ಗುರುವಾರ , ಜನವರಿ 23, 2020
26 °C

ಕಾಂಗ್ರೆಸ್‌ನತ್ತ ಜಿಎಸ್‌ಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೋಮುವಾದಿಗಳ ಸಹ­­ವಾಸ ಸಾಕಾಗಿದೆ. ಲೋಕಸಭೆ ಚುನಾ­ವಣೆ­ಗೆ ಮುನ್ನ ರಾಜಕೀಯ ತೀರ್ಮಾನ ಪ್ರಕಟಿಸುತ್ತೇನೆ ಎಂದು ಬಿಜೆಪಿ ಲೋಕ­ಸಭಾ ಸದಸ್ಯ ಜಿ.ಎಸ್.­ಬಸವರಾಜು ಶನಿವಾರ ತಿಳಿಸಿದರು.‘ಕುರಿ ಮಂದೆಯಿಂದ ಹೊರಬಂದ ಕುರಿ­­ಯೊಂದು ಮತ್ತೆ ಮಂದೆ ಸೇರದ ಹೊರತು ಅದಕ್ಕೆ ಉಳಿಗಾಲ ಇರುವು­ದಿಲ್ಲ’ ಎಂದು ಹೇಳುವ ಮೂಲಕ ಮತ್ತೆ ಕಾಂಗ್ರೆಸ್ ಸೇರಲು ಚಿಂತಿಸಿರು­ವು­ದಾಗಿ ಸ್ಪಷ್ಟಪಡಿಸಿದರು.‘ಕಾಂಗ್ರೆಸ್‌ ಸೇರ್ಪಡೆಗೆ ಆ ಪಕ್ಷದ ಮುಖಂಡರಿಂದಲೇ ಆಕ್ಷೇಪ ವ್ಯಕ್ತ­ವಾಗು­ತ್ತಿ­ರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಚಿವ ಎ.ಕೆ.ಆಂಟನಿ ನಿರ್ಧಾರದ ಮುಂದೆ ಕೆಪಿಸಿಸಿ ಹಾಗೂ ಎಐಸಿಸಿ ಆಟ ನಡೆಯದು ಎಂದು ಹೇಳಿದರು.

ಪ್ರತಿಕ್ರಿಯಿಸಿ (+)