ಗಂಗಾವತಿ: ಕೊಪ್ಪಳ ಜಿಲ್ಲೆಯ ಮೊದಲ ಮಹಿಳಾ ಪೊಲೀಸ್ ವರಿಷ್ಠೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಂಗಳವಾರ ನಗರಕ್ಕೆ ಭೇಟಿ ನೀಡಿದ ರೋಹಿಣಿ ಕಾಟೋಜ್ ಸೆಪಾಟ್ ಅವರಿಗೆ ನಗರದ ಗಂಗಾವತಿ ತಾಲ್ಲೂಕು ಮಹಿಳಾ ವೇದಿಕೆಯ ಮಹಿಳಾ ಪ್ರಮುಖರು ಸ್ವಾಗತ ಕೋರಿದರು.

ಆರಕ್ಷಕ ನಿರೀಕ್ಷಕರ ಗಂಗಾವತಿ ಉಪವಿಭಾಗ ಅಧಿಕಾರಿ ಕಚೇರಿಯಲ್ಲಿ ಎಸ್ಪಿ ರೋಹಿಣಿಯನ್ನು ಭೇಟಿ ಮಾಡಿದ ಮಹಿಳಾ ಪ್ರಮುಖರು, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದಲ್ಲಿ ವೇದಿಕೆಯಿಂದ ಮಾ.11 ಮತ್ತು 12ರಂದು ವಿವಿಧ ಕಾರ್ಯಕ್ರಮ, ಸ್ಪರ್ಧೆ ಏರ್ಪಡಿಸಲಾಗಿದೆ.

ಮಾ.13ರಂದು ಬೆಳಿಗ್ಗೆ 11ಕ್ಕೆ ಐಎಂಎ ಭವನದಲ್ಲಿ ಸಾರ್ವಜನಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮುಖ್ಯ ಮಹಿಳಾ ಅತಿಥಿಯಾಗಿ ಪಾಲ್ಗೊಳ್ಳುವಂತೆ ಮಹಿಳಾ ಮುಖಂಡರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಕರ್ತವ್ಯ ಒತ್ತಡದಿಂದ ಬಿಡುವು ದೊರೆತರೆ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದರು.

ವಿವಿಧ ರಾಜಕೀಯ ಪಕ್ಷದ ಮುಖಡರು ಹಾಗೂ ಮಹಿಳಾ ಪ್ರಮುಖರಾದ ಶೈಲಜಾ ಹಿರೇಮಠ, ಅನ್ನಪೂರ್ಣ ಸಿಂಗ್, ಮಹಾಂತ ರಾಜಶೇಖರ ಪಾಟೀಲ್, ಶೈಲಜಾ ರಮೇಶ, ಗೀತಾವಿಕ್ರಂ, ಶಿಲ್ಪಾ ಶ್ರೀನಿವಾಸ ಮಾಳಗಿ, ಸುಶೀಲಾ ರವೀಂದ್ರ, ಶೈಲಜಾ ಆನಂದ್, ಮಹಾಲಕ್ಷ್ಮಿ ಮೊದಲಾದವರಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ರೋಹಿಣಿ, ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸಿ ಕಾನೂನು–ಸುವವ್ಯಸ್ಥೆಗೆ ಮೊದಲ ಆದ್ಯತೆ ನೀಡಲಾಗುವುದು. ರಿಕ್ರಿಯೇಷನ್ ಕ್ಲಬ್ಗಳ ನೆಪದಲ್ಲಿ ರಾತ್ರಿಯಿಡೀ ಅಕ್ರಮ ಚಟುವಟಿಕೆ ನಡೆಯುವ ಮಾಹಿತಿ ಲಭಿಸಿದ್ದು, ಪರಿಶೀಲಿಸುವುದಾಗಿ ಹೇಳಿದರು.

ಬಳಿಕ ಶ್ರೀರಾಮನಗರದ ಸಾರ್ವಜನಿಕರ ಪರವಾಗಿ ಕಾಂಗ್ರೆಸ್ ಮುಖಂಡರಾದ ರೆಡ್ಡಿ ಶ್ರೀನಿವಾಸ, ಜೈರಾಮರೆಡ್ಡಿ, ಗಂಗಾವತಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ನಿರ್ದೇಶಕ ಚುಟ್ಟಾ ವೆಂಕಟೇಶ್ವರ ರಾವ್ ಮೊದಲಾದವರು ಎಸ್ಪಿಯನ್ನು ಸ್ವಾಗತಿಸಿದರು.

ಇದಕ್ಕೂ ಮೊದಲು ಎಸ್ಪಿ ರೋಹಿಣಿ ನಗರಠಾಣೆ, ಸಂಚಾರಿ ಮತ್ತು ಗ್ರಾಮೀಣ ಠಾಣೆಗೆ ತೆರಳಿ ಸಿಬ್ಬಂದಿ ಪರಿಚಯ ಮಾಡಿಕೊಂಡರು. ಡಿವೈಎಸ್ಪಿ ವಿನ್ಟಂಟ್ ಶಾಂತಕುಮಾರ, ಸಿಪಿಐಗಳಾದ ಕಾಳಿಕೃಷ್ಣ, ರಮೇಶ ಧರ್ಮಟ್ಟಿ, ಪಿಎಸ್ಐಗಳಾದ ಸಾಬಯ್ಯ, ಹನುಮರೆಡ್ಡಿ, ರಾಮಚಂದ್ರಪ್ಪ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.