ಬ್ರಹ್ಮಾವರ: ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ರೈತರ, ಕಾರ್ಮಿಕರ ಹಾಗೂ ಸಹಕಾರಿ ಬ್ಯಾಂಕ್ಗಳ ಬಾಕಿ ಹಣವನ್ನು ಪಾವತಿ ಮಾಡುವ ಸಲುವಾಗಿ ಜಿಲ್ಲೆಯ ಶಾಸಕರನ್ನು ಜೊತೆಯಾಗಿ ಮುಖ್ಯಮಂತ್ರಿಗಳ ಬಳಿ ಕರೆದುಕೊಂಡು ಹೋಗಿ ಚರ್ಚಿಸಲಾಗುವುದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೋಟದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಬೇಕು. ಕಾರ್ಮಿಕರಿಗೆ ನೀಡಬೇಕಾದ ಬಾಕಿ ಸಂಬಳದ ಕುರಿತಾಗಿಯೂ ಚರ್ಚೆ ನಡೆದಿದ್ದು, ಪ್ರಥಮ ಹಂತದಲ್ಲಿ ರೈತರ, ಕಾರ್ಮಿಕರ, ಸಹಕಾರಿ ಬ್ಯಾಂಕ್ಗಳ ಬಾಕಿ ಹಣವನ್ನು ಪಾವತಿ ಮಾಡುವ ಬಗ್ಗೆ ಚರ್ಚಿಸಲಾಗುವುದು ಎಂದರು.

`ಖಾತೆಗೆ ಸಂಬಂಧಿಸಿದಂತೆ ಎಲ್ಲಾ ಮಟ್ಟದ ಹಿರಿಯ ಆಧಿಕಾರಿಗಳನ್ನು ಕರೆದು ಪ್ರಥಮ ಸುತ್ತಿನ ಮಾತುಕತೆಯನ್ನು ನಡೆಸಿದ್ದೇನೆ. ಖಾತೆಯಲ್ಲಿ ಇರುವ ಸಮಸ್ಯೆಗಳು, ಆಗಬೇಕಾದ ಅಭಿವೃದ್ಧಿ, ಇರುವ ಸಮಸ್ಯೆಗಳನ್ನು ಯಾವ ರೀತಿಯಲ್ಲಿ ಪರಿಹರಿಸಿಕೊಳ್ಳಬೇಕು ಎಂಬುದಾಗಿ ಮಾಹಿತಿಗಳನ್ನು ಸಂಗ್ರಹಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಬಂದರು ಹಾಗೂ ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಕೆಲಸಕಾರ್ಯಗಳು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕು ಎಂಬ ಕನಸನ್ನು ಕಂಡಿದ್ದೇನೆ.

ನನ್ನ ಹಿರಿಯರಾದ ಡಾ.ವಿ.ಎಸ್ ಆಚಾರ್ಯ ಅವರ ಅನುಭವದ ನೆಲೆಯಲ್ಲಿ ಅವರು ಮಾಡಿದ ಮಾರ್ಗದರ್ಶನದ ಅಡಿಯಲ್ಲಿ ಎರಡೂ ಖಾತೆಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತೇನೆ ಎಂಬ ವಿಶ್ವಾಸ ಇದೆ. ರಾಜಕೀಯ ಸಂಘಟನೆಯಲ್ಲಿ ರಾಜ್ಯದ ಜನತೆಗೆ ಒಳಿತಾಗುವ ಕೆಲಸಗಳನ್ನು ಮಾಡಬಹುದು ಎಂಬುದನ್ನು ನಂಬಿದ್ದೇನೆ~ ಎಂದರು.

`ಕೆಲವು ಕಡೆಗಳಲ್ಲಿ ಬಂದರುಗಳ ನಿರ್ಮಾಣ, ಜೆಟ್ಟಿಗಳ ನಿರ್ಮಾಣದ ಭಾಗಶಃ ಕೆಲಸ ಆಗಿರುವಂತದ್ದು, ಹೂಳೆತ್ತುವ ಸಮಸ್ಯೆ, ತಡೆಗೋಡೆ ನಿರ್ಮಾಣ ಸಮಸ್ಯೆ ಎಲ್ಲವನ್ನೂ ಒಂದು ಸುತ್ತಿನಲ್ಲಿ ಅಧ್ಯಯನ ಮಾಡಿದ್ದು, ಕೆಲವು ಕಾಲಾವಕಾಶ ಬೇಕಿದೆ. ಯಾವ ರೀತಿಯಲ್ಲಿ ಈ ಕೆಲಸ ಕಾರ್ಯಗಳನ್ನು ಸರ್ಕಾರದ ಸಹಾಯದೊಂದಿಗೆ ಹೇಗೆ ನಿರ್ವಹಿಸಬೇಕು, ಮೀನುಗಾರರಿಗೆ ಏನೆಲ್ಲಾ ಸಮಸ್ಯೆಗಳಿವೆ ಎಂಬುದನ್ನು ಪರೀಶೀಲಿಸಿ ಪ್ರಾಮಾಣಿಕವಾಗಿ ಇದನ್ನು ನಿರ್ವಹಿಸಲು ಪ್ರಯತ್ನ ಮಾಡುತ್ತೇನೆ~ ಎಂದು ತಿಳಿಸಿದರು.

ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ರಾಜೀನಾಮೆ ಕುರಿತಾಗಿ ಕೇಳಿದ ಪ್ರಶ್ನೆಗೆ `ಹಾಲಾಡಿಯವರು ರಾಜಕೀಯ ಪಕ್ಷದ ಮುಖಂಡರಾಗಿದ್ದು, ಅವರು ಹಾಗೂ ನನ್ನ ನಡುವೆ ನಿಕಟವಾದ ಸಂಪರ್ಕ ಇದ್ದೇ ಇದೆ. ಅವರು ಸಾತ್ವಿಕ ಸ್ವಭಾವದ ಅಪರೂಪದ ರಾಜಕಾರಿಣಿ. ಯಾರು ಏನೇ ಹೇಳಿದರೂ ಅವರಿಗೆ ಮನಸ್ಸಿಗೆ ನೋವಾಗಿದೆ ಅದು ಮಾತ್ರ ಸತ್ಯ. ಅದಕ್ಕಾಗಿ ನಾನು ಈಗಾಗಲೇ ರಾಜ್ಯ ಹಾಗೂ ರಾಷ್ಟ್ರೀಯ ಹಂತದ ಪಕ್ಷದ ಮುಖಂಡರೊಡನೆ ಚರ್ಚೆ ನಡೆಸಿದ್ದು, ಹಾಲಾಡಿಯವರ ಮನಸ್ಸಿಗೆ ಆದ ನೋವನ್ನು ನಿವಾರಿಸುವಂತೆ ಕೇಳಿಕೊಂಡಿದ್ದೇನೆ.

ಜೊತೆಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರು ಅವರೊಂದಿಗೆ ನಿಖಟವಾದ ಸಂಪರ್ಕದಲ್ಲಿದ್ದಾರೆ. ಶೀಘ್ರದಲ್ಲಿಯೇ ಈ ಸಮಸ್ಯೆಗೆ ಪರಿಹಾರ ದೊರೆಯಲಿದ್ದು ಮುಂದೆ ಅವರು ನಮಗೆ ಹಾಗೂ ಪಕ್ಷಕ್ಕೆ ಮಾರ್ಗದರ್ಶನ ಮಾಡಲಿದ್ದಾರೆ~ ಎಂದರು.

ನಾಗಾರ್ಜುನ ಸಮಸ್ಯೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು `ವಿದ್ಯುತ್ ಉತ್ಪಾದನಾ ಘಟಕದಲ್ಲಿ ಪರಿಸರ ಮಾಲಿನ್ಯ ಇರುವುದಂತೂ ಸತ್ಯ. ತುರ್ತಾಗಿ ಮಾಡಬೇಕಾದ ಕೆಲಸವೆಂದರೆ ಕಟ್ಟುನಿಟ್ಟಾಗಿ ಅಲ್ಲಿರುವ ಪರಿಸರ ಮಾಲಿನ್ಯವನ್ನು ನಿಯಂತ್ರಣ ಮಾಡಲು ಸಾಧ್ಯವಾದರೆ ಮಾತ್ರ ಅಲ್ಲಿನ ಜನರಿಗೆ ನಿರಾಳವಾಗಿ ಬದುಕಲು ಸಾಧ್ಯ. ಅದಕ್ಕಾಗಿ ಸಂಬಂಧಪಟ್ಟ ಮಂತ್ರಿಗಳೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಲಾಗುವುದು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.