ಸಿಂಧನೂರು: ದೌರ್ಜನ್ಯದಿಂದ ಹೊರ ಬರಬೇಕಾದರೆ ಮಹಿಳೆಯರು ಸಾಮಾನ್ಯ ಕಾನೂನಿನ ತಿಳಿವಳಿಕೆ ಹೊಂದಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಪಿ.ಜೆ.ಸೋಮ ಶೇಖರ ಸಲಹೆ ನೀಡಿದರು. ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ನ್ಯಾಯ ವಾದಿಗಳ ಸಂಘದ ಆಶ್ರಯದಲ್ಲಿ ನ್ಯಾಯಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿ ಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪುರುಷ ಮತ್ತು ಮಹಿಳೆಯರು ಸಮಾನರು. ಈರ್ವರ ನಡುವೆ ತಾರತಮ್ಯ ಸಲ್ಲ. ಆಸ್ತಿ ಹಕ್ಕು, ಜೀವನಾಂಶ ಪಡೆದುಕೊಳ್ಳಲು ಮಹಿಳೆ ಅರ್ಹಳು. ಅನ್ಯಾಯ ಕ್ಕೊಳಗಾದಾಗ ಕಾನೂನು ಮೊರೆ ಹೋಗಿ ನ್ಯಾಯ ಪಡೆದುಕೊಳ್ಳಬೇಕು ಎಂದು ಮಹಿಳೆಯರಿಗೆ ಕರೆ ನೀಡಿದರು. ಮುಖ್ಯ ಅತಿಥಿ ಹೆಚ್ಚುವರಿ ನ್ಯಾಯಾ ಧೀಶ ವೆಂಕಟೇಶ ನಾಯಕ, ಖಜಾಂಚಿ ರಾಮನಗೌಡ, ಸರ್ಕಾರಿ ಅಭಿ ಯೋಜಕ ಶೇಖರಪ್ಪ, ಉಪನ್ಯಾಸಕಿ ಡಾ.ಮಧುಮತಿ ದೇಶಪಾಂಡೆ ಇದ್ದರು. ಶಾರದಾ ಮಹಿಳಾ ಪದವಿ ಕಾಲೇಜ್ನ ವಿದ್ಯಾರ್ಥಿನಿಯರು ಭಾಗ ವಹಿಸಿದ್ದರು. ವೀರಭದ್ರಪ್ಪ ವಕೀಲರು ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.