ಶುಕ್ರವಾರ, ಜೂನ್ 25, 2021
29 °C

ಕಸಾಪ: ಜಯಪ್ರಕಾಶ್‌ಗೌಡ, ಮೀರಾ ಬೆಂಬಲಿಸಲು ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳವಳ್ಳಿ: ಏ.29ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ಕೇಂದ್ರ ಸ್ಥಾನಕ್ಕೆ ಸ್ಪರ್ಧಿಸಿರುವ ಪ್ರೊ.ಜಯಪ್ರಕಾಶ್‌ಗೌಡ ಹಾಗೂ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮೀರಾಶಿವಲಿಂಗಯ್ಯ ಅವರನ್ನು ಬೆಂಬಲಿಸಲು ಶನಿವಾರ ಪಟ್ಟಣದ ಟಿಎಪಿಸಿಎಂಎಸ್ ಕಟ್ಟಡದಲ್ಲಿ ಹಲವು ಮುಖಂಡರು ಸೇರಿ ಚರ್ಚಿಸಿ ತೀರ್ಮಾನಿಸಿದರು.ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಮೀರಾಶಿವಲಿಂಗಯ್ಯ ಅವರ ಉಪಸ್ಥಿತಿಯಲ್ಲಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ಎ.ಚಿಕ್ಕರಾಜು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕೇಂದ್ರಸ್ಥಾನಕ್ಕೆ ಸದಾ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿರುವ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಅವರನ್ನು ಬೆಂಬಲಿಸಲು ತೀರ್ಮಾನಿಸಲಾಯಿತು.ಬಳಿಕ ಎಂ.ಎ.ಚಿಕ್ಕರಾಜು ಮಾತನಾಡಿ, ಮಂಡ್ಯದಲ್ಲಿ ಹಿಂದೆ ನಡೆದ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೀರಾಶಿವಲಿಂಗಯ್ಯ ಅವರನ್ನು ಬಹುತೇಕರು ಆಯ್ಕೆ ಮಾಡುವಂತೆ ತೀರ್ಮಾ ನಿಸಿದ್ದರೂ, ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತುತ ಅಧ್ಯಕ್ಷರಾಗಿದ್ದ ಎಚ್.ಎಸ್.ಮುದ್ದೇಗೌಡರೆ ಪುನಾರಾಯ್ಕೆ ಬಯಸಿದ್ದು, ಅವರನ್ನು ಚುನಾವಣೆ ಕಣದಿಂದ ಹಿಂದೆ ಸರಿಯುವಂತೆ ಮನವೊಲಿಸಲು ಪ್ರಯತ್ನಿಸಿ, ಅವಿರೋಧವಾಗಿ ಮೀರಾ ಶಿವಲಿಂಗಯ್ಯ ಅವರನ್ನು ಆಯ್ಕೆಮಾಡಲು ಯತ್ನಮಾಡಬೇಕಿದೆ ಇದಕ್ಕೆ ಹಿರಿಯರು, ಸಾಹಿತ್ಯ ಪರಿಷತ್ತಿನ ಸದಸ್ಯರು ಸಹಕಾರ ನೀಡಿ ಎಂದು ಮನವಿ ಮಾಡಿದರು.ಸಭೆಯಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಮಲ್ಲಿಕಾರ್ಜು ನಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಕೃಷ್ಣೇಗೌಡಹುಸ್ಕೂರು, ಮಾಜಿ ಅಧ್ಯಕ್ಷ ಪಿ.ದೇವರಾಜು, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಎಚ್.ವಿ.ಜಯರಾಂ, ಧರಣೇಂದ್ರಯ್ಯ, ಜಿ.ಟಿ. ವೀರಪ್ಪ, ಡಿ.ಪಿ.ಸ್ವಾಮಿ, ಮುಖಂಡರಾದ ದಕ್ಷಿಣಾ ಮೂರ್ತಿ, ಬಸಪ್ಪನೆಲ್ಮಾಕನಹಳ್ಳಿ, ಶಿವಮಾದೇಗೌಡ, ಎಚ್. ಆರ್. ಅಶೋಕ್‌ಕುಮಾರ್, ವಾಸುದೇವ ಮೂರ್ತಿ, ದೊಡ್ಡಣ್ಣ, ಕೆ.ಸಿ.ಆನಂದ್, ಮರಿಸ್ವಾಮಿ,ಶಿವನಂಜು, ಶಾರದರಮೇಶ್‌ರಾಜು, ಸುಶೀಲ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.