ಶುಕ್ರವಾರ, ಜನವರಿ 27, 2023
18 °C

ಕಾಯಸ್ಥ ಆಹಾರದ ಸವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಯಸ್ಥ ಆಹಾರದ ಸವಿ

ಕಾಯಸ್ಥ ಎನ್ನುವುದು ವೈವಿಧ್ಯಮಯ ಶ್ರೀಮಂತ ಸಂಸ್ಕೃತಿ ಹೊಂದಿದ ಉತ್ತರ ಭಾರತದ ಪ್ರಮುಖ ಸಮುದಾಯ. ಕಾಯಸ್ಥರು ಮೂಲತಃ ರಾಜ ಮಹಾರಾಜರ ಕಾಲದಲ್ಲಿ ಅವರ ಆಡಳಿತ ವ್ಯವಸ್ಥೆಯಲ್ಲಿ ಮಂತ್ರಿಗಳಾಗಿ, ಇತರ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈಗಲೂ ಆಡಳಿತ ಸೇವೆಯೇ ಅವರ ವೃತ್ತಿಯಾಗಿ ಮುಂದುವರಿದಿದೆ.ಮಾಥುರ್, ಭಟ್ನಾಗರ್, ನಿಗಮ್ ಮತ್ತಿತರ ಅಡ್ಡ ಹೆಸರುಗಳನ್ನು ಒಳಗೊಂಡ ಕಾಯಸ್ಥರ ಆಹಾರ ಪದ್ಧತಿ, ಅಡುಗೆ ವಿಧಾನಗಳಲ್ಲಿ ಕೂಡ ಮೊಘಲ್ ಮತ್ತಿತರ ಶೈಲಿಗಳ ಪ್ರಭಾವ ಗುರುತಿಸಬಹುದು.ಸ್ಯಾಂಕಿ ರಸ್ತೆಯ ವಿಂಡ್ಸರ್ ಮ್ಯಾನರ್ ಭಾರತದ ವಿವಿಧ ಕಡೆಯ ಆಹಾರಗಳನ್ನು ಬೆಂಗಳೂರಿಗರಿಗೆ ಪರಿಚಯಿಸುತ್ತಿದ್ದು, ಶನಿವಾರದಿಂದ ಫೆ. 6ರ ವರೆಗೆ ಪ್ರತಿ ರಾತ್ರಿ ರಾಜ್ ಪೆವಿಲಿಯನ್ ರೆಸ್ಟೊರೆಂಟ್‌ನಲ್ಲಿ ಕಾಯಸ್ಥ ಆಹಾರೋತ್ಸವ ಆಯೋಜಿಸುತ್ತಿದೆ. ಹೆಸರಾಂತ ಪಾಕ ತಜ್ಞೆ ಅನೂತಿ ವಿಶಾಲ್ ಅವರ ಕೈಯಲ್ಲಿ ಸಿದ್ಧವಾದ ಮಾಥುರ್ ಶೈಲಿಯ ಕಾಯಸ್ಥ ಅಡುಗೆ ಹೊಟ್ಟೆ ತಣಿಸಲಿದೆ.ಇಲ್ಲಿ ಬಾದಾಮ್ ಪಸಂದೆಯಿಂದ ಹಿಡಿದು ಟಕೆ ಪೈಸೆ, ಘಮಘಮಿಸುವ ಯಾಕ್ನಿ ಪಲಾವ್, ಬಾಯಲ್ಲಿ ನೀರೂರಿಸುವ ಕಚ್ಛೆ ಖೀಮೇಕೇ ಕೋಫ್ತೆ, ಶಮ್ಮಿ ಕಬಾಬ್, ಬಗೆಬಗೆಯ ಉಪ್ಪಿನಕಾಯಿಗಳು, ರೈತಾ, ಪೂರಿ, ಡಮ್ ಕಾ ಕಥಲ್, ಮೇವಾ ಕಿ ಆಲೂ, ಮಖನ್ ಕಿ ಖೀರ್ ಹೀಗೆ ಬಗೆ ಬಗೆಯ ಅಡುಗೆ ಸವಿಯಬಹುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.