ಭಾನುವಾರ, ಮೇ 22, 2022
21 °C

ಕಲಾಶ್ರೀ: ನ. 15ರಿಂದ ಆಯ್ಕೆ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಾಶ್ರೀ: ನ. 15ರಿಂದ ಆಯ್ಕೆ ಶಿಬಿರ

ಬೆಂಗಳೂರು: ಬಾಲ ಭವನವು ರಾಜ್ಯ ಮಟ್ಟದ ಕಲಾಶ್ರೀ ಆಯ್ಕೆ ಶಿಬಿರವನ್ನು ನವೆಂಬರ್ 15 ರಿಂದ 21ರವರೆಗೆ ನಡೆಸಲು ಉದ್ದೇಶಿಸಿದ್ದು, ಶಿಬಿರದಲ್ಲಿ ಭಾಗವಹಿಸಲು ಬೆಂಗಳೂರು ನಗರ ಮಕ್ಕಳಿಗಾಗಿ ಸ್ಥಳೀಯ ಮಟ್ಟದ ಆಯ್ಕೆ ಶಿಬಿರವನ್ನು ಆಯೋಜಿಸಿದೆ.ಇದೇ 29ರಂದು ಚಿತ್ರಕಲೆ, ಕರಕುಶಲ, ಜೇಡಿಮಣ್ಣಿನ ಕಲೆ (ಮೂರು ವಿಭಾಗಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು) ಹಾಗೂ ಕಥೆ, ಕವನ, ಪ್ರಬಂಧ, (ಮೂರು ಕಡ್ಡಾಯ).ಇದೇ 30 ರಂದು ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವಾದ್ಯ  ಸಂಗೀತ, ಯಕ್ಷಗಾನ, ಯಕ್ಷಿಣಿ ಪ್ರದರ್ಶನ, ಸುಗಮ ಸಂಗೀತ, ದೇವರನಾಮ, ಏಕಾಪಾತ್ರಾಭಿನಯಗಳಲ್ಲಿ ಯಾವುದಾದರೂ ಒಂದು ಕಲೆಯನ್ನು ಪ್ರದರ್ಶಿಸಲು ಅವಕಾಶವಿದೆ.9ರಿಂದ16 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು. ನೋಂದಣಿ ಹಾಗೂ ಮಾಹಿತಿಗಾಗಿ  ಸಂಪರ್ಕ: ಬಾಲ ಭವನ ಸೊಸೈಟಿ, ಕಬ್ಬನ್ ಉದ್ಯಾನ. ದೂ: 2286 4189.ರಂಗ ತರಬೇತಿ

ಅಭಿನಯ ತರಂಗ ರಂಗಶಾಲೆ ನವೆಂಬರ್‌ನಲ್ಲಿ ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಆರಂಭಿಸುತ್ತಿದ್ದು, ಅಭಿನಯ, ನಿರ್ದೇಶನ, ನಾಟಕರಚನೆ, ಮೇಕಪ್, ವಸ್ತ್ರ ವಿನ್ಯಾಸ, ರಂಗ ಸಜ್ಜಿಕೆ, ಬೆಳಕು, ರಂಗ ಸಂಗೀತ ಇವುಗಳ ತರಬೇತಿ ನೀಡಲಿದೆ. ತರಗತಿಗಳು ನಿತ್ಯ ಸಂಜೆ 6 ರಿಂದ 9ರವರೆಗೆ ನಡೆಯಲಿವೆ. ಅರ್ಜಿ ಹಾಗೂ ಮಾಹಿತಿಗೆ: ಪ್ರಾಂಶುಪಾಲರು, ಅಭಿನಯ ತರಂಗ, 5ನೇ ಅಡ್ಡರಸ್ತೆ, ಅ.ನ.ಸುಬ್ಬರಾವ್ ರಸ್ತೆ, ಹನುಮಂತನಗರ. ಮೊಬೈಲ್: 98458 25217.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.