ಮಂಗಳವಾರ, ಮೇ 18, 2021
23 °C

ಕಾರ್ಮಿಕ ನಾಯಕ ಕೆ.ರಾಮದಾಸ್ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರಂ (ಪಿಟಿಐ): ಕೇರಳದ ಮಾಜಿ ಶಾಸಕ ಹಾಗೂ ಹಿರಿಯ ಕಾರ್ಮಿಕ ನಾಯಕ ಕೋಸಲ ರಾಮದಾಸ್ (86) ಸೋಮವಾರ ರಾತ್ರಿ ನಿಧನರಾದರು.ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ರಾಮದಾಸ್ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.1967ರಲ್ಲಿ ಕೇರಳದ ತಿರುವನಂತ ಪುರಂ ಜಿಲ್ಲೆಯ ಅತ್ತಿನ್‌ಗಲ್ ಕ್ಷೇತ್ರದ ಸಿಪಿಎಂ  ಶಾಸಕರಾಗಿ ರಾಮದಾಸ್ ಆಯ್ಕೆಯಾಗಿದ್ದರು. ಆದರೆ, ನಕ್ಸಲ್ ಪರವಾಗಿದ್ದ ಅವರ ಧೋರಣೆಯನ್ನು ಪಕ್ಷ ಖಂಡಿಸಿತ್ತು. ಈ  ಹಿನ್ನೆಲೆಯಲ್ಲಿ ರಾಮದಾಸ್ ಶಾಸಕ ಸ್ಥಾನವನ್ನು ತ್ಯಜಿಸಿದ್ದರು.ಕೆಲಕಾಲದ ನಂತರ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣ ನಕ್ಸಲ್ ಸಂಘಟನೆಯಿಂದ ಅವರು ಹೊರ ಬಂದಿದ್ದರು.  ನಂತರದ ದಿನಗಳಲ್ಲಿ ರಾಮದಾಸ್ ಅವರು, ಯಾವುದೇ ರಾಜಕೀಯ ಪಕ್ಷ ಸೇರದೇ ಸ್ವತಂತ್ರವಾಗಿ ಕಾರ್ಮಿಕ ಸಂಘಟನೆಯಲ್ಲಿ ತೊಡಗಿದ್ದರು. ಸಿಪಿಎಂನಲ್ಲಿದ್ದ ಸಮಯದಲ್ಲಿ ಅವರು ಕೆಲಕಾಲ ತಿರುವನಂತಪುರಂದ ಮೇಯರ್ ಆಗಿಯೂ ಕಾರ್ಯನಿರ್ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.