ಮೊಳಕಾಲ್ಮುರು: ಉತ್ತಮ ಶಿಕ್ಷಕರಾಗಲು ಪ್ರಶಿಕ್ಷಣಾರ್ಥಿಗಳು ನಿರಂತರ ಕಲಿಕೆ ಮೈಗೂಡಿಸಿಕೊಳ್ಳಬೇಕು ಎಂದು ಶಿಕ್ಷಣ ಸಂಯೋಜಕ ಪಿ. ಮಂಜುನಾಥ್ ಸಲಹೆ ಮಾಡಿದರು.
ತಾಲ್ಲೂಕಿನ ರಾಂಪುರದ ಲಕ್ಷ್ಮೀ ನರಸಿಂಹಸ್ವಾಮಿ ಡಿ.ಇಡಿ ಕಾಲೇಜಿನಲ್ಲಿ ಶುಕ್ರವಾರ ಆರಂಭವಾದ ಚೈತನ್ಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಕಾ ಅವಧಿಯಲ್ಲಿ ಆಯೋಜಿಸುವ ಕಾರ್ಯಾಗಾರ, ಸದುಪಯೋಗ ಮಾಡಿಕೊಳ್ಳಬೇಕು. ಶಿಕ್ಷಕರಾಗಿ ಕೆಲಸ ಮಾಡುವಾಗ ಇವುಗಳ ನಿಜವಾದ ಬೆಲೆ ತಿಳಿಯಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಆರ್. ಚಂದ್ರಶೇಖರ್, ಚೈತನ್ಯದಾಯಕ ಬೋಧನೆಗೆ ಆಸಕ್ತಿ, ಉತ್ಸಾಹವನ್ನು ಪ್ರಶಿಕ್ಷಣಾರ್ಥಿಗಳು ಹೊಂದಿರಬೇಕು ಎಂದರು.
ಗುರುಪ್ರಸಾದ್, ಅಜೀಮುಲ್ಲಾ ಷರೀಫ್, ಮುಖ್ಯಶಿಕ್ಷಕ ಎಸ್.ವಿ. ಪ್ರಕಾಶ್, ಜಿ. ಹನುಮಂತರಾಯಪ್ಪ, ಕಾಸಲ ಯರ್ರಿಸ್ವಾಮಿ, ಎನ್. ಶ್ರೀಕಾಂತಮುನಿ, ಸೈಯದ್ ಅಹಮದ್ ಉಪಸ್ಥಿತರಿದ್ದರು.ಎ.ಟಿ. ಶಶಿಕಲಾ ಸ್ವಾಗತಿಸಿದರು, ಬಿ.ಟಿ. ಗೋವಿಂದಸ್ವಾಮಿ ನಿರೂಪಿಸಿದರು. ಎಸ್.ಎಂ. ವೀರೇಂದ್ರ ಕಾರ್ಯಕ್ರಮ ವಂದಿಸಿದರು.

ರೈತ ಸಭೆ
ಚಳ್ಳಕೆರೆ: ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ಫೆ. 7ರಂದು ಸೋಮವಾರ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ನೇತೃತ್ವದಲ್ಲಿ ರೈತರ ಸಭೆಯನ್ನು ಕರೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.