ಬೆಳಗಾವಿ: ಕಳೆದ ಐದು ವರ್ಷಗಳ ಉತ್ತಮ ಸಾಧನೆ ಗಮನಿಸಿದ ನ್ಯಾಕ್ ಸಮಿತಿ ಈ ಗೌರವ ನೀಡಿದೆ. ಈ ಹಿಂದೆ ಕಾಲೇಜು ಬಿ ಗ್ರೇಡ್ ಹೊಂದಿತ್ತು. ಆ ಅವಧಿಯಲ್ಲಿ ಕಾಲೇಜು ಮಾಡಿರುವ ಸಾಧನೆ ಗಮನಿಸಿ ಮತ್ತಷ್ಟು ಉತ್ತಮ ದರ್ಜೆಗೇರಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕಳೆದ ವರ್ಷಗಳಲ್ಲಿ ಕಾಲೇಜಿಗೆ ಖ್ಯಾತ ವಿಜ್ಞಾನಿ ಡಾ. ಕೆ. ವಿಜಯ ಮೋಹನನ್, ವಿಶ್ರಾಂತ ಕುಲಪತಿ ಡಾ. ಎಂ.ಎಂ. ಕಲಬುರ್ಗಿ, ವಿಟಿಯು ವಿಶ್ರಾಂತ ಕುಲಪತಿ ಡಾ. ಎಸ್.ಪಿ. ಖಿಂಚಾ, ಕೆಎಲ್ಇ ಕುಲಪತಿ ಡಾ. ಚಂದ್ರಕಾಂತ ಕೊಕಾಟೆ, ಹಂಪಿ ವಿವಿಯ ಕುಲಪತಿ ಡಾ. ಎ. ಮುರಿಗೆಪ್ಪ, ಪುಣೆ ವಿವಿಯ ರಿಜಿಸ್ಟ್ರಾರ್ ಡಾ. ಪಂಡಿತ್ ವಿದ್ಯಾಸಾಗರ್, ಇಸ್ರೋ ವಿಜ್ಞಾನಿ ವಿ.ಎನ್. ಮಿಸಾಳೆ ಮೊದಲಾದ ಗಣ್ಯರು ಭೇಟಿ ಕೊಟ್ಟಿದ್ದರು.

ಕಾಲೇಜಿನ ಶೇ 65ರಷ್ಟು ಅಧ್ಯಾಪಕರು ವಿವಿಧ ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ 17 ಪ್ರಬಂಧಗಳು ಮಂಡನೆಗೊಂಡಿವೆ. 25ಕ್ಕೂ ಅಧಿಕ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡಿದ್ದಾರೆ. ವಿವಿಧ ವಿಭಾಗಗಳಲ್ಲಿ 16 ಕೃತಿಗಳು ಪ್ರಕಟಗೊಂಡಿವೆ. ಒಟ್ಟು 41 ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸದರಿ ಕಾಲೇಜಿನಲ್ಲಿ ಶೇ 70ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕಳೆದ ಐದು ವರ್ಷಗಳ ಅವಧಿಯಲ್ಲಿ ರೂ. 40 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗಿದೆ. ಕಾಲೇಜಿನ ಸರಾಸರಿ ಫಲಿತಾಂಶ ಶೇ 80ರಷ್ಟು ಆಗಿದೆ. 58 ಮಂದಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ರಾಷ್ಟ್ರಮಟ್ಟಕ್ಕೆ 7 ಮಂದಿ ಆಯ್ಕೆಯಾಗಿದ್ದಾರೆ. ಜತೆಗೆ ಕ್ಯಾಂಪಸ್ ಸಂದರ್ಶನದಲ್ಲಿ 250ಕ್ಕೂ ಅಧಿಕ ವಿದ್ಯಾರ್ಥಿಗಳು ನೇಮಕಾತಿಗೊಂಡಿದ್ದಾರೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಿ.ಎ. ಪಾಟೀಲ, ಉಪನ್ಯಾಸಕ ಎಸ್.ಎ. ಕುಲಕರ್ಣಿ, ಉಪಾಧ್ಯಕ್ಷ ರಾಜಾಭಾವು ಪಾಟೀಲ, ಡಿ.ಎಸ್. ಚೌಗಲೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.