ಗುರುವಾರ , ಮೇ 28, 2020
27 °C

ಕಾಂಗೊ ಜ್ವರಕ್ಕೆ ಗುಜರಾತ್ ನಲ್ಲಿ ಮೂವರ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್, (ಪಿಟಿಐ): ಸಾಕು ಪ್ರಾಣಿಗಳ ಮೈ ಮೇಲಿನ ಕೀಟ ಉಣ್ಣಿಯ ಮೂಲದಿಂದ ಹರಡುವ ಪ್ರಾಣಾಂತಿಕ ವೈರಸ್ ಜ್ವರ (ಕ್ರಿಮಿನ್- ಕಾಂಗೊ ಹೆಮೊರ್ಹೆಜಿಕ್ ಫಿವರ್ - ಸಿಸಿಎಚ್ ಎಫ್)  ಗುಜರಾತಿನಲ್ಲಿ ಕಾಣಿಸಿಕೊಂಡಿದ್ದು, ವೈದ್ಯ, ದಾದಿಯೂ ಸೇರಿದಂತೆ ಮೂವರು ಈ ಜ್ವರಕ್ಕೆ ಬಲಿಯಾಗಿದ್ದಾರೆ. ಈ ಜ್ವರವನ್ನು  ಸಾಮಾನ್ಯವಾಗಿ ಕಾಂಗೊ ಜ್ವರ ಎಂದು ಗುರುತಿಸಲಾಗುತ್ತಿದೆ.

ಈ ಕಾಂಗೊ ಜ್ವರದಿಂದ ಮೂರು ಸಾವುಗಳು ಸಂಭವಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಆರೋಗ್ಯ ಇಲಾಖೆ, ಮೃತ ರೋಗಿಯ ಊರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಇಂಥ ಜ್ವರದಿಂದ ಬಳಲುತ್ತಿರುವವರ ಸರ್ವೆ ನಡೆಸಲು ಕ್ರಮ ಕೈಗೊಂಡಿದೆ.

ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ರೋಗಗಳ ಅಧ್ಯಯನ ಮಾಡುವ ರಾಷ್ಟ್ರೀಯ ಸಂಸ್ಥೆಯ(ನ್ಯಾಷನಲ್ ಇನ್ಸಿಟಿಟೂಟ್ ಆಫ್ ಕಮ್ಯೂನಿಕೇಬಲ್ ಡಿಸಿಜೆಸ್) ತಜ್ಞರ ತಂಡವು ರಾಜ್ಯಕ್ಕೆ ಭೇಟಿಕೊಡಲಿದೆ.

ಸನಂದ ತಾಲ್ಲೂಕಿನ ಕೋಲಟ್ ಗ್ರಾಮದ ಮಹಿಳೆಯೊಬ್ಬಳು ಈ ತಿಂಗಳ ಮೊದಲ ವಾರದಲ್ಲಿ ಈ ಜ್ವರದಿಂದ ಮೃತಪಟ್ಟಿದ್ದಳು. ನಿನ್ನೆ ಮಂಗಳವಾರ ಖಾಸಗಿ ಆಸ್ಪತ್ರೆಯಲ್ಲಿ ಆ ರೋಗಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಮತ್ತು ಚಿಕಿತ್ಸೆಗೆ ಸಹಾಯ ನೀಡಿದ್ದ ದಾದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ  ಡಾ. ಪರೇಶ್ ದೇವ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮೃತರಾದವರನ್ನು ರೋಗಿ ಅಮಿನಾ ಮೋಮಿನ್ (30), ವೈದ್ಯ ಡಾ. ಗಗನ್ ಶರ್ಮಾ ಮತ್ತು ದಾದಿ ಆಶಾ ಜಾನ್ ಎಂದು ಗುರುತಿಸಲಾಗಿದೆ. ಆಸ್ಪತ್ರೆಗೆ ದಾಖಲಾದಾಗ ಅಮಿನಾ ಮೋಮಿನ್  ಹೊಟ್ಟೆನೋವು, ವಾಂತಿ ಜೊತೆಗೆ ಜ್ವರದಿಂದ ನರಳುತ್ತಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.