ಅದೊಂದು ಪುಟ್ಟ ಊರು. ಹೆಸರು ಕಲ್ಲಳ್ಳಿ. ಎಲ್ಲಾ ಊರುಗಳ ಕೆಟ್ಟ ಚಾಳಿಗಳು ಇದ್ದೂ ಅಲ್ಲೊಬ್ಬ ಕೆಂಚನೆಂಬ ಅನಾಥ ಬಾಲಕನನ್ನು ಆ ಊರು ಸಾಕಿಕೊಂಡಿತ್ತು. ಅವನು ಊರ ಮುಂದಿನ ಕಲ್ಲೇಶ್ವರ ಗುಡಿಯ ಜಗುಲಿಯ ಮೇಲೆ ಮಲಗಿರುತ್ತಿದ್ದ.

ಹಸಿವಾದಾಗ ಊರೊಳಗೆ ಭಿಕ್ಷೆ ಬೇಡಿ ಸಿಕ್ಕಿದ್ದನ್ನು ತಿಂದು ಮತ್ತೆ ಗುಡಿಯ ಮುಂದೆ ಬಂದು ಮಲಗುತ್ತಾನೆ. ಭಿಕ್ಷುಕನಾದ್ದರಿಂದ ಊರ ಯಾವ ಮಕ್ಕಳೂ ಅವನೊಂದಿಗೆ ಆಡಲು ಬರುವುದಿಲ್ಲ. ಹಾಗಾಗಿ ಮಲಗುವುದಷ್ಟೆ ಅವನ ಕಾಯಕವಾಗಿತ್ತು.

ಇದ್ದಕ್ಕಿದ್ದ ಹಾಗೆ ದೀಪಾವಳಿಗೆ ಮುನ್ನ ಒಂದು ಸುಂಟರಗಾಳಿಯು ಬೀಸಿ ಕಲ್ಲಳ್ಳಿಯನ್ನು ಅಲ್ಲಾಡಿಸಿಬಿಟ್ಟಿತು. ಕ್ಷಣ ಹೊತ್ತು ನಿಂತು, ಜನಗಳು ಗಾಬರಿಯಾಗಿದ್ದನ್ನು ಕಂಡು, ಖುಷಿಯಲ್ಲಿ ಕುಣಿದಾಡಿ ರುಮು ರುಮು ಬೀಸಿ ಮುಂದಿನ ಊರಿಗೆ ಓಡಿತು.

ಓಡುತ್ತಾ ಅದು ಗುಡಿಯ ಮುಂದೆ ಕಾಗೆಮರಿಯ ಎಸೆದು ಹೋಯಿತು. ಈ ರಾದ್ಧಾಂತಕ್ಕೆ ಕೆಂಚನಿಗೆ ಎಚ್ಚರವಾಗಿ ನೋಡಿದರೆ ಕಾಗೆಮರಿಯೊಂದು `ಭೂಮಿಗೆ ಬಂದ್ನಾ..... ಭೂಮಿಗೆ ಬಂದ್ನಾ....~ ಎಂದು ಕನವರಿಸುತ್ತಿತ್ತು. ಕೆಂಚ ಓಡಿಬಂದು ಮರಿಗೆ ನೀರು ಕುಡಿಸಿ ಉಪಚರಿಸಿದನು.

ಸಲ್ಪ ಹೊತ್ತು ಕಳೆದ ಮೇಲೆ ಕಾಗೆಮರಿಗೆ ಎಚ್ಚರವಾಗಿ ಎದುರಿಗಿದ್ದ ಕೆಂಚನನ್ನು ಕಂಡು ಬೆಚ್ಚಿ, `ಏಯ್, ನೀನು ಯಾವ ಲೋಕದ ಜೀವಿ, ನಾನು ಯಾವ ಲೋಕದಲ್ಲಿದ್ದೇನೆ?~ ಎಂದು ಕೇಳಿತು. ಗಾಳಿಗೆ ತೂರಿಕೊಂಡು ಬಂದ ಮರಿಗೆ ತಲೆತಿರುಗಿರಬೇಕು ಎನಿಸಿ ಕೆಂಚ ಅದನ್ನೆತ್ತಿಕೊಂಡು ಗುಡಿಯ ಜಗುಲಿಗೆ ಬಂದ.

`ಏಯ್ ಬಡಕಲು ಜೀವಿಯೇ ಹೇಳು ನೀನ್ಯಾರು? ಇದು ಯಾವ ಲೋಕ?~ ಎಂದು ಕಾಗೆಮರಿ ಕಿರುಚಿತು. ಇದು ಸೊಕ್ಕಿನ ಮರಿಯೇ ಇರಬೇಕು ಎಂದುಕೊಂಡ ಕೆಂಚ ಮರಿಯನ್ನು ಬಾಯಿಯ ಹತ್ತಿರ ತಂದು, `ಹೋ...~ ಅಂತ ಕಿರುಚಿದ. ಆ ಬೊಬ್ಬೆಗೆ ಮರಿ ಮತ್ತೆ ಪ್ರಜ್ಞೆ ತಪ್ಪಿ ಬಿತ್ತು. ಕೆಂಚ ನೀರು ತಂದು ಮರಿಯ ತಲೆಗೆ ಹಾಕಿ ನೇವರಿಸಿದ. ಅದಕ್ಕೆ ಪೂರ್ತಿ ಎಚ್ಚರವಾಯಿತು. ಸುತ್ತಲೂ ನೋಡಿ `ನಾನು ಭೂಮಿಗೆ ಬಂದಿದ್ದೇನೆ~ ಎಂದು ಕುಣಿಯತೊಡಗಿತು.

ಕಾಗೆಮರಿಯ ನಡವಳಿಕೆ ಕಂಡು ಕೆಂಚನಿಗೆ ಆಶ್ಚರ್ಯವಾಯಿತು. ಇದಕ್ಕೆಲ್ಲೋ ಹುಚ್ಚು ಹಿಡಿದಿರಬೇಕು. ಇಲ್ಲದಿದ್ರೆ ಭೂಮಿಯ ಮೇಲಿದ್ದೇ ಭೂಮಿಗೆ ಬಂದೆ ಅನ್ನುತ್ತಲ್ಲ, ಅಂದುಕೊಂಡೇ ಮಾತಾಡಿಸಿದ.

ಕೆಂಚ: ಕಾಗೆಮರಿ ಕಾಗೆಮರಿ ನೀನೆಲ್ಲಿಗೆ ಹೋಗಿದ್ದೆ?
ಕಾಗೆಮರಿ: `ನೀನು ಶಾಲೆಗೆ ಹೋಗ್ತೀಯಾ?
ಕೆಂಚ: ಇಲ್ಲ. ನಾನು ಬೇಡುವ ಹುಡುಗ.
ಕಾಗೆಮರಿ: ಪಾಪ. ನಿಂಗೆ ಬಾಹ್ಯಾಕಾಶ ಅಂದ್ರೆ ಗೊತ್ತಾಗಲ್ಲ ಅಲ್ವಾ?
ಕೆಂಚ: `ಇಲ್ಲ~

ಕಾಗೆಮರಿ: ಹೌದಲ್ವ, ಇಂಥಾ ಪದಗಳು ಶಾಲೆಗೆ ಹೋದ್ರೆ ಮಾತ್ರ ಅರ್ಥವಾಗೋದು. ಛೆ! ಇವ್ನಿಗೆ ಹೇಗೆ ಹೇಳೋದು? ನಿನ್ನ ಹೆಸರೇನು?~

ಕೆಂಚ: ನನ್ನ ಹೆಸರು ಕೆಂಚ.
ಕಾಗೆಮರಿ: ಕೆಂಚ, ಆಕಾಶ, ಬಾನು ಗೊತ್ತಲ್ಲ. ನೋಡಲ್ಲಿ ನೀಲಿ ಬಯಲು ಮೇಲೆ. ದೂ....ರ. ಅಲ್ಲಿ ರಾತ್ರಿಗೆ ಚಂದ್ರ ಬರ್ತಾನೆ ಗೊತ್ತಲ್ಲ. ಅವ್ನಿರೋದು ದೂ.....ರ. ಅಮೆರಿಕಾಕಿಂತಾನೂ ದೂ.....ರ. ನಾನು ಅಲ್ಲಿಗೆ ಹೋಗಿದ್ದೆ.

ಕೆಂಚನಿಗೆ ನಗು ಬಂತು. ಆದರೂ ತಡೆದುಕೊಂಡ. ಮರಿಗೆ ಇನ್ನೂ ರೆಕ್ಕೆ ಬಲಿತಿಲ್ಲ ಚಂದ್ರನ ಹತ್ರಕ್ಕೆ ಹೋಗಿತ್ತಂತೆ! ಕಾಗೆ ಹಾರ್ಸುತ್ತೆ ಕಾಗೆಮರಿ.

ಕಾಗೆಮರಿ: ಕೆಂಚ, ಏನು ಯೋಚನೆ ಮಾಡ್ತಿದೀಯಾ?~
ಕೆಂಚ: `ಏನಿಲ್ಲ. ಅಷ್ಟು ದೂರಕ್ಕೆ ನೀನೊಬ್ನೆ ಹೋಗಿದ್ದೀಯಾ?~
ಕಾಗೆಮರಿ: ನೀನೊಬ್ನೆ ಅಲ್ಲ ನೀನೊಬ್ಳೆ ಅನ್ನು.
ಕೆಂಚ: ನೀನೊಬ್ಳೆ ಹೇಗೋದೆ?

ಕಾಗೆಮರಿ: ಅದಾ... ಸುಂಟರಗಾಳಿ ಮತ್ತೆ ನಾನು ಒಂದೇ ಸ್ಕೂಲಲ್ಲಿ ಓದೋದು. ಹಾಗಾಗಿ ಅದು ನನ್ನ ಫ್ರೆಂಡು. ನಾನು ಅದಕ್ಕೆ ಕೇಳ್ದೆ- ಸುಂಟರಗಾಳಿ ಈ ಭೂಮಿಯಲ್ಲಿ ಆಟ ಆಡಿ ಆಡೀ ಬೋರು. ಒಂದ್ಸಾರಿ ಚಂದ್ರಲೋಕಕ್ಕೆ ಹೋಗಿ ಆಟ ಆಡೋಣವಾ ಅಂದೆ. ಆಯ್ತು ಅಂತು. ನನ್ನ ಬೆನ್ನಿಗೆ ಕಟ್ಕೊಂಡು ಆಟ ಆಡೋಣ ಅಂತ ಅಲ್ಲಿಗೆ ಕರಕೊಂಡು ಹೋಯ್ತು.
ಕೆಂಚ: ಆಟ ಆಡೋಕೆ ಚಂದ್ರಲೋಕಕ್ಕೆ ಹೋಗೋದಾ?

ಕಾಗೆಮರಿ: ಹುಂ ಮತ್ತೆ. ಬೇಕು ಅಂದ್ರೆ ಹೋಗ್ಬೇಕು. ಸುಂಯ್ ಅಂತ ಹೋಗೋದು ಸುಂಯ್ ಅಂತ ಬರೋದು. ನಿಂಗೆ ಸುನೀತಾ ವಿಲಿಯಮ್ಸ ಗೊತ್ತಾ?
ಕೆಂಚ: ಇಲ್ಲಕಾಗೆಮರಿ: `ಅಯ್ಯೋ... ಟ್ಟ್ಟ ಕಣೊ, ನೀನು ಶಾಲೆಗೆ ಹೋಗಿಲ್ಲ ಅಲ್ವಾ. ಅವರ ಬಗ್ಗೆ ನಿಂಗೆ ಗೊತ್ತಿರಲ್ಲ?

ಎಲಾ ಕಾಗೆಮರಿ! ಏನೇನೋ ತಿಳ್ಕೊಂಡಿದೆಯಲ್ಲ ಇದು. ಆದ್ರೂ ಸುಳ್ಳು ಹೇಳ್ತಿದೆ ಅನ್ನಿಸಿತು ಕೆಂಚನಿಗೆ. ಸಂಶಯದಲ್ಲೇ ಅವನು ಕೇಳಿದ- `ನೀನು ನಿಜವಾಗಲೂ ಚಂದ್ರಲೋಕಕ್ಕೆ ಹೋಗಿದ್ಯಾ?~

`ಹುಂ. ಬೇಕಿದ್ರೆ ಸುನೀತಾ ಮೇಡಂಗೆ ಕೇಳು. ಅವರು ರಾಕೆಟ್ಟಲ್ಲಿ ಹೋಗಿದ್ರು. ವಾಪಾಸ್ಸು ಬರ್ತಾ ಅವರು ಅಮೆರಿಕಾಕ್ಕೆ ಹೋದ್ರು. ನಾವು ವಾಪಾಸ್ಸು ಬರ್ತಿರಬೇಕಾದ್ರೆ ಈ ತಲೆಹರಟೆ ಸುಂಟರಗಾಳಿ ಯಾರೋ ಸಂಬಂಧಿಕರು ಸಿಕ್ರು ಅಂತ ತಪ್ಪಿಸಿಕೊಳ್ತು. ನಾನು ಇಲ್ಲಿ ಬಿದ್ದೋಗ್ಬಿಟ್ಟೆ~ ಅಂತು ಕಾಗೆಮರಿ.

ಕೆಂಚ ಜೋರಾಗಿ ನಕ್ಕ. ಕಾಗೆಮರಿಗೆ ಕೋಪಬಂದು `ಅಯ್ಯೋ ಮೂದೇವಿ ಶಾಲೆಗೋಗಿ ನಾಕಕ್ಷರ ಕಲಿ. ಬಾಹ್ಯಾಕಾಶ, ಚಂದ್ರಲೋಕ, ರಾಕೆಟ್ಟು, ಸುನೀತಾ ವಿಲಿಯಮ್ಸ, ಸುಂಟರಗಾಳಿ, ಮತ್ತೆ ನೀನ್ಯಾರೆಂದು ಅರ್ಥವಾಗುತ್ತೆ. ನಗೋದು ನೋಡು~ ಎಂದು ಪುರ್ರನೆ ಹಾರಿಹೋಯಿತು.

ಕೆಂಚ ಶಾಲೆ ಹುಡುಕಿಕೊಂಡು ಹೊರಟ. ಮೂರೂರ ಮುಂದೆ ಮುಳ್ಳೂರು ಆಚೆಗೆ ತಗಡೂರು, ಅದರಾಚೆಗೆ ದೂರ ದೂರ ಎಂಬೂರಲ್ಲಿ ಶಾಲೆಯಿತ್ತು. ಕುಂಡೆ ಕಾಣುವ ಹರಕಲು ಚಡ್ಡಿಯ ಕೆಂಚ ಶಾಲೆಗೆ ಬಂದರೆ ಅಲ್ಲಿನ ಹುಡುಗರು ಅವನನ್ನು ನೋಡಿ ನಗುತ್ತಿದ್ದವು. ಮೇಸ್ಟ್ರೊಬ್ಬರು ಬಂದು, `ಹೀಗೆಲ್ಲ ಶಾಲೆಗೆ ಬರಬಾರದು ಹೋಗಪ್ಪ~ ಎಂದರು.

`ಸಾ, ನಾ ಶಾಲೆ ಕಲಿಬೇಕು~ ಎಂದ.
`ನಿನ್ನ ತಂದೆ ತಾಯಿ ಯಾರು? ನಿನ್ನ ಜಾತಿ-ಧರ್ಮ ಯಾವುದು? ನಿನ್ನ ಮನೆ ಎಲ್ಲಿ? ನಿನ್ನ ಊರು ಯಾವುದು?~ ಎಂದೆಲ್ಲ ಕೇಳಿದರೆ ಕೆಂಚನಿಗೆ ಅವು ಯಾವುದೂ ಇರದೆ ಕಲ್ಲಳ್ಳಿಯ ಕಲ್ಲೇಶ್ವರ ಗುಡಿಯ ಜಗುಲಿ ಮಾತ್ರ ನೆನಪಾಗಿ, `ಸಾ ನಂಗೆ ಯಾರೂ ಇಲ್ಲ. ಆದ್ರೆ ನಾ ಅಕ್ಷರ ಕಲಿಬೇಕು~ ಅಂದ.

`ಕೆಂಚ. ಭಾರತೀಯ~ ಎಂದು ಬರೆದುಕೊಂಡ ಮೇಸ್ಟ್ರು, ಸಮವಸ್ತ್ರ ನೀಡಿ ಕೆಂಚನನ್ನು ಶಾಲೆಗೆ ಸೇರಿಸಿಕೊಂಡರು. ಕೆಂಚ ಕಾಗೆಮರಿಗೆ ಅಲ್ಲಿಂದಲೇ ಕಯ್ಮುಗಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.