ನರಗುಂದ: ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ಕಳಸಾ ಬಂಡೂರಿ ಹಾಗೂ ಮಹದಾಯಿ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಸಲ್ಲದು. ಆದ್ದರಿಂದ ಇದರ ಬಗ್ಗೆ ಕೂಡಲೇ ವಿಧಾನಸಭೆಯ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಕಳಸಾ ಬಂಡೂರಿ ಹೋರಾಟ ಸಮಿತಿ ಸದಸ್ಯರು ಪತ್ರಿವನಮಠ ಹಾಗೂ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಮಠಾಧೀಶರು ಆಗ್ರಹಿಸಿದರು.

ಪತ್ರಿವನಮಠದ ಸಿದ್ದವೀರ ಶಿವಯೋಗಿ ಶಿವಾಚಾರ್ಯರು ಹಾಗೂ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿ `ಕಳಸಾ ಬಂಡೂರಿ ಕುರಿತು ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಬರದ ನಾಡಿನಲ್ಲಿ ಕಳಸಾ ಬಂಡೂರಿ ಯೋಜನೆ ಅತ್ಯವಶ್ಯವಾಗಿದೆ. ಸರಕಾರ ಹಿಂದೇಟು ಹಾಕುತ್ತಿದ್ದು, ರೈತರ ಹಿತ ಕಾಪಾಡಲು ಕೂಡಲೇ ಕಳಸಾ ಬಂಡೂರಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ ಸ್ವಾತಂತ್ರ್ಯ ನಂತರ ಕಾವೇರಿ ಪ್ರಾಧಿಕಾರ, ಕೃಷ್ಣಾ ಕೊಳವೆ ಯೋಜನೆ ಹಾಗೂ ಮಹದಾಯಿ ಕಣಿವೆ ತಿರುವು ಯೋಜನೆ ಆರಂಭಗೊಂಡು ಹಲವಾರು ದಶಕ ಕಳೆದರೂ ಅವುಗಳ ಕಾಮಗಾರಿ ಪೂರ್ಣಗೊಂಡಿಲ್ಲ. ಕೇವಲ ಪತ್ರಿಕೆಗಳಲ್ಲಿ ಕಾಮಗಾರಿ ಕುರಿತು ಪ್ರಕಟವಾಗಿವೆಯೇ ಹೊರತು ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ ಎಂದರು.

ಮಹದಾಯಿ ಕಣಿವೆ ತಿರುವು ಯೋಜನೆಯಲ್ಲಿರುವ ಈ ಭಾಗದ ಒಂಬತ್ತು ತಾಲ್ಲೂಕುಗಳಿಗೆ ನೀರುಣಿಸುವ ಕಳಸಾ ಬಂಡೂರಿ ಯೋಜನೆ ಬಗ್ಗೆ ಲಕ್ಷ್ಯ ವಹಿಸಬೇಕಾಗಿದೆ. ಇದರ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಯಾಗಬೇಕು. ಕಳಸಾ ಬಂಡೂರಿಗೆ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ನೀರಿನ, ಅರಣ್ಯದ ಅನುಮತಿಯನ್ನು ನವೀಕರಿಸಿ ಯೋಜನೆ ಜಾರಿಯಾಗಲು ಸಹಕಾರಿಯಾಗಬೇಕು.

ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಕುಲಕರ್ಣಿ ಎಚ್ಚರಿಸಿದರು. ರವಿ ಹೊಂಗಲ, ಬಸನಗೌಡ ಚಿಕ್ಕನಗೌಡ್ರ, ಉಮೇಶ ಯಳ್ಳೂರು, ಮಂಜು ಮೆಣಸಗಿ, ಬಿ.ವಿ.ಕರಬಸನ್ನವರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.