ಶುಕ್ರವಾರ, ಜೂನ್ 18, 2021
28 °C

ಕಾನ್‌ಸ್ಟೆಬಲ್‌ಗೆ ಬೈಕ್‌ ಗುದ್ದಿಸಿ ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಗೋಪಾಲನಗರ ಒಳ­ವರ್ತುಲ ರಸ್ತೆಯಲ್ಲಿ ವಾಹನ ತಪಾ­­ಸಣೆ ನಡೆಸುತ್ತಿದ್ದ ಕಾನ್‌ಸ್ಟೆಬಲ್‌ ದೊಡ್ಡ­ಸಿದ್ದಯ್ಯ (35) ಅವರಿಗೆ ಸವಾರ­ನೊಬ್ಬ ಬೈಕ್‌ ಗುದ್ದಿಸಿ ಪರಾರಿ­ಯಾಗಿ­ರುವ ಘಟನೆ ಗುರುವಾರ ರಾತ್ರಿ ನಡೆದಿದೆ.ರಾಜಗೋಪಾಲನಗರ ಠಾಣೆಯ ಕಾನ್‌­ಸ್ಟೆಬಲ್‌ ದೊಡ್ಡಸಿದ್ದಯ್ಯ ಅವರು ಮತ್ತೊಬ್ಬ ಕಾನ್‌ಸ್ಟೆಬಲ್‌ ರಮೇಶ್‌ ಜತೆ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವ­ಹಿಸುತ್ತಿದ್ದರು. ರಾತ್ರಿ 11.45ರ ಸುಮಾ­ರಿಗೆ ಅವರು ಒಳವರ್ತುಲ ರಸ್ತೆಯಲ್ಲಿ ವಾಹನ­ಗಳ ತಪಾಸಣೆ ಮಾಡುವಾಗ ಯುವಕ­ನೊಬ್ಬ ಬೈಕ್‌ ಓಡಿಸಿಕೊಂಡು ಬಂದಿ­ದ್ದಾನೆ. ಅನುಮಾನಗೊಂಡು ಆತನನ್ನು ಅಡ್ಡಗಟ್ಟಿದ ಸಿಬ್ಬಂದಿ ವಾಹ­ನದ ದಾಖಲೆಗಳನ್ನು ನೀಡುವಂತೆ ಕೇಳಿದ್ದಾರೆ. ಆಗ ಏಕಾಏಕಿ ಬೈಕ್‌ ಚಾಲನೆ ಮಾಡಿದ ಆತ, ದೊಡ್ಡ­ಸಿದ್ದಯ್ಯ ಅವರಿಗೆ ಬೈಕ್‌ ಗುದ್ದಿಸಿ ಪರಾರಿ­ಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.ಘಟನೆಯಲ್ಲಿ ದೊಡ್ಡಸಿದ್ದಯ್ಯ ಅವರ ಎಡಗಾಲಿಗೆ ಪೆಟ್ಟಾಗಿದ್ದು, ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ­ಯುತ್ತಿದ್ದಾರೆ. ಸಿಬ್ಬಂದಿ ಆ ವಾಹನದ ನೋಂದಣಿ ಸಂಖ್ಯೆಯನ್ನು ದಾಖಲಿ­ಸಿ­ಕೊಂಡಿಲ್ಲ ಎಂದು ಪೀಣ್ಯ ಸಂಚಾರ ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಾಗಿದೆ.‘ಸಮೀಪದ ಜಂಕ್ಷನ್‌ನಲ್ಲಿರುವ ಸಿ.ಸಿ.ಟಿವಿ ಕ್ಯಾಮೆರಾದಲ್ಲಿ ದಾಖ­ಲಾಗಿರುವ ದೃಶ್ಯಗಳನ್ನು ಪರಿಶೀಲಿ­ಸ­ಲಾಗಿದೆ. ಶೀಘ್ರವೇ ಆ ಚಾಲಕನನ್ನು ಬಂಧಿಸ­ಲಾಗುವುದು. ಕಳವು ವಾಹನ­ಗಳ ಪತ್ತೆಗೆ ಹಾಗೂ ಚುನಾವಣೆ ಹಿನ್ನೆಲೆ­ಯಲ್ಲಿ ಅಕ್ರಮ ಹಣ ಸಾಗಣೆ ಮಾಡು­ವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರ­ದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ವಾಹನ ತಪಾಸಣೆ ಕೆಲಸಕ್ಕೆ ನಿಯೋಜಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.ವಿಗ್ರಹ ಮಾರಾಟ– ಬಂಧನ:  ಪುರಾತನ ಕಾಲದ ಪಂಚಲೋಹದ ವಿಗ್ರಹ ಮಾರಾಟ ಮಾಡುತ್ತಿದ್ದ ಆರೋಪಿ­ಗಳನ್ನು ಬಂಧಿಸಿರುವ ಬ್ಯಾಟ­ರಾಯನಪುರ ಪೊಲೀಸರು ವಿಗ್ರಹ­ವೊಂದನ್ನು ವಶಪಡಿಸಿಕೊಂಡಿದ್ದಾರೆ.ಗಂಗಾಧರಯ್ಯ (44), ಶಿವ­ಲಿಂ­ಗಯ್ಯ (35), ಚಂದ್ರಶೇಖರ್‌ (34), ಕೃಷ್ಣ (32) ಮತ್ತು ಸಿ.ಚಂದ್ರಶೇಖರ್‌ (58) ಬಂಧಿತರು.

ಆರೋಪಿಗಳು ಶ್ರೀವೈಷ್ಣವರ ಗುರು­ಗಳಾದ ವೇದಾಂತ ದೇಶಿಕ ಆಚಾರ್ಯ ಅವರ ವಿಗ್ರಹವನ್ನು ತಮಿಳುನಾಡಿನಿಂದ ನಗರಕ್ಕೆ ತಂದು ಮೈಸೂರು ರಸ್ತೆಯ ಸ್ಯಾಟ­ಲೈಟ್‌ ಬಸ್‌ ನಿಲ್ದಾಣದ ಬಳಿ ಮಾರಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಿ ಸುಮಾರು 13 ಕೆ.ಜಿ ತೂಕದ ಪಂಚ­ಲೋಹದ ವಿಗ್ರಹವನ್ನು ಜಪ್ತಿ ಮಾಡ­ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ವಿಗ್ರ­ಹವನ್ನು ಪರಿಶೀಲ­ನೆ­ಗಾಗಿ ಪುರಾತತ್ವ ಇಲಾಖೆಗೆ ಕಳುಹಿಸ­ಲಾ­ಗಿದೆ ಎಂದು ಪೊಲೀಸರು ಹೇಳಿ­ದ್ದಾ­ರೆ­­.ದಂಪತಿ ಆತ್ಮಹತ್ಯೆ: ನೇಣು ಹಾಕಿಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್‌.ಪುರದಲ್ಲಿ ಬುಧವಾರ ನಡೆದಿದೆ.ಮುನಿಯಪ್ಪ ಲೇಔಟ್‌ನ ಆನಂದ್‌ (45) ಮತ್ತು ಗೀತಾ (42) ಆತ್ಮಹತ್ಯೆ ಮಾಡಿ­ಕೊಂಡವರು. ಆನಂದ್‌, ಕೆ.ಆರ್‌.ಪುರದಲ್ಲಿ ಚಿಲ್ಲರೆ ಅಂಗಡಿ ನಡೆ­ಸುತ್ತಿದ್ದರು. ಬುಧವಾರ ರಾತ್ರಿ ಅವರು ಮಲಗುವ ಕೊಠಡಿಯಲ್ಲಿ ಒಂದೇ ಹಗ್ಗದಿಂದ ಫ್ಯಾನ್‌ಗೆ ನೇಣು ಹಾಕಿ­ಕೊಂಡು ಆತ್ಮಹತ್ಯೆ ಮಾಡಿ­ಕೊಂಡಿ­ದ್ದಾರೆ ಎಂದು ಪೊಲೀಸರು ತಿಳಿಸಿ­ದ್ದಾರೆ.ಸ್ಥಳೀಯರು ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಕೆ.ಆರ್‌.ಪುರ ಪೊಲೀಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.