ಶನಿವಾರ, ಫೆಬ್ರವರಿ 27, 2021
25 °C
ಶ್ರೀರಂಗಪಟ್ಟಣದಲ್ಲಿ ‘ಯುವದೃಷ್ಟಿ– 2014’ ಕಾರ್ಯಾಗಾರ ಆರಂಭ

ಕಾಂಗ್ರೆಸ್ ಬಲವರ್ಧನೆಗೆ ಮುನ್ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ಬಲವರ್ಧನೆಗೆ ಮುನ್ನುಡಿ

ಶ್ರೀರಂಗಪಟ್ಟಣ: ರಾಜ್ಯ ಯುವ ಕಾಂಗ್ರೆಸ್‌ನ 3 ದಿನಗಳ ‘ಯುವದೃಷ್ಟಿ–2014’ ಖಾಸಗಿ ರೆಸಾರ್ಟ್‌ನಲ್ಲಿ ಸೋಮವಾರದಿಂದ ಶುರುವಾಗಿದೆ.ಯುವ ಕಾಂಗ್ರೆಸ್‌ನ ರಾಜ್ಯ ಸಮಿತಿ, ಲೋಕಸಭಾ ಕ್ಷೇತ್ರ ಹಾಗೂ ವಿಧಾನಸಭಾ ಕ್ಷೇತ್ರಗಳ ಯುವ ಕಾಂಗ್ರೆಸ್‌ನ ನೂತನ ಪದಾಧಿಕಾರಿಗಳಿಗಾಗಿ ಏರ್ಪಡಿಸಿರುವ ಕಾರ್ಯಾಗಾರ ರಾಜ್ಯಾಧ್ಯಕ್ಷ ರಿಜ್ವಾನ್‌ ಅರ್ಷದ್‌ ಅವರ ನೇತೃತ್ವದಲ್ಲಿ ನಡೆಯುತ್ತಿದೆ.ರಾಜ್ಯ ಸಮಿತಿಯ 29 ಪದಾಧಿಕಾರಿಗಳು, ಲೋಕಸಭಾ ಕ್ಷೇತ್ರಗಳ 189 ಪದಾಧಿಕಾರಿಗಳು ಹಾಗೂ ವಿಧಾನಸಭಾ ಕ್ಷೇತ್ರಗಳ 209 ಪದಾಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ.‘ಪಕ್ಷ ಸಂಘಟನೆ, ನಾಯಕತ್ವ ಗುಣ, ಹೊಂದಾಣಿಕೆಯ ಗುಣ ಬೆಳೆಸುವ ಕುರಿತು ಕಾರ್ಯಾಗಾರದಲ್ಲಿ ಯುವ ಸಾರಥಿಗಳಿಗೆ ತರಬೇತಿ ನೀಡಲಾಗುತ್ತದೆ’ ಎಂದು ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿನಟರಾಜ್‌ ತಿಳಿಸಿದ್ದಾರೆ.ಯುವ ಕಾಂಗ್ರೆಸ್‌ ಪದಾಧಿಕಾರಿಗಳಿಗೆ ತರಬೇತಿ ನೀಡಲು ನವದೆಹಲಿಯ ಜವಾಹರಲಾಲ್‌ ನೆಹರು ಲೀಡರ್‌ಶಿಪ್‌ ಡೆವಲಪ್‌ಮೆಂಟ್‌ ಇನ್‌್ಸಸ್ಟಿಟ್ಯೂಟ್‌ನ 20 ಮಂದಿ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿದ್ದಾರೆ ಎಂದು ಹೇಳಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಕಾರ್ಯಾಗಾರದಲ್ಲಿ ಪಾಲ್ಗೊಂಡು ಕಾಂಗ್ರೆಸ್‌ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಸಲಹೆ ನೀಡಿರುವುದಾಗಿ ತಿಳಿದು ಬಂದಿದೆ.ರಾಜ್ಯ ಯುವ ಕಾಂಗ್ರೆಸ್‌ನ ಉಪಾಧ್ಯಕ್ಷ ವರುಣ್‌, ಪ್ರಧಾನ ಕಾರ್ಯದರ್ಶಿ ಪ್ರಸನ್ನ, ಜಿಲ್ಲಾಧ್ಯಕ್ಷ ಎಂ.ಆರ್‌. ಯತಿರಾಜ್‌, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ತೇಜಸ್ವಿನಿಗೌಡ ಪಾಲ್ಗೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.