ಶುಕ್ರವಾರ, ಜೂನ್ 18, 2021
27 °C
ಹರಿಹರ ನಗರಸಭಯಲ್ಲಿ ದೋಸ್ತಿ, ಲೋಕಸಭೆ ಚುನಾವಣೆಯಲ್ಲಿ ಕುಸ್ತಿ

ಕಾಂಗ್ರೆಸ್–ಬಿಜೆಪಿ ಮೈತ್ರಿಕೂಟದ ಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ:  ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ನಗರಸಭೆ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಹಜಾದಾ ಎಸ್.ಕೆ.ಸನಾವುಲ್ಲಾ ಮತ್ತು ಉಪಾಧ್ಯಕ್ಷರಾಗಿ ಅಂಬುಜಾಬಾಯಿ ಪಿ.ರಾಜೋಳಿ ಆಯ್ಕೆಯಾಗುವ ಮೂಲಕ ನಗರಸಭೆ ಆಡಳಿತ ಕಾಂಗ್ರೆಸ್-–ಬಿಜೆಪಿ ಮೈತ್ರಿಕೂಟದ ಪಾಲಾಗಿದೆ.ಹೈಕೋರ್ಟ್ ಆದೇಶದಂತೆ ಮಂಗಳವಾರ ನಡೆದ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ನಗರಸಭೆ ಗದ್ದುಗೆ ಪಡೆಯುವಲ್ಲಿ ಯಶಸ್ವಿಯಾಗಿವೆ.ನಗರಸಭೆ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ಬೆಳಿಗ್ಗೆ 10ಕ್ಕೆ ಆರಂಭಗೊಂಡಿತ್ತು ಬೆಳಿಗ್ಗೆ 11ರ ವರೆಗೆ ನಾಮಪತ್ರ ಸ್ವೀಕರಿಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಎಸ್.ಕೆ.ಶಹಜಾದಾ ಮತ್ತು ಜೆಡಿಎಸ್ ಪಕ್ಷದಿಂದ ನಗೀನಾ ಸುಬಾನ್, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಅಂಬುಜಾಬಾಯಿ ಮತ್ತು ಜೆಡಿಎಸ್ ಪಕ್ಷದ ಗಂಗಮ್ಮ ಕೋಡಿಹಳ್ಳಿ ನಾಮಪತ್ರ ಸಲ್ಲಿಸಿದ್ದರು.ಮಧ್ಯಾಹ್ನ 1ಕ್ಕೆ ಚುನಾವಣೆ ಆರಂಭಗೊಂಡಿತು. ಎಲ್ಲಾ 31 ಸದಸ್ಯರೂ ಚುನಾವಣೆಯಲ್ಲಿ ಭಾಗವಹಿಸಿದ್ದರು. ಉಮೇದು ವಾರಿಕೆಯಿಂದ ಯಾರು ಹಿಂದೆ ಸರಿಯದ ಕಾರಣ ಚುನಾವಣೆ ನಡೆದು. ಕೈ ಎತ್ತುವ ಮೂಲಕ ನಗರಸಭೆ ಸದಸ್ಯರು ಮತದಾನ ಮಾಡಿದರು.ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್.ಕೆ.ಶಹಜಾದಾ 20 ಹಾಗೂ ನಗೀನಾ ಸುಬಾನ್ 11, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಂಬುಜಾಬಾಯಿ 20 ಹಾಗೂ ಗಂಗಮ್ಮ 11 ಮತಗಳನ್ನು ಪಡೆದರು.ಮೈತ್ರಿಕೂಟದ ಪರವಾಗಿ ಕಾಂಗ್ರೆಸ್‌ನ 13, ಬಿಜೆಪಿ 5 ಮತ್ತು ಪಕ್ಷೇತರ 2 ಹಾಗೂ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಜೆಡಿಎಸ್ 10 ಮತ್ತು ಒಬ್ಬ ಪಕ್ಷೇತರ ಸದಸ್ಯರು ಮತ ಚಲಾಯಿಸಿದರು.ನಗರಸಭೆಗೆ ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯಾಗಿ ಆಯ್ಕೆಯಾ ದವರಿಗೆ, ಸಂಸದ ಜಿ.ಎಂ.ಸಿದ್ದೇಶ್ವರ್, ಮಾಜಿ ಶಾಸಕ ಬಿ.ಪಿ.ಹರೀಶ್, ಕಾಂಗ್ರೆಸ್ ಮುಖಂಡ ಎಸ್.ರಾಮಪ್ಪ, ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಅಭಿನಂದಿಸಿದರು.

ಉಪ ವಿಭಾಗಾಧಿಕಾರಿ ಡಾ.ಎಸ್. ನಾಗರಾಜು, ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.