ಬುಧವಾರ, ಮೇ 12, 2021
26 °C

ಕಸಾಪ ಚುನಾವಣೆ: ಪ್ರಣಾಳಿಕೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಎಲ್ಲರ ಸಹಕಾರ ಹಾಗೂ ವಿಶ್ವಾಸದೊಂದಿಗೆ ಸಂಘಟನೆ ಮಾಡಬೇಕಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಪ್ರೊ. ಕೆ.ಬಿ.ತಳಗೇರಿ ಹೇಳಿದರು.

ನಗರದಲ್ಲಿ  ನಡೆದ ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ಡಾ. ಶಿವಪ್ಪ ಕುರಿ ಅವರ ಚುನಾವಣೆ ಪ್ರಣಾಳಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಆಸಕ್ತ ಮನಸ್ಸುಗಳನ್ನು ಪರಿಷತ್ತಿ ನಂತ ಆಕರ್ಷಿಸಬೇಕಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಕೆಲವರಿಗಷ್ಟೇ ಸೀಮಿತವಾಗದೆ ಎಲ್ಲರಿಗೂ ಅವಕಾಶ ಸಿಗುವಂತಾಗಬೇಕಿದೆ. ಅಂತಹ ಕೆಲಸವನ್ನು ಡಾ.ಕುರಿ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.ಅಂದಾನಪ್ಪ ವಿಭೂತಿ ಮಾತನಾಡಿ, ಜಿಲ್ಲೆಯಲ್ಲಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸಹೃದಯತೆ ಡಾ. ಕುರಿ ಅವರಲ್ಲಿದೆ. ಅವರ ಪರವಾಗಿ ಜಿಲ್ಲೆಯಲ್ಲಿ ಕಸಾಪ ಸದಸ್ಯರಿಂದ ಪೂರಕ ಪ್ರತಿಕ್ರಿಯೆ  ವ್ಯಕ್ತವಾಗುತ್ತಿದೆ ಎಂದರು.ನಿವೃತ್ತ ಪ್ರಾಚಾರ್ಯ ಕೆ.ಎಚ್. ಬೇಲೂರ ಮಾತನಾಡಿ, `ಸಾಹಿತ್ಯ ಕ್ಷೇತ್ರದಲ್ಲಿ ಚುನಾವಣೆ ಬೇಡ ಎಂದು ಅವಿರೋಧ ಆಯ್ಕೆಗೆ ಸಾಕಷ್ಟು ಪ್ರಯತ್ನ ಮಾಡಿದೆವು. ಆದರೆ ಕೆಲವರ ಧೋರಣೆಯಿಂದ ಚುನಾವಣೆ ಅನಿವಾರ್ಯವಾಯಿತು.~ ಎಂದು ಹೇಳಿದರು.ಡಾ. ಕುರಿ ಮಾತನಾಡಿ, `ಚುನಾವ ಣೆಗೆ ಸ್ಪರ್ಧಿಸಬೇಕೆಂಬ ಉದ್ದೇಶದಿಂದ ಕಳೆದ ಆರು ತಿಂಗಳುಗಳಿಂದ ಸಿದ್ಧತೆ ಮಾಡಿಕೊಂಡಿ ದ್ದೇನೆ. ಚುನಾವಣೆ ಅಧಿಸೂಚನೆ ಪ್ರಕಟವಾದ ದಿನದಿಂದ ಎಲ್ಲ ತಾಲ್ಲೂಕುಗಳ ಪ್ರಮುಖರೊಂದಿಗೆ ಸಂಪರ್ಕದಲ್ಲಿದ್ದೇನೆ. ಎಲ್ಲ ತಾಲ್ಲೂಕು ಗಳಿಗೆ ಹೋಗಿ ಸಾಹಿತ್ಯಾಸಕ್ತರು ಹಾಗೂ ಹಿರಿಯರ ಮಾರ್ಗದರ್ಶನ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದೇನೆ. ನನಗೆ ಅಪಾರ ಬೆಂಬಲ ವ್ಯಕ್ತ ವಾಗುತ್ತಿದ್ದು, ಗೆಲುವು ಖಚಿತ ಎನ್ನಿಸುತ್ತಿದೆ.~ ಎಂದರು.ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸಾಹಿತ್ಯ ಭವನ ನಿರ್ಮಿಸುವುದು. ಜಿಲ್ಲೆಯ ಪ್ರಾಚೀನ, ಮಧ್ಯಕಾಲೀನ, ನವೋದಯ, ಸಮಕಾಲೀನ ಬರಹಗಾರರ, ಸಾಹಿತಿ ಗಳ ಕೃತಿಗಳನ್ನು ಜನರಿಗೆ ಪರಿಚಯಿ ಸುವುದು ಎಂದರು. ಪ್ರತಿ ತಾಲ್ಲೂಕಿನಲ್ಲಿ ಸಾಹಿತ್ಯ ಶಿಬಿರ ಏರ್ಪಡಿಸಿ ಹಿರಿಯ, ಉದಯೋನ್ಮುಖ ಲೇಖಕರ ವಾಚನ- ವ್ಯಾಖ್ಯಾನ ಏರ್ಪಡಿಸುವುದು. ಉದಯೋನ್ಮುಖ ಲೇಖಕರಿಗೆ ಅನುಭವಿ ಲೇಖಕರ ಸಂಪರ್ಕ, ಸಾಹಿತ್ಯ ಸಂವಾದ ಏರ್ಪಡಿಸುವುದು. ಪ್ರತಿ ಹೋಬಳಿ, ತಾಲೂಕು,ಗ್ರಾಮ ಮಟ್ಟಗಳಲ್ಲಿ ದತ್ತಿ ಉಪನ್ಯಾಸಗಳನ್ನು ಅರ್ಥಪೂರ್ಣವಾಗಿ ಜರುಗಿಸುವುದು. ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಜಿಲ್ಲಾ ಸಮ್ಮೇಳನಗಳನ್ನು ಜರುಗಿ ಸುವುದು. ಉಪನ್ಯಾಸ-ವಿಚಾರಗೋಷ್ಠಿ ಹಾಗೂ ಕಮ್ಮಟಗಳನ್ನು ಏರ್ಪಡಿಸು ವುದು ನನ್ನ ಸಂಕಲ್ಪವಾಗಿದೆ~ ಎಂದು ಕುರಿ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಜಿಲ್ಲಾ ಕಸಾಪಕ್ಕೆ ಹೊಸ ಆಯಾಮ ಬಯಸಿದ್ದಾರೆ. ಜಿಲ್ಲಾ ಕಸಾಪವನ್ನು ರಾಜ್ಯದಲ್ಲೆೀ ಮಾದರಿಯನ್ನಾಗಿ ಮಾಡಬೇಕು ಹಾಗೂ ವಿಶೇಷ ಸ್ಥಾನ ದೊರೆಯುವಂತೆ ಮಾಡಲು ಪ್ರಯತ್ನಿಸುವುದಾಗಿ ಅವರು ಹೇಳಿದರು.ಕಾರ್ಯಕ್ರಮದಲ್ಲಿ ತಾಲ್ಲೂಕು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎಸ್. ತಳವಾರ, ಜಿಲ್ಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎನ್. ಬಳ್ಳಾರಿ, ಡಾ. ಶರಣಬಸವ ವೆಂಕಟಾಪುರ, ಕಿಶೋರಬಾಬು ನಾಗರಕಟ್ಟಿ, ಎನ್.ಎಂ. ಅಂಬಲಿಯವರ, ಎಚ್.ಆರ್. ಕೋಣಿಮನಿ, ಶರಣು ಗೋಗೇರಿ, ರಮೇಶ ಸಜಗಾರ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.