ಮಂಗಳವಾರ, ಆಗಸ್ಟ್ 11, 2020
27 °C

ಕಳಪೆ ಕಾಮಗಾರಿ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ನಗರಸಭೆ ಕಳಪೆ ಕಾಮಗಾರಿ ಮಂಗಳವಾರ ಅನಾವರಣಗೊಂಡಿತು. ನಗರದ ಕಾಜುಭಾಗ ಆಕಾಶವಾಣಿ ಕೇಂದ್ರದ ಪಕ್ಕದಲ್ಲಿರುವ ಗಟಾರಿನ ಮೇಲೆ ಮುಚ್ಚಿದ ಲಿಂಟಲ್‌ಗಳು ಮರಿದು ಲಗೇಜ್ ಟೆಂಪೋ ಹಾಗೂ ರಾಜಹಂಸ ಬಸ್ಸಿನ ಚಕ್ರಗಳು ಗಟಾರಿನಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಮಂಗಳವಾರ ನಡೆಯಿತು.ದಾವಣಗೆರೆಯಿಂದ ಬಂದ ರಾಜಹಂಸ ಬಸ್ ರಸ್ತೆ ಬದಿಯಲ್ಲಿ ನಿಲ್ಲಿಸಲು ಹೋದಾಗ ಬಸ್‌ನ ಮುಂದಿನ ಚಕ್ರ ಗಟಾರಿಗೆ ಅಳವಡಿಸಿದ್ದ ಲಿಂಟಲ್ ಮೇಲೇರುತ್ತಿದ್ದಂತೆ ಲಿಂಟಲ್ ಮುರಿದು ಚಕ್ರ ಗಟಾರಿಗೆ ಇಳಿಯಿತು.

ಗಟಾರಿನಲ್ಲಿ ಸಿಕ್ಕುಹಾಕಿಕೊಂಡ ಬಸ್ಸನ್ನು ಮೇಲೆತ್ತಬೇಕಾದರೆ ಬಸ್ಸಿನ ಚಾಲಕ, ನಿರ್ವಾಹಕರು ಹರಸಾಹರ ಪಡೆಬೇಕಾಯಿತು.ಈ ಘಟನೆ ನಡೆದ ಕೇಲವೇ ಕ್ಷಣದಲ್ಲಿ ಸಿಮೆಂಟ್ ಬ್ಲಾಕ್ ತುಂಬಿದ ಗೂಡ್ಸ್ ಟೆಂಪೋ ರಸ್ತೆ ಬದಿಯಲ್ಲಿ ನಿಲ್ಲಿಸಲು ಹೋದಾಗ ಲಿಂಟಲ್ ತುಂಡಾಗಿ ಹಿಂದಿನ ಚಕ್ರ ಗಟಾರಿನಲ್ಲಿ ಸಿಕ್ಕಿಹಾಕಿಕೊಂಡಿತು.ಗಟಾರಿನ ಮೇಲೆ ಹಾಕಿರುವ ಲಿಂಟಲ್‌ಗಳು ಗಟ್ಟಿಯಾಗಿರಬಹುದು ಎನ್ನುವ ಕಾರಣದಿಂದ ಚಾಲಕರು ವಾಹನವನ್ನು ನಿಲ್ಲಿಸಲು ಹೋದರು. ಆದರೆ, ಭಾರ ತಾಳಲಾರದೇ ಮುರಿದು ಬಿತ್ತು. ಇದು ಕಾಮಗಾರಿಯ ಗುಣಮಟ್ಟಕ್ಕೆ ಕನ್ನಡಿಯಂತಾಗಿತ್ತು.ಕಾಜುಭಾಗ ಕ್ರಾಸ್‌ನಿಂದ ಗುರುಮಠದ ವರೆಗೆ ಒಂದು ತಿಂಗಳ ಅವಧಿಯಲ್ಲಿ ಒಟ್ಟು ಹತ್ತಕ್ಕೂ ಹೆಚ್ಚು ವಾಹನಗಳು  ಈ ರೀತಿ ಪ್ರಕರಣಗಳು ನಡೆದಿವೆ ಎಂದು ಸ್ಥಳೀಯರು `ಪ್ರಜಾವಾಣಿ~ಗೆ ತಿಳಿಸಿದರು.ಬಸ್ ಹಾಗೂ ಟೆಂಪೋದ  ಚಕ್ರಗಳು ಗಟಾರಿನಲ್ಲಿ ಸಿಕ್ಕಿಹಾಕಿಕೊಂಡ ಬಗ್ಗೆ ವೇದಿಕೆಯ ಪದಾಧಿಕಾರಿಯೊಬ್ಬರು ನಗರಸಭೆ ಸಿವಿಲ್ ವಿಭಾಗದ ಎಂಜಿನಿಯರ್‌ಗೆ ದೂರವಾಣಿ ಕರೆ ಮಾಡಿದರು.ಎಂಜಿನಿಯರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವ ಬದಲು ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಕರೆ ಮಾಡಿ, ವೇದಿಕೆ ಪದಾಧಿಕಾರಿಯ ಮೊಬೈಲ್ ನಂಬರ್ ನೀಡಿ ಹೊಂದಾಣಿಕೆ ಮಾಡಿಸಲು ಮುಂದಾದರೇ ಹೊರತು ಪರಿಶೀಲನೆ ನಡೆಸುವ ಗೋಜಿಗೆ ಹೋಗಲೇ ಇಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.