ಕನ್ನಡ ನಾಡು ಕಂಡ ಅಪ್ರತಿಮ ಕಲಾವಿದರಲ್ಲಿ ಕಲಾತಪಸ್ವಿ ಕೆ. ವೆಂಕಟಪ್ಪ (1886-1965) ಒಬ್ಬರು. ತಮ್ಮ ಬಾಳನ್ನೇ ಕಲಿಕೆಗಾಗಿ ಮೀಸಲಿಟ್ಟ ಅವರು ಅಕ್ಷರಶಃ ಕಲಾತಪಸ್ವಿ. ಚಿತ್ರಕಲೆಯೊಂದಿಗೆ ಸಂಗೀತದಲ್ಲೂ ಅವರಿಗೆ ಪರಿಣತಿಯಿತ್ತು. ವೆಂಕಟಪ್ಪನವರ ವ್ಯಕ್ತಿತ್ವ ಅವರ ಕಲೆಯಷ್ಟೇ ಸ್ವಾರಸ್ಯವಾದುದು. ಮೂಗಿನ ತುದಿಯಲ್ಲೇ ಕೋಪ ಹೊಂದಿದ್ದ ಅವರನ್ನು ‘ಬೆಂಕಿ ನವಾಬ’ ಎನ್ನಲಾಗುತ್ತಿತ್ತು.

‘ಕಲೆಯೆ ಅವನಿಗೆ ಮಡದಿ, ಕಲೆಯೆ ಅವನಿಗೆ ಮಕ್ಕಳು’ ಎಂದು ಗುರು ಅವನೀಂದ್ರನಾಥರು ವೆಂಕಟಪ್ಪನವರ ವಿಚಾರವಾಗಿ ಹೇಳುತ್ತಿದ್ದರಂತೆ. ಮದುವೆಯಾದರೆ ಸಂಸಾರದ ನಿರ್ವಹಣೆಯಲ್ಲಿ ಕಲೆಯ ಕಡೆ ಗಮನ ಕಡಿಮೆಯಾದೀತೆಂಬ ಭಯದಿಂದ ಅವರು ಮದುವೆಯಾಗಲೇ ಇಲ್ಲ. ‘ನಾನು ಕಲಾವಿದನಲ್ಲ, ಕಲಾವಿದ್ಯಾರ್ಥಿಯಷ್ಟೇ!’ ಎನ್ನುವ ವಿನಯ ವೆಂಕಟಪ್ಪನವರದು.

ಗೌಳಿಯಾಗಲಿ, ಕೂಲಿಯಾಳಾಗಲಿ, ಬಡಗಿಯಾಗಲಿ ತಮ್ಮ ಕಲಾಕೃತಿಗಳನ್ನು ನೋಡಬಯಸಿದರೆ ಎಲ್ಲವನ್ನೂ ತೋರಿಸಿ ವಿವರಿಸಿ ಕಳುಹಿಸುವ ತಾಳ್ಮೆ ವೆಂಕಟಪ್ಪನವರಿಗೆ ಇತ್ತು. ಶ್ರೀಮಂತಿಕೆಯ ತೋರಿಕೆಗೆ ಒಲಿದವರನ್ನು ಕಂಡರೆ ಅವರಿಗೆ ಆದರವೇನೂ ಇರಲಿಲ್ಲ. ಇಂಥ ವಿಶಿಷ್ಟ- ವಿಕ್ಷಿಪ್ತ ಕಲಾವಿದನ ಸಾಧನೆ-ಬದುಕಿನ ಕುರಿತು ಪ್ರೊ.ಸಾ.ಕೃ.ರಾಮಚಂದ್ರರಾವ್ ‘ಕಲಾತಪಸ್ವಿ ವೆಂಕಟಪ್ಪ’ ಎನ್ನುವ ಒಳ್ಳೆಯ ಪುಸ್ತಕ ಬರೆದಿದ್ದಾರೆ. ವೆಂಕಟಪ್ಪನವರನ್ನು ಭಿನ್ನ ನೆಲೆಯಲ್ಲಿ ಪರಿಚಯಿಸುವ ಮತ್ತೊಂದು ಪುಸ್ತಕ ಕೆ.ವಿ.ಸುಬ್ರಹ್ಮಣ್ಯಂ ಅವರ ‘ವೆಂಕಟಪ್ಪ: ಸಮಕಾಲೀನ ಪುನರವಲೋಕನ’ ಕೃತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.