ಸೋಮವಾರ, ಮೇ 23, 2022
30 °C

ಕಳ್ಳ ಬೆಕ್ಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳ್ಳ ಬೆಕ್ಕು

ಅದೊಂದು ಕಳ್ಳ ಬೆಕ್ಕು. ತಾನು ವಾಸವಿದ್ದ ಮನೆಯಲ್ಲಿನ ಇಲಿಗಳನ್ನೆಲ್ಲಾ ತಿಂದಿತು. ಮನೆಯವರಿಗೆ ಖುಷಿಯೋ ಖುಷಿ. ಅವರ ಮನೆಯಲ್ಲೊಂದು ಪುಟ್ಟ ಮಗು ಇತ್ತು. ಆ ಮಗುವಿಗೆ ಇಲಿಗಳಿಂದ ತೊಂದರೆಯಾಗಬಾರದೆಂದು ಬೆಕ್ಕನ್ನು ಸಾಕಿದ್ದರು. ಬೆಕ್ಕು ಇಲಿಗಳನ್ನೇನೋ ತಿಂದಿತು.ಅದರ ಜೊತೆಗೆ ಮಗುವಿಗಾಗಿ ಇಡುತ್ತಿದ್ದ ಹಾಲನ್ನೂ ಕದ್ದು ಕುಡಿಯುತ್ತಿತ್ತು. ಇದನ್ನು ಗಮನಿಸಿದ ಮನೆ ಮಾಲೀಕ ಬೆಕ್ಕನ್ನು ಮನೆಯಿಂದ ಓಡಿಸಲು ನಿರ್ಧರಿಸಿದ.ಆಗ ಬೆಕ್ಕು, ‘ನಾನು ನಿಮ್ಮ ಮನೆಯ ಇಲಿಗಳನ್ನು ಓಡಿಸಿ ನಿಮಗೆ ಎಷ್ಟು ಸಹಾಯ ಮಾಡಿದ್ದೇನೆ. ನನ್ನನ್ನು ಓಡಿಸುವಿರಾ?’ ಎಂದು ಕೇಳಿತು.ಆಗ ಮಾಲೀಕ- ‘ನೀನು ಸಹಾಯ ಮಾಡಿರುವುದು ನಿಜ. ಆದರೆ ನಿನಗೆ ಅಗತ್ಯ ಇರುವ ಹಾಲನ್ನು ನಾವು ನೀಡುತ್ತಿದ್ದರೂ ನೀನು ಮಗುವಿನ ಹಾಲನ್ನು ಕದ್ದು ಕುಡಿಯುತ್ತಿರುವೆ. ಇದರಿಂದ ಪ್ರತೀ ರಾತ್ರಿ ಮಗುವಿಗೆ ಹಾಲು ಇಲ್ಲದಂತಾಗಿ ಅದು ಅಳುತ್ತಿದೆ. ನಿನ್ನಿಂದ ಆಗಿರುವ ಉಪಕಾರಕ್ಕಿಂತ ಅಪಕಾರವೇ ಹೆಚ್ಚಾಯಿತು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.