ನವದೆಹಲಿ (ಪಿಟಿಐ): ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ದೇಶದ ಕಾರು ರಫ್ತು ವಹಿವಾಟು ಶೇ 22ರಷ್ಟು ಪ್ರಗತಿ ದಾಖಲಿದೆ.

ಆಗಸ್ಟ್ ತಿಂಗಳಲ್ಲಿ ಕಾರುಗಳ ಮಾರಾಟ ಗಣನೀಯವಾಗಿ ಕುಸಿದಿದೆ. ಆದರೆ, ರಫ್ತು ವಹಿವಾಟು ಚೇತರಿಕೆ ಕಂಡಿರುವುದು ಕಂಪೆನಿಗಳಿಗೆ ಮಾರುಕಟ್ಟೆ ಸಮತೋಲನ ಕಾಯ್ದುಕೊಳ್ಳಲು ಸಹಾಯಕವಾಗಲಿದೆ ಎಂದು `ಭಾರತೀಯ ವಾಹನ ತಯಾರಕರ ಸಂಘ~ ಅಭಿಪ್ರಾಯಪಟ್ಟಿದೆ.

ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಒಟ್ಟು 2,17,409 ಕಾರುಗಳು ರಫ್ತಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 1,77,634ರಷ್ಟಿತ್ತು. ನಿಸಾನ್ ಕಂಪೆನಿಯ ರಫ್ತು ವಹಿವಾಟು ಚೇತರಿಸಿಕೊಂಡಿದೆ. ಫೋರ್ಡ್ ಇಂಡಿಯಾ ರಫ್ತು ಮೂರು ಪಟ್ಟು ವೃದ್ಧಿ ದಾಖಲಿಸಿದೆ. ನಿಸಾನ್ `ಮಿಕ್ರಾ~ ಕಾರುಗಳಿಗೆ ಸಾಗರೋತ್ತರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಯೂರೋಪ್ ಮಾರುಕಟ್ಟೆಗೆ 42,540 `ಮಿಕ್ರಾ~ ಕಾರುಗಳನ್ನು ನಿಸಾನ್ ರಫ್ತು ಮಾಡಿದೆ. ಕಳೆದ ವರ್ಷ ಫೋರ್ಡ್ ಇಂಡಿಯಾ 3,168 `ಫಿಗೊ~ ಕಾರುಗಳನ್ನು ರಫ್ತು ಮಾಡಿತ್ತು. ಈ ವರ್ಷ ಈ ಸಂಖ್ಯೆ 10,118ಕ್ಕೆ ಏರಿಕೆ ಕಂಡಿದೆ.

ದೇಶದ ಅತಿ ದೊಡ್ಡ ಕಾರು ರಫ್ತು ಕಂಪೆನಿ ಹುಂಡೈ ಮೋಟಾರ್ ಶೇ 1.77ರಷ್ಟು ರಫ್ತು ಪ್ರಗತಿ ದಾಖಲಿಸಿದೆ. ಕಳೆದ ವರ್ಷದ 1,05,699 ಕಾರುಗಳಿಗೆ ಹೋಲಿಸಿದರೆ ಪ್ರಸಕ್ತ 1,07,572 ಕಾರುಗಳನ್ನು ರಫ್ತು ಮಾಡಿದೆ. ಮಾರುತಿ ಸುಜುಕಿ ರಫ್ತು ಶೇ 14ರಷ್ಟು ಕುಸಿದಿದೆ. ಒಟ್ಟು 53,362 ಕಾರುಗಳನ್ನು ಮಾರುತಿ ರಫ್ತು ಮಾಡಿದೆ. ಟಾಟಾ ಮೋಟಾರ್ಸ್ ರಫ್ತು ವಹಿವಾಟು ಶೇ 24ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ 3,733 ಕಾರುಗಳು ರಫ್ತಾದರೆ, ಪ್ರಸಕ್ತ ಅವಧಿಯಲ್ಲಿ ಇದು 2,806ಕ್ಕೆ ಇಳಿಕೆ ಕಂಡಿದೆ.

ಹೊಸ ಮಾರುಕಟ್ಟೆ ಅನ್ವೇಷಣೆ: ಯೂರೋಪ್ನಲ್ಲಿ ಸಾಲದ ಬಿಕ್ಕಟ್ಟು ಮುಂದುವರೆದಿರುವುದರಿಂದ ಭಾರತೀಯ ವಾಹನ ತಯಾರಿಕಾ ಕಂಪೆನಿಗಳು ಹೊಸ ಮಾರುಕಟ್ಟೆಗಳ ಅನ್ವೇಷಣೆಯಲ್ಲಿವೆ. ಇತ್ತೀಚೆಗೆ ಫೋರ್ಡ್ ಇಂಡಿಯಾ ಮೆಕ್ಸಿಕೊ, ದಕ್ಷಿಣ ಆಫ್ರಿಕಾ ಮತ್ತು ನೇಪಾಳ ಮಾರುಕಟ್ಟೆಗಳಿಗೆ ಕಾರುಗಳನ್ನು ರಫ್ತು ಮಾಡತೊಡಗಿದೆ. ಆಸ್ಟ್ರೇಲಿಯಾ, ಹಾಂಕಾಂಗ್, ತೈವಾನ್ ಮಾರುಕಟ್ಟೆಗಳತ್ತ ಮಾರುತಿ ಸುಜುಕಿ ದೃಷ್ಟಿ ನೆಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.