ಟು 15 ಜನರನ್ನು ವಿಚಾರಣೆಗೆ ಎಂದು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೋಲಿಸ್ ಮೂಲದಿಂದ ತಿಳಿದು ಬಂದಿದೆ.

ಅಮಾಯಕರನ್ನು ಶಿಕ್ಷಿಸಿದಿರಿ: ವಿಚಾರ ಣೆಗೆ ಎಂದು ಕರೆದೊಯ್ದದವರಲ್ಲಿ ಕೆಲ ವರು ಅಮಾಯಕರು ಇದ್ದಾರೆ. ಅಂಥ ವರನ್ನು ಶಿಕ್ಷಿಸದಿರಿ ಎಂದು ಸಾರ್ವ ಜನಿಕರು ವಿನಂತಿಸಿಕೊಂಡಿದ್ದಾರೆ.

ಇಡೀ ನಗರದಲ್ಲಿ ಪೊಲೀಸ್ ಸರ್ಪ ಗಾವಲು ಇದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ನಗರದಲ್ಲಿ ಬೀಡು ಬಿಟ್ಟಿದ್ದಾರೆ.
ಪತ್ರಕರನಿಗೆ ಲಾಠಿ ಏಟು: ಏತನ್ಮಧ್ಯೆ ವರದಿ ಮಾಡಲು ತೆರಳುತ್ತಿದ್ದ ಪತ್ರಕರ್ತ ಪಂಡಿತ ಯಂಪೂರೆಗೆ ಸ್ಥಳೀಯ ಟಿಪ್ಪುಸುಲ್ತಾನ್ ವೃತ್ತದಲ್ಲಿ ಪೊಲೀಸರು ಲಾಠಿಯಿಂದ ಹೊಡೆದಿ ರುವ ಘಟನೆ ನಡೆದಿದೆ.

ಈ ಕುರಿತು ಪತ್ರಕರ್ತರು ಡಿ.ವೈ. ಎಸ್.ಪಿ ಡಾ.ಶಿವಕುಮಾರ ಗುಣಾರೆ ಅವರಿಗೆ ಮನವಿ ಪತ್ರ ಸಲ್ಲಿಸಿ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.