ಕಲಾಗ್ರಾಮದಲ್ಲಿ ಜಿಎಸ್ಎಸ್‌ ಅಂತ್ಯಸಂಸ್ಕಾರ

7

ಕಲಾಗ್ರಾಮದಲ್ಲಿ ಜಿಎಸ್ಎಸ್‌ ಅಂತ್ಯಸಂಸ್ಕಾರ

Published:
Updated:

ಬೆಂಗಳೂರು: ರಾಷ್ಟ್ರಕವಿ ಜಿ.ಎಸ್‌.­ಶಿವರುದ್ರಪ್ಪ ಅವರ ಅಂತ್ಯಸಂಸ್ಕಾರ ಇದೇ ಗುರುವಾರ (ಡಿ. 26) ಬೆಂಗಳೂರು ವಿಶ್ವವಿದ್ಯಾಲ­ಯದ ಬಳಿಯ ಕಲಾಗ್ರಾಮದಲ್ಲಿ ನಡೆಯಲಿದೆ.ಅಂತಿಮ ದರ್ಶನ: ಅಂತ್ಯಸಂಸ್ಕಾರಕ್ಕೂ ಮುನ್ನ ನಗರದ ಮೂರು ಕಡೆಗಳಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 8ರಿಂದ 8.30ರವರೆಗೆ ಬನ­ಶಂಕರಿ­ಯಲ್ಲಿರುವ   ಅವರ ಮನೆ ‘ಚೈತ್ರ’­ದಲ್ಲಿ, 9.30ರಿಂದ 10ರವರೆಗೆ ಕನ್ನಡ ಸಾಹಿತ್ಯ  ಪರಿಷತ್ತಿನ ಆವರಣ ಮತ್ತು 10.30ರಿಂದ 2ರವರೆಗೆ ಜೆ.ಸಿ.ರಸ್ತೆ­ಯಲ್ಲಿ­ರುವ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸಾರ್ವಜನಿಕರು ದರ್ಶನ ಪಡೆಯಬಹುದಾಗಿದೆ.ಸಂಜೆ 4.30ಕ್ಕೆ ಸರ್ಕಾರಿ ಗೌರವ­ಗ­ಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry