ಭಾನುವಾರ, ಜೂನ್ 20, 2021
21 °C

ಕಾರವಾರದಲ್ಲಿ ನೌಕಾಪಡೆಯ ವಾಯು ನೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತೀಯ ನೌಕಾಪಡೆಯು ದೇಶದ ಪಶ್ಚಿಮ ಕರಾವಳಿಯಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸಮರ ಮತ್ತು ಕಣ್ಗಾವಲು ವಿಮಾನಗಳ ಕಾರ್ಯನಿರ್ವಹಣೆಗಾಗಿ ಕಾರವಾರದಲ್ಲಿ ಹೊಸ ನೌಕಾ ವಾಯು ನೆಲೆಯನ್ನು ಸ್ಥಾಪಿಸಲು ಯೋಜಿಸಿದೆ.ಸೇನಾ ವಿಮಾನಗಳ ಕಾರ್ಯನಿರ್ವಹಣೆ ಮತ್ತು ನೆಲೆಗಾಗಿ ಕಾರವಾರದಲ್ಲಿ ನೌಕಾ ವಾಯುನೆಲೆಯನ್ನು ಸ್ಥಾಪಿಸಲು ಯೋಜಿಸಲಾಗಿದೆ ಎಂದು ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಇಲ್ಲಿ ತಿಳಿಸಿದರು.ಸೀಬರ್ಡ್ ಯೋಜನೆಯ ಹಂತ 2ರ ಅಡಿ ನೌಕಾಪಡೆಯ ರೂ 10 ಸಾವಿರ ಕೋಟಿಗಳ ಯೋಜನೆಯ ಭಾಗವಾಗಿ ಈ ನೌಕಾ ವಾಯು ನೆಲೆಯನ್ನು ಸ್ಥಾಪಿಸಲಾಗುತ್ತದೆ ಎಂದು ಅವರು ಹೇಳಿದರು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.