‘ಕಲಾಂ ಮೇಷ್ಟ್ರು’ ಎಂದು ಜನರು ಪ್ರೀತಿಯಿಂದ ಕರೆಯುವ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ದೇಶ ಕಂಡ ಶ್ರೇಷ್ಠ ವಿಜ್ಞಾನಿ. ಈ ವಿಜ್ಞಾನಿಯ ಹೃದಯದಲ್ಲಿ ಕಲಾಪ್ರೇಮ ಸದಾ ಜಾಗೃತವಾಗಿರುತ್ತಿತ್ತು.

ಕಲಾಂ ಅವರ ಕಲಾಪ್ರೇಮಕ್ಕೆ ಗೌರವ ಸಲ್ಲಿಸಲೆಂದೇ ಅವರ ಪುಣ್ಯತಿಥಿಯಂದು ನೃತ್ಯದ ಮೂಲಕ ಶ್ರದ್ಧಾಂಜಲಿ ಅರ್ಪಿಸುವ ವಿನೂತನ ಕಾರ್ಯಕ್ರಮವನ್ನು ‘ಆತ್ಮಾಲಯ’ ಟ್ರಸ್ಟ್ ಇತ್ತೀಚೆಗೆ ಭಾರತೀಯ ವಿದ್ಯಾ ಭವನದಲ್ಲಿ ಆಯೋಜಿಸಿತ್ತು.

ನೃತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಾ.ಪದ್ಮಜಾ ಸುರೇಶ್ ಎರಡು ದಿನಗಳ ಕಾಲ ‘ವಿಂಗ್ಸ್ ಆಫ್ ಫೈರ್’ ಎನ್ನುವ ರಾಷ್ಟ್ರೀಯ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಗ್ರಾಮೀಣ ಭಾಗದ ಹಿರಿಯ ಕಲಾವಿದರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ನಂತರ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಕಲಾವಿದರು ನೃತ್ಯ ಪ್ರದರ್ಶನ ನೀಡಿದರು. ಮಹಾಭಾರತ, ರಾಮಾಯಣ, ಕುಮಾರ ಸಂಭವ ಹಾಗೂ ಸೌಂದರ್ಯ ಲಹರಿ ಕಥಾನಕಗಳನ್ನು ಮನೋಜ್ಞವಾಗಿ ಅಭಿನಯಿಸಿದರು.

ಕಲಾಂ ಅವರ ಬಾಲ್ಯವನ್ನು ಭರತ ನಾಟ್ಯದ ಮೂಲಕ ದೇವಿಕಾ ರಾಜಾರಾಮ್ ಕಟ್ಟಿಕೊಟ್ಟರು. ಕಲಾಂ ತಮ್ಮ ಬಾಲ್ಯದ ದಿನಗಳಲ್ಲಿ ಪಟ್ಟ ಕಷ್ಟಗಳನ್ನು, ರಾಮೇಶ್ವರಂನ ಬೀದಿಗಳಲ್ಲಿ ಪತ್ರಿಕೆ ಹಂಚಿ ಜೀವನ ಸಾಗಿಸಿದ ದಿನಗಳ ಕುರಿತು ರಚಿಸಿದ ಹಾಡಿಗೆ ಅದ್ಭುತವಾಗಿ ಅಭಿನಯಿಸಿ ಸಭಿಕರ ಮನಗೆದ್ದರು. ನಂತರ ಕ್ಷಿತಿಜಾ ಕಾಸರವಳ್ಳಿ ಅವರು ಕಲಾಂ ಅವರೇ ರಚಿಸಿದ್ದ ಹಾಡಿಗೆ ನೃತ್ಯ ಪ್ರದರ್ಶಿಸಿದರು.

ಪೂನಾದ ಶುಭಾಂಗಿ, ಕಲಾಂ ಅವರ ಸಾಧನೆಗಳು, ಅವರ ಆಲೋಚನೆಗಳನ್ನು ಕೇವಲ ಅಭಿನಯದ ಮೂಲಕ ತೋರಿಸುವ ವಿಶೇಷ ಪ್ರಯತ್ನವನ್ನು ಮಾಡಿದರು. ಇದರಲ್ಲಿ ಕೇವಲ ಅಭಿನಯ ಮಾತ್ರವಿದ್ದು ಶಬ್ದಗಳ ಪ್ರಯೋಗವೇ ಇರಲಿಲ್ಲ. ಇದು ವಿಶೇಷ ಎನಿಸಿತು. ಕಲಾಂ ಅವರ ಬಾಲ್ಯ, ಗಣಿತದಲ್ಲಿ ಅವರಿಗಿದ್ದ ವಿಶೇಷ ಆಸಕ್ತಿ, ಕ್ಷಿಪಣಿಗಳ ತಯಾರಿಯ ಕುರಿತಾದ ಅಭಿನಯವಂತೂ ನೋಡುಗರಲ್ಲಿ ರೋಮಾಂಚನ ಮೂಡಿಸಿತು.

ಈ ಕಾರ್ಯಕ್ರಮ ‘ಆತ್ಮಾಲಯ’ ಟ್ರಸ್ಟ್ನ ಸಂಸ್ಥಾಪಕರಾದ ಡಾ.ಪದ್ಮಜಾ ಸುರೇಶ್ ಅವರ ಕನಸಿನ ಸಾಕಾರ. ‘2007ನೇ ಇಸವಿಯಲ್ಲಿ ರಾಷ್ಟ್ರಪತಿ ಭವನದಲ್ಲಿ ಕಲಾಂ ಅವರಿಂದ ಸನ್ಮಾನ ಸ್ವೀಕರಿಸುವ ಅವಕಾಶ ಸಿಕ್ಕಿತ್ತು.

ಅದೇ ರೀತಿ ರಾಷ್ಟ್ರಪತಿ ಭವನದಲ್ಲಿ ನನ್ನ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನಕ್ಕೂ ಅವಕಾಶ ಸಿಕ್ಕಿತ್ತು. ಈ ಸಂದರ್ಭದಲ್ಲಿ ಕಲಾಂ ಅವರಿಗೆ ಸಂಗೀತ– ನೃತ್ಯದಲ್ಲಿದ್ದ ಆಸಕ್ತಿಯನ್ನು ಕಂಡು ಬೆರಗಾಗಿದ್ದೆ.

ಅವರ ನಿಧನದ ನಂತರ ಅವರ ಪುಣ್ಯತಿಥಿಯ ಸಂದರ್ಭದಲ್ಲಿ ಏನಾದರೂ ವಿಶೇಷ ಕಾರ್ಯಕ್ರಮ ರೂಪಿಸುವ ಯೋಚನೆ ಬಂತು. ಇದಕ್ಕಾಗಿ ನೃತ್ಯದ ಮೂಲಕ ದೇಶ ಭಕ್ತಿಯನ್ನು ಜನರಲ್ಲಿ ಜಾಗೃತಗೊಳಿಸುವ ಮೊದಲ ಪ್ರಯತ್ನಕ್ಕೆ ಕೈಹಾಕಿದೆ’ ಎಂದು ಡಾ.ಪದ್ಮಜಾ ಸುರೇಶ್ ಪ್ರತಿಕ್ರಿಯಿಸಿದರು.

ಅಪರೂಪದ ವ್ಯಕ್ತಿತ್ವದ ಕಲಾಂ ಅವರೊಳಗಿನ ಕಲಾ ಪ್ರೇಮವನ್ನು ನೃತ್ಯದ ಮೂಲಕ ಸಾರಿ ಹೇಳಿದ ‘ಆತ್ಮಾಲಯ’ ಟ್ರಸ್ಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.