ಸೋಮವಾರ, ಮೇ 25, 2020
27 °C

ಕಾಫಿ ಬೆಳೆಗಾರರಿಗೆ ರೂ. 189 ಲಕ್ಷ ಸಹಾಯಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಫಿ ಬೆಳೆಗಾರರಿಗೆ ರೂ. 189 ಲಕ್ಷ ಸಹಾಯಧನ

ಮಡಿಕೇರಿ: ಕಾಫಿ ಮಂಡಳಿ ವತಿಯಿಂದ ಜಿಲ್ಲೆಯ ಕಾಫಿ ಬೆಳೆಗಾರರಿಗೆ 2010-11ನೇ ಸಾಲಿನ ಡಿಸೆಂಬರ್ ಅಂತ್ಯದವರೆಗೆ ಜಲ ಸಂವರ್ಧನೆ, ಕಾಫಿ ಗುಣಮಟ್ಟ ವೃದ್ಧಿಸುವುದು ಹಾಗೂ ಕಾಫಿ ಗಿಡಗಳ ಮರುನಾಟಿಗಾಗಿ ಸುಮಾರು ರೂ. 189.49 ಲಕ್ಷ ಸಹಾಯಧನ ವಿತರಿಸಲಾಗಿದೆ.ಉತ್ತರ ಕೊಡಗಿನಲ್ಲಿ ಜಲ ಸಂವರ್ಧನೆಗೆ ಅಂದರೆ, ತೆರೆದ ಬಾವಿ ಹಾಗೂ ಕೊಳವೆಬಾವಿ ನಿರ್ಮಾಣ, ತುಂತುರು ನೀರಾವರಿ, ಸಣ್ಣ ಕೆರೆಗಳ ನಿರ್ಮಾಣ ಮತ್ತಿತರ ಉದ್ದೇಶಗಳಿ ಗಾಗಿ 32.89 ಲಕ್ಷ ರೂಪಾಯಿ ಸಹಾಯಧನ ವಿತರಿಸಲಾಗಿದೆ. ಈ ಉದ್ದೇಶಕ್ಕಾಗಿ ಒಟ್ಟು 519.65 ಹೆಕ್ಟೇರ್ ಪ್ರದೇಶಕ್ಕೆ ಈ ಸಹಾಯಧನ ವಿತರಿಸಲಾಗಿದ್ದು, 184 ಬೆಳೆಗಾರರು ಪ್ರಯೋಜನ ಪಡೆದುಕೊಂಡಿದ್ದಾರೆ.ಅಂತೆಯೇ, ಕಾಫಿ ಗುಣಮಟ್ಟ ವೃದ್ಧಿಸುವ ಉದ್ದೇಶಕ್ಕಾಗಿ 35.74 ಲಕ್ಷ ಸಹಾಯಧನ ವಿತರಿಸಲಾಗಿದೆ. ಸುಮಾರು 708 ಹೆಕ್ಟೇರ್ ಪ್ರದೇಶಕ್ಕೆ ಈ ಸಹಾಯಧನ ನೀಡಲಾಗಿದ್ದು, ಒಟ್ಟು 252 ಮಂದಿ ಫಲಾನುಭ ವಿಗಳು ಪ್ರಯೋಜನ ಪಡೆದು ಕೊಂಡಿದ್ದಾರೆ.ಕಾಫಿ ಗಿಡಗಳ ಮರು ನಾಟಿ ಉದ್ದೇಶಕ್ಕಾಗಿ ರೂ. 8.61 ಲಕ್ಷ ಸಹಾಯಧನ ನೀಡಲಾಗಿದೆ. 28 ಹೆಕ್ಟೇರ್ ಅರೇಬಿಕಾ ಹಾಗೂ 28 ಹೆಕ್ಟೇರ್ ರೋಬಸ್ಟಾ ಕಾಫಿ ಗಿಡಗಳ ಮರು ನಾಟಿಗೆ 38 ಮಂದಿ ಫಲಾನುಭವಿಗಳು ಸಹಾಯಧನದ ಲಾಭ ಪಡೆದುಕೊಂಡಿದ್ದಾರೆ.ದಕ್ಷಿಣ ಕೊಡಗಿನಲ್ಲಿ: ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಗೊಳಪಡುವ ದಕ್ಷಿಣ ಕೊಡಗಿನಲ್ಲಿ ಜಲಸಂವರ್ಧ ನೆಗಾಗಿ 1107.08 ಹೆಕ್ಟೇರ್ 66.91 ಲಕ್ಷ ರೂಪಾಯಿ ಸಹಾಯಧನ ನೀಡಲಾಗಿದ್ದು, 233 ಮಂದಿ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ.ಕಾಫಿ ಗುಣಮಟ್ಟ ವೃದ್ಧಿಗಾಗಿ 726.98 ಹೆಕ್ಟೇರ್ ಪ್ರದೇಶಕ್ಕೆ 41.09 ಲಕ್ಷ ರೂಪಾಯಿ ಸಹಾಯಧನ ನೀಡಲಾಗಿದೆ. 190 ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಕಾಫಿ ಗಿಡಗಳ ಮರು ನಾಟಿಗಾಗಿ 34.48 ಹೆಕ್ಟೇರ್‌ಗೆ 4.25 ಲಕ್ಷ ರೂಪಾಯಿ ಸಹಾಯಧನ ವಿತರಿಸಲಾಗಿದೆ.2012ರವರೆಗೆ ಬೆಳೆಗಾರರಿಗೆ ಈ ಸಹಾಯಧನ ನೀಡಲಾಗುತ್ತದೆ. ಸದ್ಯಕ್ಕೆ ಹಣಕಾಸಿನ ಕೊರತೆ ಇಲ್ಲ. ಬೆಳೆಗಾರರಿಂದ ಸಹಾಯಧನಕ್ಕೆ ಬೇಡಿಕೆ ಬಂದಂತೆ ಮಂಡಳಿ ಅನುದಾನ ನೀಡಲಿದೆ ಎಂದು ಅವರು ಕಾಫಿ ಮಂಡಳಿಯ ಪ್ರಭಾರ ಉಪ ನಿರ್ದೇಶಕ ಎಸ್.ವಿ. ನಾಗರಾಜ್ ತಿಳಿಸಿದ್ದಾರೆ.1700 ಮೆಟ್ರಿಕ್ ಟನ್ ಉತ್ಪಾದನೆ ಕುಂಠಿತ:  ಕಾಫಿ ಮಂಡಳಿಯು 2010-11ನೇ ಸಾಲಿನಲ್ಲಿ ಮಾನ್ಸೂನ್ ನಂತರದ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆಸಿದ ಅಂದಾಜಿನಂತೆ, 20,900 ಮೆಟ್ರಿಕ್ ಟನ್ ಅರೇಬಿಕಾ, 88,600 ಮೆಟ್ರಿಕ್ ಟನ್ ರೋಬಸ್ಟಾ ಕಾಫಿ ಸೇರಿದಂತೆ ಒಟ್ಟು 1,09,500 ಮೆಟ್ರಿಕ್ ಟನ್ ಕಾಫಿ ಉತ್ಪಾದನೆ ಯಾಗಬಹುದೆಂದು ನಿರೀಕ್ಷಿಸಲಾಗಿದೆ.

ಕಳೆದ ವರ್ಷ 21,550 ಮೆಟ್ರಿಕ್ ಟನ್ ಅರೇಬಿಕಾ ಹಾಗೂ 89,650 ಮೆಟ್ರಿಕ್ ಟನ್ ರೋಬಸ್ಟಾ ಸೇರಿದಂತೆ ಒಟ್ಟು 1,11,200 ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 1700 ಮೆಟ್ರಿಕ್ ಟನ್‌ಗಳಷ್ಟು ಕಾಫಿ ಉತ್ಪಾದನೆ ಕುಂಠಿತವಾಗುವ ಸಂಭವವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.