ನವದೆಹಲಿ (ಪಿಟಿಐ): ಕಾಮನ್ವೆಲ್ತ್ ಕ್ರೀಡಾಕೂಟದ ವೇಳೆ ಅಥ್ಲೀಟ್ಗಳು ಮತ್ತು ಅಧಿಕಾರಿಗಳು ಸಾಕಷ್ಟು ಮೋಜು ಅನುಭವಿಸಿದ್ದಾರೆ ಎಂಬುದು ಇದೀಗ ಬಹಿರಂಗವಾಗಿದೆ. ನವದೆಹಲಿಯಲ್ಲಿ ನಡೆದ 11 ದಿನಗಳ ಕೂಟದ ವೇಳೆ ಪ್ರತಿದಿನ ಸರಾಸರಿ 640 ಕಾಂಡೋಮ್ಗಳು ಬಿಕರಿಯಾಗಿವೆ! ದೆಹಲಿ ಸರ್ಕಾರದ ಅಂಕಿಅಂಶ ಈ ಮಾಹಿತಿ ನೀಡಿದೆ.

ಕೂಟದ ವೇಳೆ ದೆಹಲಿ ಏಡ್ಸ್ ನಿಯಂತ್ರಣ ಸೊಸೈಟಿಯು ಕ್ರೀಡಾಗ್ರಾಮದಲ್ಲಿ ಹಲವು ಕಾಂಡೋಮ್ ವಿತರಣಾ ಯಂತ್ರಗಳನ್ನು ಸ್ಥಾಪಿಸಿದ್ದವು. ಅಥ್ಲೀಟ್ಗಳು ಮತ್ತು ಅಧಿಕಾರಿಗಳಲ್ಲಿ ‘ಸುರಕ್ಷಿತ ಲೈಂಗಿಕತೆ’ಯ ಬಗ್ಗೆ ಜಾಗೃತಿ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿತ್ತು.

ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರವಾಗಿ ದೆಹಲಿ ಸರ್ಕಾರದ ಆರೋಗ್ಯ ಇಲಾಖೆ ಈ ವಿವರ ನೀಡಿದೆ. ಪ್ರತಿದಿನ 640ರ ಸರಾಸರಿಯಂತೆ ಕೂಟದ ಅವಧಿಯಲ್ಲಿ ಒಟ್ಟಾರೆ 7680 ಕಾಂಡೋಮ್ಗಳು ಬಿಕರಿಯಾಗಿವೆ.

ಕ್ರೀಡಾಗ್ರಾಮದಲ್ಲಿ 77 ರಾಷ್ಟ್ರಗಳ ಅಥ್ಲೀಟ್ಗಳು ಮತ್ತು ಅಧಿಕಾರಿಗಳು ಒಳಗೊಂಡಂತೆ ಒಟ್ಟು 6 ಸಾವಿರ ಮಂದಿ ತಂಗಿದ್ದರು. ಇದಲ್ಲದೆ ದೆಹಲಿಯ ಪ್ರಮುಖ ಹೋಟೆಲ್, ಕ್ರೀಡಾಂಗಣ ಮತ್ತು ಮಾರುಕಟ್ಟೆ ಒಳಗೊಂಡಂತೆ ವಿವಿಧ ಕಡೆ ಕೂಟದ ಅವಧಿಯಲ್ಲಿ ಕಾಂಡೋಮ್ ಮಾರಾಟ ಯಂತ್ರಗಳನ್ನು ಸ್ಥಾಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.